ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಆಶ್ರಯದಲ್ಲಿ ಶೇಣಿ ರಂಗಜಂಗಮ ಟ್ರಸ್ಟ್ ಕಾಸರಗೋಡು, ಕುರಿಯ ವಿಠಲ ಶಾಸ್ತ್ರಿ ಸಾಂಸ್ಕøತಿಕ ಪ್ರತಿಷ್ಠಾನ ಉಜಿರೆ ಇವರಿಂದ ರಜತ ಪರ್ವ ಸರಣಿ ಡಾ. ಶೇಣಿ ಗೋಪಾಲಕೃಷ್ಣ ಭಟ್ ಸಂಸ್ಕøತಿ ಯಕ್ಷಗಾನ ತಾಳಮದ್ದಳೆ ಏಪ್ರಿಲ್ 1 ಮತ್ತು ಏಪ್ರಿಲ್ 2ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಲಿದೆ. ಏಪ್ರಿಲ್ 1ರಂದು ಸಂಜೆ 4.15ರಿಂದ 8 ಗಂಟೆಯ ತನಕ ಹರಿದರ್ಶನ ಕಥಾಭಾಗದಲ್ಲಿ ಹಿಮ್ಮೇಳದಲ್ಲಿ ಸುಬ್ರಾಯ ಸಂಪಾಜೆ, ಉದಯ ಕಂಬಾರು, ಅಂಬೆಮೂಲೆ ಶಿವಶಂಕರ ಭಟ್, ಮುಮ್ಮೇಳದಲ್ಲಿ ಸರ್ಪಂಗಳ ಈಶ್ವರ ಭಟ್, ಉಜಿರೆ ಅಶೋಕ ಭಟ್, ಶೇಣಿ ವೇಣುಗೋಪಾಲ ಭಟ್ ಪಾಲ್ಗೊಳ್ಳಲಿದ್ದಾರೆ.
ಏ.2ರಂದು ಭಾನುವಾರ ಸಂಜೆ 4.15ರಿಂದ 8 ಗಂಟೆಯ ತನಕ ಗುರುದಕ್ಷಿಣೆ ಕಥಾಭಾಗದಲ್ಲಿ ಹಿಮ್ಮೇಳದಲ್ಲಿ ರಮೇಶ ಭಟ್ ಪುತ್ತೂರು, ಲಕ್ಷ್ಮೀಶ ಬೇಂಗ್ರೋಡಿ, ಶ್ರೀಶನಾರಾಯಣ ಕೋಳಾರಿ, ಮುಮ್ಮೇಳದಲ್ಲಿ ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ಶೇಣಿ ವೇಣುಗೋಪಾಲ ಭಟ್ ಪಾಲ್ಗೊಳ್ಳಲಿದ್ದಾರೆ.
ಏ. 2, 3ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಡಾ. ಶೇಣಿ ಗೋಪಾಲಕೃಷ್ಣ ಭಟ್ `ಸಂಸ್ಕøತಿ' ಯಕ್ಷಗಾನ ತಾಳಮದ್ದಳೆ
0
ಮಾರ್ಚ್ 30, 2023
Tags