ಕಾಸರಗೋಡು:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಟ್ಟದ ಐಸಿಡಿಎಸ್ ಸೆಲ್,
ಕಾಸರಗೋಡು ಕಛೇರಿ ವತಿಯಿಂದ ಈ ಬಾರಿಯ ಪೋಷನ್ ಅಭಿಯಾ ನ್ ಯೋಜನೆಯ ಭಾಗವಾಗಿ ಪೋಷನ್
ಪಕ್ವಾಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ವರ್ಷದ ಪೋಷನ್ ಪಕ್ವಾಡ
ಕಾರ್ಯಕ್ರಮವನ್ನು 2023 ಮಾರ್ಚ್ 20 ರಿಂದ ಎಪ್ರಿಲ್ 3 ರವರೆಗೆ ಆಚರಿಸಲಾಗುತ್ತದೆ.
ಮಧೂರು ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಸಿಡಿಎಸ್ ಜಿಲ್ಲಾ
ಕಾರ್ಯಕ್ರಮಾಧಿಕಾರಿ ಸಿ. ಸುಧಾ, ಕಾಸರ ಗೋಡು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.
ಜಯಶ್ರೀ, ಮೇಲ್ವಿಚಾರಕರಾದ ಕೆ. ಎಂ. ದಿಲ್ನಾ, ಕೆ. ಜಿಶಾ, ಜಿ. ಕಾವ್ಯಶ್ರೀ, ಕೆ ಸಿ ಡಿ
ಎಸ್ ಜಿಲ್ಲಾ ಕಾರ್ಯಕ್ರಮ ಕಛೇರಿಯ ಜೂನಿಯರ್ ಸ್ಟ್ಯಾಟಿಸ್ಟಿಕಲ್ ಇನ್ಸ್ಪೆಕ್ಟರ್ ಕಿಶೋರ್
ಕುಮಾರ್, ಎನ್‌ಎನ್‌ಎಂ ಜಿಲ್ಲಾ ಸಂಯೋಜಕ ವಿಪಿನ್ ಪವಿತ್ರನ್, ಬ್ಲಾಕ್ ಸಂಯೋಜಕಿ ಕೆ.
ಶ್ರುತಿ ಮತ್ತು ಒಎ ಟಿ .ಜಿ. ವಿಶಾಲಾಕ್ಷನ್ ಎಂಬಿವರು ಭಾಗವಹಿಸಿದ್ದರು. ಕಾರ್ಯಕ್ರಮದ
ಅಂಗವಾಗಿ ಕಿರುಧಾನ್ಯಗಳ ಪ್ರದರ್ಶನ, ಬೆಳೆವಿಮೆ ವೀಕ್ಷಣೆ, ಬೆಳವಣಿಗೆಯ ನಿರೀಕ್ಷಣೆ,
ಪೋಷನ್ ನೃತ್ಯ, ಭಿತ್ತಿಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಪೋಷನ್ ಪಕ್ವಾಡ
ಕಾರ್ಯಕ್ರಮಕ್ಕೆ ಕಿರುಧಾನ್ಯಗಳ ಪ್ರಾಮುಖ್ಯತೆ, ನ್ಯೂನ ಪೋಷಣೆ, ಕಡಿಮೆ ತೂಕ,
ಅಪೌಷ್ಟಿಕತೆ,
ಕುಂಠಿತ ಬೆಳವಣಿಗೆ ಎಂಬೀ ವಿಷಯಗಳಿಗೆ ಈ ವರ್ಷ
ಪ್ರಾಧಾನ್ಯತೆ ನೀಡಲಾಗುವುದು. ಅಲ್ಲದೆ, 2023 ಮಾರ್ಚ್ 20 ರಿಂದ ಎಪ್ರಿಲ್ 3 ರ
ವರೆಗೆ ಜಿಲ್ಲೆಯ 1348 ಅಂಗನವಾಡಿಗಳಲ್ಲಿ, 12 ಐಸಿಡಿಎಸ್ ಯೋಜನೆಗಳಲ್ಲಿ ಪೋಷಣೆ ಗೆ
ಸಂಬಂಧಿಸಿದ ವಿವಿಧ ಚಟವಟಿಕೆಗಳನ್ನು ನಡೆಸಲಾಗುವುದು.