ಕೊಚ್ಚಿ: ತೊಡುಪುಳ ಕೈ ಕತ್ತರಿಸಿದ ಪ್ರಕರಣದ ಪ್ರಮುಖ ಶಂಕಿತನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್‍ಐಎ ಘೋಷಿಸಿದೆ.
ಪ್ರಕರಣದ ಮೊದಲ ಆರೋಪಿ ಎರ್ನಾಕುಳ|ಂ ಒಟಕಲಿ ಮೂಲದ ಸವಾದ್ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಎನ್ ಐಎ ಪ್ರಕಟಿಸಿದೆ.
2010ರಲ್ಲಿ ತೊಡುಪುಳ ನ್ಯೂಮನ್ ಕಾಲೇಜಿನ ಶಿಕ್ಷಕ ಪ್ರೊಫೆಸರ್ ಟಿಜೆ ಜೋಸೆಫ್ ಅವರ ಕೈಯನ್ನು ಕತ್ತರಿಸಲಾಗಿತ್ತು. ಘಟನೆಯ ನಂತರ ಪ್ರಕರಣದ ಮೊದಲ ಆರೋಪಿ ಸವಾದ್ ತಲೆಮರೆಸಿಕೊಂಡಿದ್ದಾನೆ. 11 ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. 13 ವರ್ಷ ಕಳೆದರೂ ಆತನನ್ನು ಹಿಡಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಎನ್‍ಐಎ ಬಹುಮಾನ ಘೋಷಿಸಿದೆ.
ಜೋಸೆಫ್ ಮಾಸ್ತರ್ ಕೈಕತ್ತರಿಸಿದ ಪ್ರಕರಣ: 13 ವರ್ಷಗಳ ನಂತರವೂ ಪತ್ತೆಯಾಗದ ಆರೋಪಿ: ಆರೋಪಿ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ ಎನ್‍ಐಎ
0
ಮಾರ್ಚ್ 11, 2023