ಕಾಸರಗೋಡು: ಕಾಸರಗೋಡಿಗೆ ವ್ಯಾಪಾರಕ್ಕೆಂದು ತಂದ ಎಮ್ಮೆಯ ತುಳಿತಕ್ಕೊಳಗಾಗಿ 22 ವರ್ಷದ ಯುವಕ ಮೃತಪಟ್ಟಿದ್ದಾನೆ.
ಮೊಗ್ರಾಲ್ ಪುತ್ತೂರಿನಲ್ಲಿ ಘಟನೆ ನಡೆದಿದೆ. ಮೃತ ಸಾದಿಕ್ ಕರ್ನಾಟಕದ ಚಿತ್ರದುರ್ಗ ನಿವಾಸಿ. ವಾಹನದಿಂದ ಕೆಳಗಿಳಿಯುವಾಗ ಎಮ್ಮೆ ತುಳಿದಿದೆ.
ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಎಮ್ಮೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಸಾದಿಕ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ.
ಸಾದಿಕ್ ಮತ್ತು ಆತನ ತಂದೆ ದನದ ವ್ಯಾಪಾರಿಗಳು. ಸಾದಿಕ್ ಮೇಲೆ ದಾಳಿ ಮಾಡಿದ ಎಮ್ಮೆ ಸುಮಾರು ಎರಡು ಕಿಲೋಮೀಟರ್ ದೂರ ಓಡಿ ಹೋಗಿದೆ. ಆಗ ಎಮ್ಮೆಯ ದಾಳಿಯಿಂದ ಸಮೀಪದ ಅಂಗಡಿಗಳೆಲ್ಲ ಜಖಂಗೊಂಡಿವೆ. ರಸ್ತೆಯಲ್ಲಿ ಸಾಗುತ್ತಿದ್ದ ಸ್ಕೂಟರ್ ಸವಾರನನ್ನೂ ಎಮ್ಮೆ ಕೆಳಗೆ ಬೀಳಿಸಿದೆ.
ಇದರೊಂದಿಗೆ ಕಾಸರಗೋಡಿನಿಂದ ಪೆÇಲೀಸರು ಮತ್ತು ಅಗ್ನಿಶಾಮಕ ದಳ ಆಗಮಿಸಿ ಎಮ್ಮೆಯನ್ನು ಹತೋಟಿಗೆ ತಂದರು. ಬಹಳ ಪ್ರಯತ್ನದ ನಂತರ, ಎಮ್ಮೆಯನ್ನು ಸಂಜೆ 7 ಗಂಟೆಗೆ ಸೆರೆಹಿಡಿಯಲಾಯಿತು.
ಕಾಸರಗೋಡಿನಲ್ಲಿ ವ್ಯಾಪಾರಕ್ಕೆ ತಂದ ಎಮ್ಮೆ ಹಾಯ್ದು 22 ವರ್ಷದ ಯುವಕ ಸಾವು
0
ಮಾರ್ಚ್ 10, 2023
Tags