ನವದೆಹಲಿ: ಉಗ್ರರು ಮತ್ತು ಪಾತಕಿಗಳ ನಂಟು ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) 12 ಆರೋಪಿಗಳ ವಿರುದ್ಧ ಮಂಗಳವಾರ ಆರೋಪಪಟ್ಟಿ ಸಲ್ಲಿಸಿದೆ. ಖಾಲಿಸ್ತಾನ ಪರ ಸಂಘಟನೆಗಳು ಮತ್ತು ಪಾಕಿಸ್ತಾನದ ಕೆಲವು ಸಂಚುಕೋರರೊಂದಿಗೆ ಆರೋಪಿಗಳು ಸಂಪರ್ಕ ಹೊಂದಿದ್ದರು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
'ಖಾಲಿಸ್ತಾನ್ ಟೈಗರ್ ಫೋರ್ಸ್, ಉಗ್ರನಾದ ಅರ್ಶದೀಪ್ ಸಿಂಗ್ ಗಿಲ್ ಜತೆಗೆ ಆರೋಪಿಗಳು ಸಂಪರ್ಕ ಹೊಂದಿದ್ದರು. ಈ 12 ಆರೋಪಿಗಳು ಅಲ್ಲದೆ, ಇನ್ನೂ 10 ಮಂದಿಯ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳು ದೇಶದ ಕೆಲವು ನಾಯಕರು, ಉದ್ಯಮಿ ಗಳು ಮತ್ತು ಗಾಯಕರನ್ನು ಕೊಲ್ಲಲು ಸಂಚು ರೂಪಿಸಿದ್ದರು. ಹಣ ವಸೂಲಿ ಮಾಡಲೂ ಸಂಚು ರೂಪಿಸಿದ್ದರು' ಎಂದು ಎನ್‌ಐಎ ಮೂಲಗಳು ಹೇಳಿವೆ.