ಮುಂಬೈ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಹುಲಿ ಮತ್ತು ಚಿರತೆಗಳ ದಾಳಿಗೆ 2022ರಲ್ಲಿ 53 ಜನರು ಮೃತಪಟ್ಟಿದ್ದಾರೆ ಎಂದು ರಾಜ್ಯ ಅರಣ್ಯ ಸಚಿವ ಸುಧೀರ್ ಮುಂಗಂತಿವಾರ್ ಸೋಮವಾರ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ಬಂಟಿ ಭಂಗಾಡಿಯಾ ಕೇಳಿದ ಪ್ರಶ್ನೆಗೆ ವಿಧಾನಸಭೆಯಲ್ಲಿ ಉತ್ತರಿಸಿದ ಅವರು, ಚಂದಾಪುರ ಜಿಲ್ಲೆಯೊಂದರಲ್ಲೇ ಹುಲಿಗಳ ದಾಳಿಗೆ 44 ಮಂದಿ ಹಾಗೂ ಚಿರತೆ ದಾಳಿಗೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
2022ರಲ್ಲಿ ವಿವಿಧ ಕಾರಣಗಳಿಂದ ಚಿರತೆ, ಜಿಂಕೆ, ಕರಡಿ, ಮತ್ತು ನವಿಲುಗಳ ಸೇರಿದಂತೆ ಒಟ್ಟು 53 ವನ್ಯಜೀವಿಗಳು ಮೃತಪಟ್ಟಿವೆ ಎಂದು ವರದಿಯಾಗಿದೆ. ಇವುಗಳಲ್ಲಿ 9 ಹುಲಿಗಳು ಮತ್ತು 3 ಚಿರತೆಗಳು ನೈಸರ್ಗಿಕ ಕಾರಣಗಳಿಂದ ಮೃತಪಟ್ಟಿವೆ. ಅದೇ ವರ್ಷದಲ್ಲಿ ಕನಿಷ್ಠ ಐದು ಚಿಟಾಲ್‌ಗಳು ಮತ್ತು ಮೂರು ಕಾಡುಹಂದಿಗಳನ್ನು ಕಳ್ಳ ಬೇಟೆಗಾರರು ಕೊಂದಿದ್ದಾರೆ ಎಂದು ಸುಧೀರ್ ಮಾಹಿತಿ ನೀಡಿದ್ದಾರೆ.