ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯವು ಕಾಸರಗೋಡು ಪ್ರೆಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿರುವ ಮಾಧ್ಯಮ ಕಾರ್ಯಾಗಾರ ಮಾ. 14ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ನುಲ್ಳಿಪ್ಪಾಡಿಯ ಹೈವೇ ಕ್ಯಸಲ್ ಸಭಾಂಗಣದಲ್ಲಿ ಜರುಗಲಿದೆ.
ಉಪಕುಲಪತಿ ಪೆÇ್ರಫೆಸರ್ ಎಚ್. ವೆಂಕಟೇಶ್ವರಲು ಅವರು ಸೆಮಿನಾರ್ ಉದ್ಘಾಟಿಸುವರು. ಭಾರತ ಜಿ20 ಅಧ್ಯಕ್ಷ ಸ್ಥಾನದ ಅಧಿಕಾರ ಸ್ವೀಕಾರ ಕುರಿತು ಕಾರ್ಯಾಗಾರ ಹಮ್ಮಿಕೊಲ್ಳಲಾಗಿದೆ. ರಿಜಿಸ್ಟ್ರಾರ್ ಡಾ.ಎಂ.ಮುರಳೀಧರ ನಂಬಿಯಾರ್ ಅಧ್ಯಕ್ಷತೆ ವಹಿಸುವರು. ಏಷ್ಯಾನೆಟ್ ನ್ಯೂಸ್ ಕಾರ್ಯನಿರ್ವಾಹಕ ಸಂಪಾದಕ ಎಸ್.ಬಿಜು, ಮಹಾತ್ಮಾ ಗಾಂಧಿ ಕಾಲೇಜ್ ಆಫ್ ಮಾಸ್ ಕಮ್ಯುನಿಕೇಷನ್ ನಿರ್ದೇಶಕ ಎ.ಕೆ. ಅನುರಾಜ್ ಮತ್ತು ದಿ ಹಿಂದೂ ಕೋಝಿಕ್ಕೋಡ್ ಬ್ಯೂರೋ ಮುಖ್ಯಸ್ಥ ಬಿಜು ಗೋವಿಂದ್ ಭಾಗವಹಿಸಿಸುವರು.
ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ: ಇಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಿಂದ ವಿಚಾರ ಸಂಕಿರಣ
0
ಮಾರ್ಚ್ 12, 2023
Tags