ತಿರುವನಂತಪುರಂ: ಬಿಲ್ ಪಾವತಿಸದವರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಈ ನಿಟ್ಟಿನಲ್ಲಿ ವಿದ್ಯುತ್ ಸಚಿವರು ಕೆಎಸ್ ಇಬಿಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಪಾವತಿಸದವರ ಫೆÇೀನ್‍ಗೆ ಪಾವತಿ ಮಾಡದ ಸಂದೇಶಗಳನ್ನು ನಿರಂತರ ಕಳಿಸಲಾಗುವುದು. ಅಲ್ಲದೆ ಬಿಲ್ ಪಾವತಿಸದವರ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಕೆಲಸದ ದಿನದಂದು ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿಸುವರು. ವಿದ್ಯುತ್ ಕಡಿತಗೊಂಡರೆ, ನೋಂದಾಯಿತ ಪೋನ್ ಸಂಖ್ಯೆಯ ಮೂಲಕ ಗ್ರಾಹಕರಿಗೆ ಮಾಹಿತಿಯನ್ನು ತಿಳಿಸಲಾಗುತ್ತದೆ.
ಕೊಲ್ಲಂನಲ್ಲಿ ಐಸ್ ಕ್ರೀಮ್ ಪಾರ್ಲರ್‍ನ ಪ್ಯೂಸ್ ಅನ್ನು ಎಚ್ಚರಿಕೆ ನೀಡದೆ ಹಠಾತ್ ವಿಚ್ಚೇದಿಸಿದ ಘಟನೆಯ ನಂತರ ಹೊಸ ನಿಯಮಾವಳಿಗಳನ್ನು ಹೊರಡಿಸಲಾಗಿದೆ.
ಬಿಲ್ ಪಾವತಿಸದವರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಹೊಸ ಮಾರ್ಗಸೂಚಿ: ಮಧ್ಯಾಹ್ನ 1 ಗಂಟೆಯವರೆಗೆ ಸಂಪರ್ಕ ವಿಚ್ಚೇದನ
0
ಮಾರ್ಚ್ 21, 2023