ಮಂಜೇಶ್ವರ: ಕೇರಳ ರಾಜ್ಯ ಹಿಂದುಳಿದ ವಿಭಾಗದ ಅಭಿವೃದ್ಧಿ ಕಾರ್ಪರೇಷನ್ ಕಾಸರಗೋಡು ಬ್ಯಾಂಕಿನಿಂದ ಕುಟುಂಬಶ್ರೀ ಸಿಡಿಎಸ್ ಮೀಂಜ ಗ್ರಾಮ ಪಂಚಾಯತ್‍ಗೆ 2ಕೋಟಿ 5ಲಕ್ಷ ರೂ.ಗಳ 4 ಶೇ. ಮೈಕ್ರೋ ಕ್ರೆಡಿಟ್ ಸಾಲದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್‍ರವರು ವಿತರಿಸಿ ಉದ್ಘಾಟಿಸಿದರು.
ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದರು. ಕೆ.ಎಸ್.ಬಿ.ಸಿ.ಡಿ.ಸಿ ಕಾಸರಗೋಡು ಬ್ಯಾಂಕಿನ ಪ್ರಬಂಧಕ ಎನ್.ಯಂ ಮೋಹನ್ ಬ್ಯಾಂಕ್ ಸ್ಕೀಮಿನ ಬಗ್ಗೆ ವಿವರಿಸಿದರು. ಬ್ಯಾಂಕ್ ಅಧಿಕೃತ ವಸಂತ ಶೆಟ್ಟಿಯವರು ಉಪಸ್ಥಿತರಿದ್ದರು. ಮೀಂಜ ಗ್ರಾಮ ಪಂಚಾಯತಿ ಸ್ಥಾಯೀಸಮಿತಿ ಅಧ್ಯಕ್ಷರಾದ ಸರಸ್ವತಿ ಸಿ.ಬಾಬು ಉಪಾದ್ಯಕ್ಷರಾದ ಜಯರಾಮ ಬಲ್ಲಂಗುಡೇಲು ಜಿಲ್ಲಾ ಪಂಚಾಯತಿ ಸದಸ್ಯೆ ಕಮಲಾಕ್ಷಿ ಕೆ, ಬ್ಲಾಕ್ ಪಂಚಾಯತಿ ಸದಸ್ಯರಾದ ರಾಧಾಕೃಷ್ಣ ಕೆ.ವಿ, ಅಶ್ವಿನಿ ಪಜ್ವ, ಪಂಚಾಯತ್ ಸದಸ್ಯರಾದ ಕುಸುಮ ಮೋಹನ್ ಜನಾರ್ಧನ ಪೂಜಾರಿ ಆಶಾಲತ ಬಿ.ಎಮ್ ಜ್ಯೋತಿ ರೈ ವಿನೋದ್ ಜಿ ಸಿಡಿಎಸ್ ಅಕೌಂಟೆಂಟ್ ಉದಯಕುಮಾರ್ ಸಿ, ಆನಿಮೇಟರ್ ಶಮೀನ, ಲೀಲ, ಅಶ್ವಿನಿ, ಲತಾದೇವಿ, ಗಾಯತ್ರಿ, ರೇವತಿ, ಶೋಭಾ ಸೋಮಪ್ಪ, ಭವ್ಯಶ್ರೀ, ಪವಿತ್ರ, ಯಶೋಧ, ಕುಶಾಲಕ್ಷಿ, ಲೋಲಾಕ್ಷಿ, ಸವಿತ, ರೂಪ, ಸಿಡಿಎಸ್ ಸದಸ್ಯರು ಉಪಸ್ಥಿತರಿದ್ದರು. ಸಿಡಿಎಸ್ ಅಧ್ಯಕ್ಷೆ ಶಾಲಿನಿ ಶೆಟ್ಟಿ ಸ್ವಾಗತಿಸಿ ಸಿಡಿಎಸ್ ಸದಸ್ಯ ಮಣಿಕುಟ್ಟನ್ ಓ.ವಿ ವಂದಿಸಿದರು. 30 ಕುಟುಂಬಶ್ರೀಗಾಗಿ ರೂ. 50ಸಾವಿರದಂತೆ 356 ಫಲಾನುಭವಿಗಳಿಗಾಗಿ ರೂಪಾಯಿ.2ಕೋಟಿ 5ಲಕ್ಷವನ್ನು 4 ಶೇ. ಬಡ್ಡಿಯಲ್ಲಿ ಸಾಲ ವಿತರಿಸಲಾಯಿತು.
ಮೀಂಜ ಕುಟುಂಬಶ್ರೀಗೆ 2 ಕೋಟಿ 5ಲಕ್ಷ ಮೈಕ್ರೋ ಕ್ರೆಡಿಟ್ ಸಾಲ ವಿತರಣೆ
0
ಮಾರ್ಚ್ 23, 2023
Tags