ಕಾಸರಗೋಡು :ನನ್ನ ಕೇರಳ ವಸ್ತುಪ್ರದರ್ಶನ ಮತ್ತು ಮಾರುಕಟ್ಟೆ ಮೇಳ 2023ರ ಭಾಗವಾಗಿ ಮಾಹಿತಿ
ಮತ್ತು ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾ ವಾರ್ತಾ ಕಛೇರಿ ವತಿಯಿಂದ ಕಾಲೇಜು
ವಿದ್ಯಾರ್ಥಿಗಳಿಗೆ ಕವಿತಾ ಪಾರಾಯಣ ಮಲಯಾಳಂ / ಕನ್ನಡ ಕಂಠಪಾಠ ಸ್ಪರ್ಧೆ ಏಪ್ರಿಲ್ 17
ರಂದು ಬೆಳಗ್ಗೆ 10 ಗಂಟೆಗೆ ಮತ್ತು ಸರಕಾರಿ ನೌಕರರಿಗೆ ಕವಿತಾ ಪಾರಾಯಣ ಮಲಯಾಳಂ / ಕನ್ನಡ
ಕಂಠಪಾಠ ಸ್ಪರ್ಧೆಯು ಏಪ್ರಿಲ್ 18 ರಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡು ಜಿಲ್ಲಾ
ಮಾಹಿತಿ ಕಛೇರಿಯ ಪ್ರೆಸ್ ಕ್ಲಬ್ ಚೇಂಬರ್ ನಲ್ಲಿ ನಡೆಯಲಿದೆ. ಭಾಗವಹಿಸಲು ಆಸಕ್ತಿ
ಇರುವವರು ಏಪ್ರಿಲ್ 15 ರ ಮೊದಲು prdcontest@gmail.com ಇಮೇಲ್ ಮೂಲಕ ನೋಂದಾಯಿಸಿಕೊಳ್ಳಬೇಕು.
ದೂರವಾಣಿ 04994 255145.