ಕಾಸರಗೋಡು: ಕಾಸರಗೋಡು ಕೋಡೋತ್ ನಲ್ಲಿ ಶತಮಾನಗಳಷ್ಟು ಹಳೆಯದಾದ ನೆಲಮಾಳಿಗೆ ಪತ್ತೆಯಾಗಿದೆ. ಕೋಡೋತ್ ಭಗವತಿ ದೇವಸ್ಥಾನದ ಬಳಿ ಈ ನೆಲಮಾಳಿಗೆ ಪತ್ತೆಯಾಗಿದೆ.
ಜೆಸಿಬಿ ಬಳಸಿ ಉದ್ಯಾನವನ್ನು ಸ್ವಚ್ಛಗೊಳಿಸುವಾಗ ನೆಲಮಾಳಿಗೆ ಗಮನಕ್ಕೆ ಬಂದಿದೆ. ನೆಲಮಾಳಿಗೆ ಮುಂಭಾಗದಲ್ಲಿ, ಮೂರು ಹಂತದ ಕೆತ್ತನೆಯ ಗೇಟ್ ಮತ್ತು ಮೆಟ್ಟಿಲುಗಳು ಕಂಡುಬಂದಿವೆ. ಮೇಲ್ಭಾಗದಲ್ಲಿ ವೃತ್ತಾಕಾರದ ರಂಧ್ರವಿದೆ. ಒಬ್ಬ ವ್ಯಕ್ತಿ ಸಂಚರಿಸುವಷ್ಟು ಗಾತ್ರದ ರಂಧ್ರವನ್ನು ವಿನ್ಯಾಸಗೊಳಿಸಲಾಗಿದೆ.
ನೆಲಮಾಳಿಗೆ 1800 ವರ್ಷಗಳಿಗಿಂತಲೂ ಹಳೆಯದು. ಆದರೆ ಮಣ್ಣು ತುಂಬಿರುವುದರಿಂದ ನೆಲಮಾಳಿಗೆಯೊಳಗೆ ಏನಿದೆ ಎಂಬುದು ಸ್ಪಷ್ಟವಾಗಿಲ್ಲ. ಮಹಾಶಿಲೆ ಸ್ಮಾರಕವಾಗಿರುವುದರಿಂದ ಅದನ್ನು ಸಂರಕ್ಷಿಸುವ ಚಿಂತನೆ ಇದೆ. ಈ ಹಿಂದೆಯೂ ಜಿಲ್ಲೆಯ ಹಲವೆಡೆ ನೆಲಮಾಳಿಗೆಗಳು ಕಂಡುಬಂದಿದ್ದವು.
ನಂಬಿಕೆಯ ಭಾಗವಾಗಿ ವಿವಿಧ ಆಕಾರಗಳು ಮತ್ತು ಗಾತ್ರಗಳ ಮಣ್ಣು-ತಾಮ್ರದ ಪಾತ್ರೆ, ಆಯುಧಗಳನ್ನು ಅಡಗಿಸಿಡಲು ಮೊದಲಾದ ಉದ್ದೇಶಗಳಿಗೆ ಪ್ರಾಚೀನ ಕಾಲದಲ್ಲಿ ನೆಲಮಾಳಿಗೆ ನಿರ್ಮಿಸಲಾಗುತ್ತಿತ್ತು ಎನ್ನಲಾಗಿದೆ. ಇವನ್ನು ಮುನಿಗುಹೆ, ನಿಧಿಗುಂಡಿ, ಮೂಡಲಪೆಟ್ಟಿ ಮತ್ತು ಪಿರಂಗಿ ಗುಹೆ ಮುಂತಾದ ಹಲವು ಹೆಸರುಗಳಿಂದ ಕರೆಯುತ್ತಾರೆ.
ಕಾಸರಗೋಡಲ್ಲಿ 1800 ವರ್ಷ ಹಳೆಯ ನೆಲಮಾಳಿಗೆ ಪತ್ತೆ: ಮಹಾಶಿಲಾ ಸ್ಮಾರಕ ರಕ್ಷಣೆಗೆ ನಿರ್ಧಾರ
0
ಮಾರ್ಚ್ 24, 2023