ಕುಂಬಳೆ: ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಮಾನ್ಯತೆ ಪಡೆದ ಗಡಿನಾಡು ಕೇರಳ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ 2023 ನೇ ಸಾಲಿನ ಕನ್ನಡ ಭವನದ ಪ್ರತಿಷ್ಠಿತ ಪ್ರಶಸ್ತಿಯಾದ "ಕನ್ನಡ ಪಯಸ್ವಿನಿ ಪ್ರಶಸ್ತಿ 2023"ನ್ನು ಡಾ ಸಿದ್ದಗಂಗಯ್ಯ ಹೊಲತಾಳು ತುಮಕೂರು, ಕವಿ ಗುಣಾಜೆ ರಾಮಚಂದ್ರ ಭಟ್, ಕಥೆಗಾರ ವೈ ಸತ್ಯನಾರಾಯಣ, ಲೇಖಕಿ ಸ್ನೇಹಲತಾ, ಗಮಕಿ ಶ್ರೀಹರಿ ಭಟ್ ಪೆಲ್ತಾಜೆ, ಕವಿ ಶ್ರೀಕೃಷ್ಣಯ್ಯ ಅನಂತಪುರ ಇವರಿಗೆ ನೀಡಲಿರುವುದಾಗಿ ನಾರಾಯಣ ಮಂಗಲದ ವಿ.ಬಿ. ಕುಳಮರ್ವರ ಸಾಹಿತ್ಯ ಮನೆಯಲ್ಲಿ ಭಾನುವಾರ ನಡೆದ ವಸಂತ ಕವಿತೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಭವನದ ಸ್ಥಾಪಕ ಅಧ್ಯಕ್ಷÀ ವಾಮನ್ ರಾವ್ ಬೇಕಲ್ ಘೋಷಿಸಿದ್ದಾರೆ. ಮೇ ತಿಂಗಳಲ್ಲಿ ನಡೆಯಲಿರುವ ಕನ್ನಡ ಭವನ ಪ್ರಯೋಜಿತ "ಕಾಸರಗೋಡು ಸಾಹಿತ್ಯ ಸಮ್ಮೇಳನ" ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಪಯಸ್ವಿನಿ ಪ್ರಶಸ್ತಿ 2023ರ ಘೋಷಣೆ
0
ಮಾರ್ಚ್ 20, 2023
Tags