HEALTH TIPS

ನನ್ನ ಕೇರಳ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳ 2ನೇ ಆವೃತ್ತಿ 2023 ಮೇ 3 ರಿಂದ 9 ರ ವರೆಗೆ ಕಾಸರಗೋಡು ಜಿಲ್ಲೆಯಲ್ಲಿ: ಸರಕಾರದ ಅಭಿವೃದ್ಧಿ ಕಲ್ಯಾಣ ಸಾಧನೆಗಳು ಮತ್ತು ಕಲ್ಯಾಣ ಯೋಜನೆಗಳ ಪ್ರಚಾರಕ್ಕಾಗಿ ಮೇಳ: ಸಚಿವ ಅಹಮ್ಮದ್ ದೇವರ ಕೋವಿಲ್



                 ಕಾಸರಗೋಡು:: ರಾಜ್ಯ ಸರಕಾರ ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆಯ ನೇತೃತ್ವದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ನನ್ನ ಕೇರಳ 2023 ಪ್ರದರ್ಶನ ಮತ್ತು ಮಾರುಕಟ್ಟೆ ಮೇಳವನ್ನು ಆಯೋಜಿಸುವುದರ ಭಾಗವಾಗಿ ಕಾಸರಗೋಡು ಜಿಲ್ಲಾ ಮಟ್ಟದ ಸಂಘಟನಾ ಸಮಿತಿಯನ್ನು ರೂಪಿಕರಿಸಲಾಯಿತು. ಸಮಿತಿ ರೂಪಿಕರಣ ಸಭೆಯನ್ನು ಬಂದರು, ಪುರಾತತ್ವ ಮತ್ತು ಪುರಾತನ ವಸ್ತುಸಂಗ್ರಹಾಲಯ ಖಾತೆ ಸಚಿವ ಅಹಮ್ಮದ್ ದೇವರ್ ಕೋವಿಲ್ ಉದ್ಘಾಟಿಸಿದರು. ಸರಕಾರದ ಅಭಿವೃದ್ಧಿ ಕಲ್ಯಾಣ ಸಾಧನೆಗಳು ಮತ್ತು ಕಲ್ಯಾಣ ಯೋಜನೆಗಳನ್ನು ಪ್ರಚಾರ ಮಾಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಚಿವರು ಹೇಳಿದರು. ನನ್ನ ಕೇರಳ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳದ ಎರಡನೇ ಆವೃತ್ತಿಯು ಎರ್ನಾಕುಳಂನಲ್ಲಿ ಏಪ್ರಿಲ್ ಮೊದಲ ವಾರದಿಂದ ಆರಂಭಿಸಿ ಮೇ ತಿಂಗಳ ಕೊನೆಯ ವಾರದಲ್ಲಿ ತಿರುವನಂತಪುರಂನಲ್ಲಿ ಸಮಾರೋಪಗೊಳಿಸಲಾಗುವುದು. ಎಲ್ಲಾ ಜಿಲ್ಲೆಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಕನಿಷ್ಠ ಏಳು ದಿನಗಳ ಕಾಲ ಮೇಳವನ್ನು ಆಯೋಜಿಸಲಾಗುತ್ತದೆ. ಸರಕಾರದ ಸಾಧನೆಗಳು, ರಾಜ್ಯವು ದೇಶದಲ್ಲೇ ಅತ್ಯುತ್ತಮ ಗುಣಮಟ್ಟವನ್ನು ತಲುಪಿದ ಇತಿಹಾಸ ಮತ್ತು ಗಳಿಸಿದ ಮನ್ನಣೆಗಳನ್ನು ಒಳಗೊಂಡಂತೆ ವಿವಿಧ ಇಲಾಖೆಗಳ ಕಾರ್ಯಗಳು ಸಾರ್ವಜನಿಕರಿಗೆ ಹೇಗೆ ಉಪಯುಕ್ತವಾಗಿವೆ ಎಂಬುದನ್ನು ಚಿತ್ರಿಸುವುದು ವಸ್ತುಪ್ರದರ್ಶನದ ಉದ್ದೇಶವಾಗಿದೆ. ಪ್ರದರ್ಶನವು ಜನರನ್ನು ಆಕರ್ಷಿಸಲು ಮನರಂಜನೆ ಮತ್ತು ವಾಣಿಜ್ಯ ಕಾರ್ಯಕ್ರಮಗಳನ್ನು ಸಹ ಒಳಗೊಂಡಿರುತ್ತದೆ. ಪ್ರದರ್ಶನದಲ್ಲಿ ಸರಕಾರದ ಸಾಧನೆಗಳು ಮತ್ತು ಅದರಲ್ಲಿ ಪ್ರಮುಖ ಪಾತ್ರ ವಹಿಸುವ ಇಲಾಖೆಗಳ ಚಟುವಟಿಕೆಗಳು ಒಳಗೊಂಡಿರಬೇಕು. ಕೇರಳವನ್ನು ಮೊದಲ ಸ್ಥಾನದಲ್ಲಿ ನಿಲ್ಲಿಸಿರುವ ಸರಕಾರದ ಸಾಧನೆಗಳಿಗೆ ಆದ್ಯತೆ ನೀಡಬೇಕು ಎಂದು ಸಚಿವರು ಸಲಹೆ ನೀಡಿದರು. ಜಿಲ್ಲೆಯಲ್ಲಿ ಮೇ 3ರಿಂದ 9ರ ವರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾಞಂಗಾಡ್‌ನ ಅಲಾಮಿಪಲ್ಲಿಯಲ್ಲಿ ಮೇಳ ನಡೆಯಲಿರುವುದು.


                                         ಜಿಲ್ಲಾ ಮಟ್ಟದ ಸಂಘಟನಾ ಸಮಿತಿ
                 ಜಿಲ್ಲಾ ಉಸ್ತುವಾರಿ ಬಂದರು, ಪುರಾತತ್ವ, ಪುರಾತನ ಮತ್ತು ವಸ್ತುಸಂಗ್ರಹಾಲಯ ಇಲಾಖೆ ಖಾತೆ ಸಚಿವ ಅಹ್ಮದ್ ಕೋವಿಲ್ ಮುಖ್ಯ ಪೋಷಕರಾಗಿ, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅಧ್ಯಕ್ಷರಾಗಿ, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನ್ ಸಂಚಾಲಕರಾಗಿ ಸಂಘಟನಾ ಸಮಿತಿ ರೂಪೀಕರಿಸಲಾಯಿತು.. ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕರಾದ ಇ.ಚಂದ್ರಶೇಖರನ್, ಅಡ್ವ.ಸಿ.ಎಚ್.ಕುಂಞಂಬು, ಎಂ.ರಾಜಗೋಪಾಲನ್, ಎನ್.ಎ.ನೆಲ್ಲಿಕ್ಕುನ್ನು, ಎ.ಕೆ.ಎಂ.ಅಶ್ರಫ್ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಪೋಷಕರಾಗಿದ್ದಾರೆ.

              ಉಪಸಮಿತಿಗಳನ್ನೂ ರಚಿಸಲಾಯಿತು. ಐ ಮತ್ತು ಟಿ ಆರ್ ಡಿ ಉಪನಿರ್ದೇಶಕರು, ಕಾಞಂಗಾಡ್ ಪುರಸಭಾ ಕಾರ್ಯದರ್ಶಿ, ಕುಟುಂಬಶ್ರೀ ಮಿಷನ್ ಜಿಲ್ಲಾ ಸಂಯೋಜಕರು ಮತ್ತು ಉಪಾಧ್ಯಕ್ಷರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕರು ಮತ್ತು ಪ್ರವಾಸೋದ್ಯಮ ಉಪನಿರ್ದೇಶಕರು ಜಂಟಿ ಸಂಚಾಲಕರು.

                  ನನ್ನ ಕೇರಳ 2023 ಪ್ರದರ್ಶನ ಮತ್ತು ಮಾರುಕಟ್ಟೆ ಮೇಳವನ್ನು ಆಯೋಜಿಸುವ ಅಂಗವಾಗಿ ಕಾಸರಗೋಡು ಜಿಲ್ಲಾ ಮಟ್ಟದ ಸಂಘಟನಾ ಸಮಿತಿಯ ರಚನಾ ಸಭೆಯನ್ನು ಬಂದರು, ಪುರಾತತ್ವ ಮತ್ತು ಪುರಾತನ ವಸ್ತುಸಂಗ್ರಹಾಲಯ ಸಚಿವ ಅಹಮ್ಮದ್ ದೇವರ್ ಕೋವಿಲ್ ಉದ್ಘಾಟಿಸಿದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries