ಕಾಸರಗೋಡು: ನವಕೇರಳ ಕ್ರಿಯಾ ಯೋಜನೆಯನ್ವಯ ಆದ್ರ್ರಾ ಮಿಷನ್ ಚಟುವಟಿಕೆಗಳ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ ಸ್ಥಳೀಯಾಡಳಿತ ಸಂಸ್ಥೆಗಳನ್ನು ಗುರುತಿಸಿ ಆದ್ರ್ರ ಕೇರಳ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕೇರಳ ಮಿಷನ್ ಸಹಾಯದಿಂದ ಪ್ರಶಸ್ತಿಗಾಗಿ ಪರಿಗಣಿಸಬೇಕಾದ ಸ್ಥಳೀಯಾಡಳಿತ ಸಂಸ್ಥೆಗಳ ಆದ್ಯತಾ ಪಟ್ಟಿಯನ್ನು ಸಿದ್ಧಪಡಿಸಲಾಗುವುದು.
ಆರೋಗ್ಯ ಕ್ಷೇತ್ರದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಖರ್ಚುಮಾಡಿದ ಮೊತ್ತ, ಸಾಂತ್ವನ ಕಾರ್ಯಕ್ರಮಗಳು ಮತ್ತು ಇತರ ಆರೋಗ್ಯ ಸಂಬಂಧಿತ ಚಟುವಟಿಕೆಗಳನ್ನು ಪರಿಗಣಿಸಿ ಆದ್ಯತೆಯ ಪಟ್ಟಿಯನ್ನು ಸಿದ್ಧಪಡಿಸಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗುತ್ತದೆ. ಇದಲ್ಲದೇ ರೋಗನಿರೋಧಕ ಲಸಿಕೆ, ವಾರ್ಡ್ ಮಟ್ಟದ ಚಟುವಟಿಕೆಗಳು, ಇತರ ರೋಗ ತಡೆಗಟ್ಟುವ ಚಟುವಟಿಕೆಗಳು, ಅಳವಡಿಸಲಾದ ನವೀನ ಆಲೋಚನೆಗಳು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ನಿರ್ವಹಣೆ ಇತ್ಯಾದಿಗಳನ್ನು ಸಹ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.
ರಾಜ್ಯಮಟ್ಟದಲ್ಲಿ ಪ್ರಶಸ್ತಿ:
ಆದ್ರ್ರ ಕೇರಳ ಪ್ರಶಸ್ತಿ 2021-22ರ ರಾಜ್ಯ ಮಟ್ಟದ ಪ್ರಶಸ್ತಿ ವಿಭಾಗದಲ್ಲಿ ಕಿನಾನೂರು ಕರಿಂದಲಂ ಗ್ರಾಮ ಪಂಚಾಯಿತಿ ತೃತೀಯ ಸ್ಥಾನ ಪಡೆಯಿತು. ಬಹುಮಾನದ ಮೊತ್ತವಾಗಿ ಪಂಚಾಯಿತಿಗೆ 6 ಲಕ್ಷ ರೂ. ಜಿಲ್ಲಾ ಮಟ್ಟದಲ್ಲಿ ಕಯ್ಯೂರು ಚಿಮೇನಿ ಗ್ರಾ.ಪಂ ಪ್ರಥಮ ಸ್ಥಾನ (5 ಲಕ್ಷ ರೂ.), ಬಳಾಲ್ ಗ್ರಾಮ ಪಂಚಾಯಿತಿ ದ್ವಿತೀಯ (3 ಲಕ್ಷ ರೂ.) ಹಾಗೂ ಮಡಿಕೈ ಗ್ರಾಮ ಪಂಚಾಯಿತಿ ತೃತೀಯ ಸ್ಥಾನ (2 ಲಕ್ಷ ರೂ.) ಪಡೆಯಿತು.
2021-22ರ ಆದ್ರ್ರಾ ಕೇರಳ ಪ್ರಶಸ್ತಿ-ಕಾಸರಗೋಡು ಜಿಲ್ಲೆಗೆ ತೃತೀಯ
0
ಮಾರ್ಚ್ 27, 2023