HEALTH TIPS

ಸಾಕ್ಷರತಾ ಪರೀಕ್ಷೆಯಲ್ಲಿ 22 ಲಕ್ಷ ಜನ ಭಾಗಿ

         ನವದೆಹಲಿ: ಕೇಂದ್ರ ಸರ್ಕಾರವು ಮಾರ್ಚ್ ಆರಂಭದಲ್ಲಿ ನಡೆಸಿದ್ದ, 15ರಿಂದ 80 ವರ್ಷದೊಳಗಿನ ವಯಸ್ಕರ 'ಮೂಲ ಸಾಕ್ಷರತಾ ಪರೀಕ್ಷೆ'ಯಲ್ಲಿ ದೇಶದ 22.7 ಲಕ್ಷ ಜನರು ಭಾಗಿಯಾಗಿದ್ದರು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಯಸ್ಕರನ್ನು ಸಾಕ್ಷರರು ಎಂಬುದಾಗಿ ಪರಿಗಣಿಸಲು ಇದೇ ಮೊದಲ ಬಾರಿಗೆ ಸಾಕ್ಷರತೆ ಹಾಗೂ ಸಂಖ್ಯಾಶಾಸ್ತ್ರದ ಮೌಲ್ಯಮಾಪನ ಪರೀಕ್ಷೆಯನ್ನು ನಡೆಸಲಾಗಿತ್ತು.

              ಮಧ್ಯಪ್ರದೇಶದಲ್ಲಿ ಅತಿಹೆಚ್ಚು ಅಂದರೆ, 9.25 ಲಕ್ಷ ಜನರು ವಯಸ್ಕರು ಭಾಗಿಯಾಗಿದ್ದರು. ಈ ಪೈಕಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆಯೇ ಐದು ಲಕ್ಷಕ್ಕೂ ಅಧಿಕವಿತ್ತು. ವಯಸ್ಕರಿಗೆ ಅಕ್ಷರ ಕಲಿಸುವ ಪ್ರಕ್ರಿಯೆಯಲ್ಲಿ ಸ್ವಯಂಸೇವಕರಾಗಿ ತೊಡಗಿಸಿಕೊಳ್ಳಲು ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರ ಪ್ರೋತ್ಸಾಹ ನೀಡಿತ್ತು.

           ಕೇಂದ್ರ ಶಿಕ್ಷಣ ಸಚಿವಾಲಯವು ಹತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದೇ 19ರಂದು ಪರೀಕ್ಷೆ ನಡೆಸಿತ್ತು. ಓದು, ಬರಹ ಹಾಗೂ ಸಂಖ್ಯಾ ಕೌಶಲವವನ್ನು ತಿಳಿದುಕೊಳ್ಳುವುದು ಪರೀಕ್ಷೆಯ ಉದ್ದೇಶವಾಗಿತ್ತು. 15 ವರ್ಷ ವಯೋಮಾನಕ್ಕಿಂತ ಮೇಲ್ಪಟ್ಟ ಅನಕ್ಷರಸ್ಥರನ್ನು ಗುರಿಯಾಗಿಸಿಕೊಂಡು ಈ ಕಾರ್ಯಕ್ರಮ ರೂಪಿಸಲಾಗಿದೆ. ಅದರಲ್ಲೂ ಮಹಿಳೆಯರು ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ರಾಜ್ಯಗಳನ್ನೇ ಗುರಿ ಮಾಡಿಕೊಳ್ಳಲಾಗಿತ್ತು.

            ಸಚಿವಾಲಯದ ಅಧಿಕಾರಿಗಳ ಪ್ರಕಾರ, ದೇಶದಲ್ಲಿ 15-20 ಕೋಟಿ ಅನಕ್ಷರಸ್ಥರಿದ್ದು, ಪ್ರತೀ ವರ್ಷ ಒಂದು ಕೋಟಿ ಅನಕ್ಷರಸ್ಥರನ್ನು ಈ ಕಾರ್ಯಕ್ರಮದ ವ್ಯಾಪ್ತಿಗೆ ತರುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.

               ಸಮುದಾಯಗಳ ಸ್ವಯಂಸೇವಕ ಶಿಕ್ಷಕರು, ಶಾಲೆ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಶಿಕ್ಷಕರ ತರಬೇತಿ ಸಂಸ್ಥೆಗಳ ಶಿಕ್ಷಕರ ಮೂಲಕ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಕಾಲೇಜುಗಳ ಪ್ರಾಂಶುಪಾಲರಿಗೆ ಈ ಸಂಬಂಧ ಜನವರಿ 27ರಂದು ಸೂಚನೆ ನೀಡಿತ್ತು. ಸ್ವಯಂಸೇವಕರಾಗಿ ತೊಡಗಿಸಿಕೊಂಡ ಎಲ್ಲ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸೂಚಿಸಿತ್ತು. ಶಿಕ್ಷಕ ತರಬೇತಿ ಸಂಸ್ಥೆಗಳ ಎಲ್ಲ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಕಡ್ಡಾಯ ಮಾಡಲಾಗಿತ್ತು. ಐವರು ವಯಸ್ಕ ಅಭ್ಯರ್ಥಿಗಳಿಗೆ ಒಬ್ಬ ವಿದ್ಯಾರ್ಥಿಯನ್ನು ನೇಮಿಸಲಾಗಿತ್ತು. ಸ್ವಯಂಸೇವಕರಾಗಿ ಕೆಲಸ ಮಾಡಿದ ವಿದ್ಯಾರ್ಥಿಗಳು ತಲಾ 2 ಕೃಪಾಂಕಗಳನ್ನು ಪಡೆಯಲಿದ್ದಾರೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

l ಮಧ್ಯಪ್ರದೇಶದಲ್ಲಿ ಪರೀಕ್ಷೆ ತೆಗೆದುಕೊಂಡ 9.25 ಲಕ್ಷ ಅಭ್ಯರ್ಥಿಗಳಲ್ಲಿ 5.91 ಲಕ್ಷ ಮಹಿಳಾ ಅಭ್ಯರ್ಥಿಗಳಿದ್ದರು. ಆರಂಭದಲ್ಲಿ 5.35 ಲಕ್ಷ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಬುಡಕಟ್ಟು ಜಿಲ್ಲೆ ಝಬುವಾದಲ್ಲಿ 58,470 ಮಂದಿ ಪರೀಕ್ಷೆ ಬರೆದಿದ್ದಾರೆ. ಈ ಪೈಕಿ ಮದುಮಗನೊಬ್ಬ ತನ್ನ ಮದುವೆಯ ಹಿಂದಿನ ದಿನ ಪರೀಕ್ಷೆಗೆ ಹಾಜರಾಗಿದ್ದ

l ರಾಜಸ್ಥಾನದ 33 ಜಿಲ್ಲೆಗಳಲ್ಲಿ 3.98 ಲಕ್ಷ ಮಹಿಳೆಯರೂ ಸೇರಿದಂತೆ 5.48 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು

l ತಮಿಳುನಾಡಿನಲ್ಲಿ 92,371 ಪುರುಷರು ಸೇರಿದಂತೆ 5.28 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. 13 ಜಿಲ್ಲೆಗಳಲ್ಲಿ ತೃತೀಯಲಿಂಗಿ ಅಭ್ಯರ್ಥಿಗಳೂ ಇದ್ದರು

l ಉತ್ತರ ಪ್ರದೇಶದ ಎಲ್ಲ 75 ಜಿಲ್ಲೆಗಳಿಂದ 1.46 ಲಕ್ಷ ವಯಸ್ಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

l ಲಡಾಖ್‌ನಿಂದ 7,366 ಜನರು ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದರು

l ಒಡಿಶಾ, ಜಾರ್ಖಂಡ್, ಪಂಜಾಬ್ ಹಾಗೂ ಮೇಘಾಲಯ, ಚಂಡೀಗಡದಲ್ಲೂ ಸಾಕ್ಷರತಾ ಪರೀಕ್ಷೆ ನಡೆದಿತ್ತು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries