ಪೆರ್ಲ: ನೂರು ಶೇಖಡಾ ತೆರಿಗೆ ಸಂಗ್ರಹದ ಅಭಿಯಾನದಂಗವಾಗಿ ಎಣ್ಮಕಜೆ ಗ್ರಾಮ ಪಂಚಾಯಿತಿನಲ್ಲಿ ಮಾ.19 ಹಾಗೂ 26 ಭಾನುವಾರದ ರಜಾ ದಿನದಂದು ವ್ಯವಸ್ಥೆ ಮಾಡಲಾಗಿದ್ದು ಜನತೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಕಟ್ಟಡ ತೆರಿಗೆ ಸೇರಿದಂತೆ ಸಂಪೂರ್ಣ ತೆರಿಗೆ ವಸೂಲಿಯ “ನೂರು ಶೇಖಡ ನಂ.1 ಎಣ್ಮಕಜೆ ಅಭಿಯಾನ” ನಡೆಸಲಾಗುತ್ತಿದೆ. ಕಟ್ಟಡ ತೆರಿಗೆ ಬಾಕಿ ಇರಿಸಿ ಸರಕಾರಿ
ಕರ್ತವ್ಯಲೋಪ ಎಸಗಿದವರ ವಿರುದ್ಧ ಪ್ರಾಸಿಕ್ಯೂಷನ್ ಪ್ರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು ಇದನ್ನು ಹೊರತುಪಡಿಸಲು ಕಟ್ಟಡ ತೆರಿಗೆ ಪಾವತಿ ಬಾಕಿ ಇರುವವರು ಶೀಘ್ರವೇ ತೆರಿಗೆ ಪಾವತಿಸುವಂತೆ ಎಣ್ಮಕಜೆ ಗ್ರಾಮ ಪಂಚಾಯತು ಕಾರ್ಯದರ್ಶಿ ಸುನಿಲ್ ಆರ್. ತಿಳಿಸಿದ್ದಾರೆ.
ಎಣ್ಮಕಜೆಯಲ್ಲಿ ನೂರು ಶೇ. ತೆರಿಗೆ ಸಂಗ್ರಹಕ್ಕಾಗಿ ಮಾ.19, 26ರಂದು ಕಚೇರಿ ಕಾರ್ಯ ಪ್ರವೃತ್ತಿ
0
ಮಾರ್ಚ್ 18, 2023
Tags