ನವದೆಹಲಿ: ಇಲ್ಲಿ ನಡೆದಿದ್ದ ಜಿ-20 ಗುಂಪಿನ ವಿದೇಶಾಂಗ ಸಚಿವರ ಸಭೆಯಲ್ಲಿ ಉಕ್ರೇನ್ ಸಂಘರ್ಷದ ವಿಚಾರ ಪ್ರಸ್ತಾಪಿಸಿದ್ದ ಪಶ್ಚಿಮದ ರಾಷ್ಟ್ರಗಳ ವಿರುದ್ಧ ರಷ್ಯಾದ ವಿದೇಶಾಂಗ ಸಚಿವ ಸರ್ಗಿ ಲಾವರೊವ್ ಶುಕ್ರವಾರ ಕಿಡಿಕಾರಿದ್ದಾರೆ.
'ಇರಾಕ್, ಅಫ್ಗಾನಿಸ್ತಾನ ಮತ್ತು ಯುಗೊಸ್ಲಾವಿಯಾ ಮೇಲೂ ದಾಳಿಗಳು ನಡೆದಿದ್ದವು.
ಆದರೆ ಈ ಹಿಂದೆ ನಡೆದಿದ್ದ ಜಿ-20 ಗುಂಪಿನ ಸಭೆಗಳಲ್ಲಿ ಈ ದೇಶಗಳಲ್ಲಿನ ಪರಿಸ್ಥಿತಿ ಕುರಿತು ಧ್ವನಿ ಎತ್ತದೆ ಎಲ್ಲರೂ ಮೌನವಹಿಸಿದ್ದು ಏಕೆ' ಎಂದು ಪ್ರಶ್ನಿಸಿದ್ದಾರೆ.
'ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹಾಗೂ ನ್ಯಾಟೊ ಮಹಾ ಕಾರ್ಯದರ್ಶಿ ಜೆನ್ಸ್ ಸ್ಟೊಲ್ಟೆನ್‌ಬರ್ಗ್ ಅವರು ಯುದ್ಧಭೂಮಿಯಲ್ಲಿ ರಷ್ಯಾವನ್ನು ಸೋಲಿಸಬೇಕು ಎಂದು ಬಹಿರಂಗವಾಗಿಯೇ ಹೇಳಿದ್ದರು' ಎಂದು ಅವರು ದೂರಿದ್ದಾರೆ.