ಕಾಸರಗೋಡು: ಮರೆಯಾಗುತ್ತಿರುವ ಪರಿಶಿಷ್ಟ ಪಂಗಡದ ವಿಶಿಷ್ಟ ಕಲೆಗಳನ್ನು ಉತ್ತೇಜಿಸಲು ಮತ್ತು ಪ್ರಚಾರ ಮಾಡಲು ಮತ್ತು ನಿವಾಸಿಗಳ ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು, 2022-23 ರ ವಾರ್ಷಿಕ ಯೋಜನೆಯ ಭಾಗವಾಗಿ, ಕಾಞಂಗಾಡ್ ಬ್ಲಾಕ್ ಪಂಚಾಯಿತಿಯು ಊರುತ್ಸವಂ-2023 ಅನ್ನು ಆಯೋಜಿಸಲಾಗಿತ್ತು.
ಪಳ್ಳಿಕ್ಕೆರೆ ಗ್ರಾ.ಪಂ.ನ ಚೆರ್ಕಪಾರಾದಲ್ಲಿ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಮಂಗಳಂಕಳಿ, ಎರುತುಕಳಿ, ಪಂತಲ್ಪಾಟ್, ಜಾನಪದ ನೃತ್ಯ, ಮಯೂರತ್ತಂ ಮೊದಲಾದ ಕಲಾ ಪ್ರಕಾರಗಳ ಪ್ರಸ್ತುತಿಯೂ ನಡೆಯಿತು. ವಿವಿಧ ಆಹಾರ ಮತ್ತು ಉತ್ಪನ್ನಗಳ ವಿತರಣಾ ಮಳಿಗೆಗಳನ್ನು ಸಹ ಸಿದ್ಧಪಡಿಸಲಾಗಿತ್ತು. ಶನಿವಾರ ಬೆಳಗ್ಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮಳಿಗೆಗಳನ್ನು ಉದ್ಘಾಟಿಸಿದರು. ಉದುಮ ಶಾಸಕ ಸಿ.ಎಚ್.ಕುಂಞಂಬು ಅವರು ಸಂಜೆ ಊರುತ್ಸವಂ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಖ್ಯಾತ ಗಾಯಕಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ನಾಂಚಿಯಮ್ಮ ಭಾಗವಹಿಸಿದ್ದರು. ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ. ಮಣಿಕಂಠನ್ ಅಧ್ಯಕ್ಷತೆ ವಹಿಸಿದ್ದರು.
ಕಲಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ ಸಂಘಗಳಿಗೆ ಕೆ.ಕುಂಞ ರಾಮನ್ ಉಡುಗೊರೆ ನೀಡಿ ಅಭಿನಂದಿಸಿದರು. ಪುಲ್ಲೂರು ಪೆರಿಯ ಪಂಚಾಯತ್ ಅಧ್ಯಕ್ಷ ಸಿ. ಕೆ. ಅರವಿಂದಾಕ್ಷನ್, ಮಡಿಕೈ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಪ್ರೀತಾ, ಅಜಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ. ಶೋಭಾ, ಉದುಮ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಲಕ್ಷ್ಮಿ, ಕಾಞಂಗಾಡು ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಕೆ. ವಿ. ಶ್ರೀಲತಾ, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ. ಸೀತಾ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ವಿಜಯನ್, ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಅಬ್ದುಲ್ ರಹಿಮಾನ್, ಬ್ಲಾಕ್ ಸದಸ್ಯರಾದ ವಿ. ಗೀತಾ, ಶಕೀಲಾ ಬಶೀರ್, ಬಾಬುರಾಜನ್ ಎಂ. ಕೆ, ಪುμÁ್ಪ ಎಂಜಿ, ಎ. ದಾಮೋದರನ್, ಲಕ್ಷ್ಮೀ ತಂಬಾನ್, ರಾಜೇಂದ್ರನ್.ಕೆ.ವಿ, ಪುμÁ್ಪ ಶ್ರೀಧರನ್, ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಸ್ನಿನ್ ವಹಾಬ್, ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕೆ. ವಿ, ಘಟಕ ಸಮಿತಿ ಕಾರ್ಯಾಧ್ಯಕ್ಷ ಎಂ. ವಿಜಯನ್, ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಸದಸ್ಯೆ ಲೀನಾ ಕುಮಾರಿ, ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಮಲ್ಲಿಕಾ. ಎಂ, ಪರಿಶಿಷ್ಟ ಪಂಗಡದ ಸಹಾಯಕ ಅಭಿವೃದ್ಧಿ ಅಧಿಕಾರಿ ಕೆ. ವಿ ರಾಘವನ್ ಕಾಞಂಗಾಡ್ ಬ್ಲಾಕ್ ಪಂಚಾಯತ್ ಕಾರ್ಯದರ್ಶಿ ಪಿ. ಯುಜೀನ್ ಚೆರುಕ್ಕಪರ ಕಾಲೋನಿ ಊರು ಹಿರಿಯ ಬಾಲನ್ ಚಾಳಿಲ್ ಉಪಸ್ಥಿತರಿದ್ದರು. ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್ ಸ್ವಾಗತಿಸಿ, ಗಿರಿಜನ ವಿಸ್ತರಣಾಧಿಕಾರಿ ಪಿ.ವಿ. ರಾಕೇಶ್ ವಂದಿಸಿದರು.