ಕತಾರ್: ಉತ್ತರ ಪೆರುವಿನ ಕರಾವಳಿ ಪ್ರದೇಶ ಹಾಗೂ ಈಕ್ವೆಡಾರ್‌ನಲ್ಲಿ ಶನಿವಾರ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಭೂಕಂಪದ ತೀವ್ರತೆ 6.8ರಷ್ಟು ದಾಖಲಾಗಿದೆ ಎಂದು ಭೂಕಂಪ ಮಾಪನ ಇಲಾಖೆ ತಿಳಿಸಿದೆ.
ಕ್ವೆಡಾರ್‌ನ ಗುವಾಯಾಸ್ ಗಡಿ ಪ್ರಾಂತ್ಯದ ಬಾಲಾವೋ ನಗರದ 66.4 ಕಿ.ಮೀ ಆಳದಲ್ಲಿ ಇದರ ಕೇಂದ್ರ ಬಿಂದು ದಾಖಲಾಗಿದೆ.
ಅನೇಕ ಮನೆಗಳು ಹಾಗೂ ಕಟ್ಟಡಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತವಾಗಿದೆ. ಸುಮಾರು 380ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
30 ಸರ್ಕಾರಿ ಕಟ್ಟಡಗಳು ಸೇರಿ ಸುಮಾರು 90ಕ್ಕೂ ಹೆಚ್ಚು ಕಟ್ಟಡಗಳಿಗೆ ಹಾನಿಯಾಗಿದೆ.
ಹಲವು ಕಡೆ ರಸ್ತೆಗಳು ಕುಸಿದಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇಲ್ಲಿನ ರೋಸಾ ವಿಮಾನ ನಿಲ್ದಾಣಕ್ಕೂ ಹಾನಿಯಾಗಿದೆ ಎಮದು ವರದಿಯಾಗಿದೆ.
Another Video-
At least 15 dead and nearly 534 injured after magnitude 6.8 #earthquake shakes #Ecuador
#deprem #USA #earthquakes