ಕುಂಬಳೆ: `ಹವ್ಯಕ''ವೆಂದರೆ ಕನ್ನಡ ನಾಡಿನ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೇಂದ್ರೀಕೃತವಾದ ಪಂಗಡ. ಹವ್ಯಕರ ಆಡುಭಾಷೆ ಮಧ್ಯಕಾಲೀನ ಹಳೆಗನ್ನಡ ಭಾಷೆಗೆ ಹತ್ತಿರವಾದ ``ಹವ್ಯಕ ಭಾಷೆ'', ಪ್ರಸ್ತುತ ಅನೇಕ ಸ್ಥಳೀಯ ಆವೃತ್ತಿಗಳನ್ನು ಹೊಂದಿದೆ. ಆಧುನಿಕ ಯುಗದಲ್ಲಿ ಅಂತರ್ಜಾಲದಲ್ಲಿ ಒಪ್ಪಣ್ಣನ ನೆರೆಕರೆ www.oppanna.com ಎಂಬ ಹವ್ಯಕ ವೆಬ್-ಸೈಟ್ ಕಳೆದ ಹನ್ನೆರಡು ವರುಷಗಳಿಂದ ತನ್ನ ಸಾಹಿತ್ಯ ಕೃಷಿಯನ್ನು ಮಾಡುತ್ತಿದೆ. ಸಾಹಿತಿ-ಚಿಂತಕ-ಬರಹಗಾರರ oಠಿಠಿಚಿಟಿಟಿಚಿ.ಛಿom ಬಳಗವು ಈಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ಎಂಬ ಹೆಸರಿನಲ್ಲಿ ನೋಂದಾವಣೆಗೊಂಡು ಮಾನ್ಯತೆ ಪಡೆದ ಸಂಸ್ಥೆಯಾಗಿದೆ.
ಈಗಾಗಲೇ ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆ ಮತ್ತು ಸಾಮಾಜಿಕ- ಸಾಂಸ್ಕೃತಿಕ ಕಾರ್ಯಗಳ ಮೂಲಕ ಪ್ರತಿಷ್ಠಾನವು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಹತ್ತು ವರ್ಷಗಳಿಂದ ಸೌರ ಯುಗಾದಿಗೆ ಸಂಪೂರ್ಣ ಹವ್ಯಕಭಾಷೆಯಲ್ಲೇ ಆಯೋಜನೆ ಆದ ವಿಷು ವಿಶೇಷ ಸ್ಪರ್ಧೆಯು ಹವ್ಯಕ ಸಾಹಿತ್ಯ ಲೋಕಕ್ಕೆ ಹೊಸ ಸಂಚಲನ ನೀಡಿದೆ. ಈ ವರ್ಷ ಪ್ರತಿಷ್ಠಾನವು ಸೌರಮಾನ ಯುಗಾದಿಯ ಪರ್ವಕಾಲದಲ್ಲಿ ಹೊಸ ಸಾಹಿತಿಗಳ ಅನ್ವೇಷಣೆಗಾಗಿ ``ವಿಷು ವಿಶೇಷ ಸ್ಪರ್ಧೆ - 2023'' ಆಯೋಜನೆಗೊಳಿಸಿದೆ.
ವಿಷು ವಿಶೇಷ ಸ್ಪರ್ಧೆ - 2023 ವಿವರಗಳು:
1.ಪ್ರಬಂಧ:ವಿಷಯ : ``ಯುವಜನರಲ್ಲಿನ ಕೃಷಿ ಆಸಕ್ತಿ''(750 ಶಬ್ದಗಳಿಗೆ ಸೀಮಿತ), 2.ಕಥೆ:ವ್ಯಾಪ್ತಿ: ಹವ್ಯಕರ ಜನಜೀವನ (ವಿಷಯ ಸ್ಪರ್ಧಾರ್ಥಿಗಳ ಆಯ್ಕೆ)(1000 ಶಬ್ದಗಳಿಗೆ ಸೀಮಿತ), 3. ಕವಿತೆ:ವಿಷಯ: ಊರಿನ ಜಾತ್ರೆ,( ಛಂದೋಬದ್ಧವಾದ ಕವಿತೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 30 ಸಾಲುಗಳ ಮಿತಿಗಳಲ್ಲಿರಬೇಕು.)4. ನಗೆಬರಹ: ಸದಭಿರುಚಿಯ ಲಘುಬರಹ ಈ ವಿಭಾಗಕ್ಕೆ ಸ್ವಾಗತಾರ್ಹವಾಗಿದ್ದು, ಅಪಹಾಸ್ಯ, ಅಶ್ಲೀಲ ರಹಿತವಾಗಿ 500 ಶಬ್ದಗಳ ಮಿತಿಯಲ್ಲಿರಬೇಕು.
ಎಲ್ಲಾ ಬರಹಗಳೂ ಕಡ್ಡಾಯವಾಗಿ ಹವ್ಯಕಭಾಷೆ- ಕನ್ನಡಲಿಪಿಯಲ್ಲಿ ಇರಬೇಕು, ಹವ್ಯಕ ಪರಂಪರೆ, ಸಂಸ್ಕೃತಿಯ ಹಿರಿಮೆಗಳ ಬಿಂಬಿಸುವ ಬರಹಗಳಿಗೆ ಆದ್ಯತೆ ನೀಡಿರಬೇಕು,ಸ್ಪರ್ಧೆಗೆ ಬರುವ ಯಾವುದೇ ಬರಹ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿರಬಾರದು, ಸ್ಪರ್ಧೆಗೆ ಬಂದ ಎಲ್ಲಾ ಬರಹಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ್ದೇ ಆಗಿರುತ್ತದೆ. ಸ್ಪರ್ಧೆಯ ವಿಚಾರದಲ್ಲಿ ಪ್ರತಿಷ್ಠಾನದ ತೀರ್ಮಾನವೇ ಅಂತಿಮವಾಗಿದೆ. ಪ್ರತಿ ವಿಭಾಗದಲ್ಲಿಯೂ ಪ್ರಥಮ ಮತ್ತು ದ್ವಿತೀಯ ಎರಡು ಬಹುಮಾನಗಳು ಇರುತ್ತವೆ. ಸೂಕ್ತ ಸಂದರ್ಭದಲ್ಲಿ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಗುವುದು. ಹಿಂದೆ ವಿಷು ವಿಶೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದವರು ಈ ಬಾರಿ ಸ್ಪರ್ಧೆಯ ಅದೇ ವಿಭಾಗದಲ್ಲಿ ಭಾಗವಹಿಸುವಂತಿಲ್ಲ. ಬಹುಮಾನ ವಿಜೇತರ ವಿವರಗಳನ್ನುwww.oppanna.com ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು. ಹಸ್ತಪ್ರತಿಗಳನ್ನು ಕಳುಹಿಸುವುದಾದರೆ ಕಡ್ಡಾಯವಾಗಿ A4 ಹಾಳೆಯಲ್ಲಿಯೇ ಬರೆದಿರಬೇಕು. ಭಾಗವಹಿಸಲು ಏ. 10 ಕೊನೆಯ ದಿನವಾಗಿದೆ. ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಗಳನ್ನು ಕಡ್ಡಾಯವಾಗಿ ಪ್ರತ್ಯೇಕ ಹಾಳೆಯಲ್ಲಿ ಬರೆದು ಬರಹದ ಜೊತೆಗೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ), ಅ/ಔ ತೆಕ್ಕುಂಜ, ಧರ್ಮಾರಣ್ಯ ರಸ್ತೆ , ಅಂಚೆ: ಅರಂಬೂರು, ಸುಳ್ಯ ತಾಲೂಕು, ದ.ಕ – 574314 ಮಿಂಚಂಚೆ ವಿಳಾಸ: : oppanna.editor@gmail.com ವಿಳಾಸಕ್ಕೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ:
8762921359, 9449806563, 8547245304, 9448271447, 9972967480
ಅಥವಾ ಒಪ್ಪಣ್ಣ (oppanna.com) ಅಂತರ್ಜಾಲ ಪುಟದಲ್ಲಿ ಲಭ್ಯ.
ವಿಷು ವಿಶೇಷ ಸ್ಪರ್ಧೆ 2023
0
ಮಾರ್ಚ್ 31, 2023