HEALTH TIPS

2022ನೇ ಸಾಲಿನಲ್ಲಿ ತೀವ್ರ ಮಾನವ ಹಕ್ಕು ಉಲ್ಲಂಘನೆಗೆ ಸಾಕ್ಷಿಯಾದ ಭಾರತ: ಅಮೆರಿಕಾ ವರದಿ

                 ವದೆಹಲಿ:ಭಾರತದಲ್ಲಿ ನ್ಯಾಯಾಂಗೇತರ ಹತ್ಯೆಗಳು, ಹಿಂಸಾಚಾರ ಮತ್ತು ಸ್ವೇಚ್ಛಾಚಾರದ ಬಂಧನಗಳು ಸೇರಿದಂತೆ ಗಣನೀಯ ಪ್ರಮಾಣದಲ್ಲಿ ಮಾನವಹಕ್ಕು ಉಲ್ಲಂಘನೆಗಳು ನಡೆಯುತ್ತಿವೆ ಎಂದು ಸೋಮವಾರ ಬಿಡುಗಡೆಯಾಗಿರುವ ಅಮೆರಿಕ ಸರಕಾರದ ವಾರ್ಷಿಕ ವರದಿಯೊಂದು ಹೇಳಿದೆ.

‌                 ಭಾರತದಲ್ಲಿ ''ಮಾನವಹಕ್ಕು ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ'' ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕೆನ್ ಕಳವಳ ವ್ಯಕ್ತಪಡಿಸಿದ ಸುಮಾರು ಒಂದು ವರ್ಷದ ಬಳಿಕ ಈ ವರದಿ ಬಿಡುಗಡೆಗೊಂಡಿದೆ. ಮಾನವಹಕ್ಕುಗಳ ಪ್ರವೃತ್ತಿಯ ಕುರಿತ ವರದಿಯನ್ನು ಅಮೆರಿಕದ ವಿದೇಶಾಂಗ ಇಲಾಖೆಯ ಪ್ರಜಾಪ್ರಭುತ್ವ, ಮಾನವಹಕ್ಕುಗಳು ಮತ್ತು ಕಾರ್ಮಿಕ ಬ್ಯೂರೋ ಪ್ರಕಟಿಸಿದೆ.

               ''ಸರಕಾರಿ ಮಟ್ಟದಲ್ಲೇ ಆಗಿರುವ ಅಪರಾಧಕ್ಕೆ ಯಾರನ್ನೂ ಉತ್ತರದಾಯಿಯಾಗಿಸುವುದಿಲ್ಲ. ಇದರಿಂದಾಗಿ ಜನರು ಶಿಕ್ಷೆಯ ಭಯವಿಲ್ಲದೇ ಓಡಾಡುತ್ತಿದ್ದಾರೆ. ಕಾನೂನಿನ ಅನುಷ್ಠಾನದಲ್ಲಿ ವೈಫಲ್ಯ, ತರಬೇತಿ ಹೊಂದಿದ ಪೊಲೀಸ್ ಅಧಿಕಾರಿಗಳ ಕೊರತೆ ಹಾಗೂ ಅಧಿಕ ಕೆಲಸದ ಹೊರೆ ಮತ್ತು ಕಡಿಮೆ ಸಂಪನ್ಮೂಲದಿಂದ ಬಳಲುತ್ತಿರುವ ನ್ಯಾಯಾಂಗ ವ್ಯವಸ್ಥೆಯಿಂದಾಗಿ ನ್ಯಾಯಾಲಯಗಳಲ್ಲಿ ಆರೋಪಿಗಳ ಅಪರಾಧ ಸಾಬೀತಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ'' ಎಂದು ವರದಿ ಹೇಳಿದೆ.

                   ವರದಿಯ ಕಾನೂನುವಿರೋಧಿ ಅಥವಾ ರಾಜಕೀಯ ಪ್ರೇರಿತ ಕೊಲೆಗಳ ವಿಭಾಗದಲ್ಲಿ, ದಲಿತ ವ್ಯಕ್ತಿ ವಡಿವೇಳ್ ವಿಘ್ನೇಶ್ ಎಪ್ರಿಲ್ನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾಗಿರುವ ಘಟನೆಯನ್ನು ಉಲ್ಲೇಖಿಸಲಾಗಿದೆ. ಮರಿಜುವಾನ ಹೊಂದಿದ ಆರೋಪದಲ್ಲಿ ವಿಘ್ನೇಶ್ರನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು, ಠಾಣೆಯಲ್ಲಿ ಅವರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

                   ವಿಘ್ನೇಶ್ ವಿರುದ್ಧ ದಾಖಲಿಸಲಾಗಿರುವ ಆರೋಪಗಳನ್ನು ಹಿಂದಕ್ಕೆ ಪಡೆಯಬೇಕಾದರೆ, ನಮ್ಮ ವಿರುದ್ಧ ನೀವು ಸಲ್ಲಿಸಿರುವ ದೂರನ್ನು ವಾಪಸ್ ಪಡೆಯಬೇಕು ಎಂಬುದಾಗಿ ಮೂವರು ಪೊಲೀಸ್ ಅಧಿಕಾರಿಗಳು ವಿಘ್ನೇಶ್ ರ ಸಹೋದರನ ಮೇಲೆ ಒತ್ತಡ ಹೇರಿದ್ದರು ಎಂಬ ಆರೋಪಗಳನ್ನೂ ವರದಿಯು ಉಲ್ಲೇಖಿಸಿದೆ.

                   2019ರಲ್ಲಿ ಹೈದರಾಬಾದ್ನಲ್ಲಿ ನಡೆದ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ನಕಲಿ ಎನ್ಕೌಂಟರ್ನಲ್ಲಿ ಪೊಲೀಸರು ಕೊಂದ ಘಟನೆಯನ್ನೂ ಅಮೆರಿಕ ಸರಕಾರ ತನ್ನ ವರದಿಯಲ್ಲಿ ಪರಿಗಣಿಸಿದೆ.

                              ಉಮರ್ ಖಾಲಿದ್ ಬಂಧನ, ಭೀಮಾ ಕೋರೆಗಾಂವ್, ಸ್ಟಾನ್ ಸ್ವಾಮಿ ಸಾವು...

              ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಗಳ ವೇಳೆ, ಭಾಷಣ ಮಾಡಿರುವುದಕ್ಕಾಗಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ರನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಬಂಧಿಸಿರುವುದೂ ವರದಿಯಲ್ಲಿ ಪ್ರಸ್ತಾಪಗೊಂಡಿದೆ.

                   ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಗಳನ್ನು ಎದುರಿಸುತ್ತಿದ್ದ 80 ವರ್ಷದ ಮಾನವಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ಜೈಲಿನಲ್ಲಿ ಅಮಾನುಷವಾಗಿ ಸಾವಿಗೀಡಾದ ಘಟನೆಯನ್ನೂ ವರದಿಯು ಉಲ್ಲೇಖಿಸಿದೆ.

              ''ಭೀಮಾ ಕೋರೆಗಾಂವ್ ಪ್ರಕರಣದಲ್ಲಿ, ಪಿತೂರಿ ಆರೋಪವನ್ನು ಹೊರಿಸಿ 16 ಮಾನವಹಕ್ಕುಗಳ ಹೋರಾಟಗಾರರನ್ನು ಜೈಲಿಗೆ ಹಾಕಲಾಗಿತ್ತು. ಅವರಿಗೆ ಹಲವು ನ್ಯಾಯಾಲಯಗಳು ಜಾಮೀನು ನಿರಾಕರಿಸಿದವು. ಅದರಿಂದಾಗಿ ಹಲವು ಮಂದಿ ಮೃತಪಟ್ಟರು'' ಎಂದು ವರದಿ ಹೇಳಿದೆ. ''ತಮ್ಮ ವಿರುದ್ಧ ರಾಜಕೀಯ ಪ್ರೇರಿತವಾಗಿ ಮೊಕದ್ದಮೆಗಳನ್ನು ಹೂಡಲಾಗಿದೆ ಎಂಬುದಾಗಿ ಆರೋಪಿಗಳು ಹೇಳಿದ್ದಾರೆ'' ಎಂದು ವರದಿ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries