HEALTH TIPS

ಮಾರ್ಚ್‌ 23 ಹುತಾತ್ಮರ ದಿನ: ದೇಶಕ್ಕಾಗಿ ಗಲ್ಲಿಗೇರಿದ ಕೆಚ್ಚೆದೆಯ ಈ 3 ವೀರರನ್ನು ಸ್ಮರಿಸುವ ದಿನ

 

ಮಾರ್ಚ್‌ 23 ಹುತಾತ್ಮರ ದಿನ ಅಥವಾ ಶಹೀದ್‌ ದಿನವನ್ನಾಗಿ ಆಚರಿಸಲಾಗುವುದು. ನಮ್ಮ ತಾಯ್ನಾಡಿಗಾಗಿ ಹೋರಾಡಿ ವೀರ ಮರಣವನ್ನಪ್ಪಿದ ವೀರರ ಬಲಿದಾನವನ್ನು ಸ್ಮರಿಸುವ ದಿನ.

 ಈ ದಿನ ಭಾರತದ ವೀರ ಸ್ವಾತಂತ್ರ್ಯ ಹೋರಾಟಗಾರರಾದ ಸುಖದೇವ್‌ ಥಾಪರ್, ಭಗತ್‌ ಸಿಂಗ್‌, ಶಿವರಾಮ್ ರಾಜಗುರು ಈ ವೀರರ ಪುಣ್ಯತಿಥಿಯನ್ನೂ ಆಚರಿಸಲಾಗುವುದು.

ಹುತಾತ್ಮರ ದಿನ ಅಥವಾ ಶಹೀದ್‌ ದಿನದ ಮಹತ್ವ, ಇತಿಹಾಸ ನೋಡೋಣ ಬನ್ನಿ:

ಶಹೀದ್‌ ದಿವಸ

ಮಾರ್ಚ್‌ 23ರಂದು ಭಾರತದ ಮಹಾನ್ ಹೋರಾಟಗಾರರಾದ ಸುಖದೇವ್‌ ಥಾಪರ್, ಭಗತ್‌ ಸಿಂಗ್‌, ಶಿವರಾಮ್ ರಾಜಗುರು ಇವರ ತ್ಯಾಗವನ್ನು ಸ್ಮರಿಸಿ ಅವರಿಗೆ ಕೃತಜ್ಞತೆ ಸಲ್ಲಿಸಲು ಈ ದಿನವನ್ನು ಆಚರಿಸಲಾಗುವುದು.

ದೇಶಕ್ಕಾಗಿ ಗಲ್ಲಿಗೇರಿದ ಕೆಚ್ಚೆದೆಯ ವೀರರು

ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಇವರು ಮೂವರು ಹೇಗಾದರೂ ಸರಿ ಬ್ರಿಟಿಷರನ್ನು ನಮ್ಮ ದೇಶದಿಂದ ಓಡಿಸಬೇಕೆಂದು ವೀರ ಹೋರಾಟ ಮಾಡುತ್ತಿದ್ದರು. 1929 ರಲ್ಲಿ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯ ಮೇಲೆ ಬಾಂಬ್ ದಾಳಿ ಮಾಡಿದರು. ಈ ಕಾರಣಕ್ಕೆ ಇವರನ್ನು ಬಂಧಿಸಿ ಮರಣದಂಡನೆ ಶಿಕ್ಷೆ ನೀಡಲಾಯಿತು.

1931 ಭಾರತೀಯರ ಪಾಲಿಗೆ ಕರಾಳ ದಿನ, ಈ ದಿನ ಭಾರತೀಯರು ಮೂವರು ಮಹಾನ್‌ ಯೋಧರನ್ನು ಕಳೆದುಕೊಂಡರು. ಈ ಮೂವರನ್ನು ಈ ದಿನ ಗಲ್ಲಿಗೇರಿಸಲಾಯಿತು. ಇವರನ್ನು ಗಲ್ಲಿಗೇರಿಸಿದಾಗ ಸುಖದೇವ್‌ ಥಾಪರ್, ಭಗತ್‌ ಸಿಂಗ್ ಅವರಿಗೆ 23 ವರ್ಷ, ರಾಜಗುರು ಅವರಿಗೆ ಕೇವಲ 22 ವರ್ಷ.

 ಅಷ್ಟು ಚಿಕ್ಕ ಪ್ರಾಯದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಉಸಿರು ಚೆಲ್ಲಿದರು. ಇವರನ್ನು ಸ್ಮರಿಸುವ ದಿನವೇ ಶಹೀದ್‌ ದಿವಸ್‌.

ಶಾಂತಿಯುತ ಮಾರ್ಗದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗಲ್ಲ ಎಂದು ಹೋರಾಡಿದ ಕ್ರಾಂತಿಕಾರರು

ರಕ್ತಕ್ಕೆ ರಕ್ತ ಎಂಬುವುದು ಇವರ ಸಿದ್ಧಾಂತವಾಗಿತ್ತು. ಆ ಸಮಯದಲ್ಲಿ ಮಹಾತ್ಮಗಾಂಧಿ ಅಹಿಂಸಾ ಮಂತ್ರ ಹೇಳುತ್ತಿದ್ದರೆ ಇದರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗಲ್ಲ ಎಂದು ದಂಡ ದಶಗುಣಂ ಭವೇತ್ ಎನ್ನುವಂತೆ ಹೋರಾಟಕ್ಕೆ ಇಳಿದ ಮೂವರು ಕ್ರಾಂತಿಕಾರಿ ಯುವಕರಿವರು.

ಬ್ರಿಟಿಷರು ಊಹಿಸರಲೇ ಇಲ್ಲ ಅಂಥ ಎದುರೇಟು ಕೊಟ್ಟವರು ಈ ಮೂವರು ಯುವಕರು. ಬ್ರಿಟಿಷರ ನಿದ್ದೆಗೆಡಿಸಲು ದೆಹಲಿಯ ಸೆಂಟ್ರಲ್ ಅಸೆಂಬ್ಲಿಯ ಮೇಲೆ ಈ ಮೂವರು ಬಾಂಬ್‌ಗಳನ್ನು ಎಸೆದಿದ್ದರು. ಇದರಲ್ಲಿ ಯಾರನ್ನೂ ಸಾಯಿಸುವುದು ಇವರ ಉದ್ದೇಶವಾಗಿರಲಿಲ್ಲ, ಜನರನ್ನು ಬೆದರಿಸಿ ಓಡಿಸುವುದಷ್ಟೇ ಇವರ ಉದ್ದೇಶವಾಗಿತ್ತು.

ಈ ಕಾರಣಕ್ಕೆ ಬಾಂಬ್‌ ಎಸೆದ ಮೇಲೆ ಓಡಿ ಹೋಗದೆ ಅಲ್ಲಿಯೇ ನಿಂತರು. ಇವರನ್ನು ಬಂಧಿಸಿದ ಬ್ರಿಟಿಷರು ಇವರನ್ನು ಬಿಟ್ಟರೆ ಮುಂದೆ ನಮಗೆ ಅಪಾಯ ತಪ್ಪಿದ್ದಲ್ಲ ಎಂದು ಅವರಿಗೆ ಮರಣದಂಡನೆ ನೀಡಿದರು.

ದೇಶದಲ್ಲಿ ಶಹೀದ್‌ ದಿವಸ ಆಚರಣೆ

ಶಹೀದ್‌ ದಿವಸ ಆಚರಿಸಲು ಯಾವುದೇ ಅಧಿಕೃತ ರಜೆಯಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಹಾಗೂ ಇತರ ಸಂಸ್ಥೆಗಳಲ್ಲಿ ಈ ದಿನವನ್ನು ಆಚರಿಸಲಾಗುವುದು.

ಈ ನಾಯಕರಗಳ ಬಗ್ಗೆ ಮತ್ತಷ್ಟು ಮಾಹಿತಿ ನೋಡುವುದಾದರೆ

ಸುಖದೇವ್‌ ಥಾಪರ್

ಇವರು ಮೇ 15, 1907ರಲ್ಲಿ ಜನಿಸುತ್ತಾರೆ. ಬ್ರಿಟಿಷರು ಭಾರತೀಯರು ಮೇಲೆ ಮಾಡುತ್ತಿರುವ ದೌರ್ಜನ್ಯ ನೋಡಿ ಚಿಕ್ಕ ವಯಸ್ಸಿನಲ್ಲಿ ಕ್ರಾಂತಿಕಾರಿ ಮನೋಭಾವದಿಂದ ಬೆಳೆದವರು. ಈ ಕಾರಣ ಬ್ರಿಟಿಷರ ವಿರುದ್ಧ ಹೋರಾಡಲು 'ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ' ಸೇರಿಕೊಂಡರು.

ಪಂಜಾಬ್‌ ಹಾಗೂ ಉತ್ತರ ಭಾರತದ ಹಲವಾರು ಕಡೆ ಸಂಚರಿಸಿ ಬ್ರಿಟಿಷರ ವಿರುದ್ಧ ಹೋರಾಡಲು ಸಮರ್ಥ ಯುವಕರ ತಂಡವನ್ನು ಕಟ್ಟಿದರು.

ಅದರಲ್ಲೂ ಇವರು ಮಾಡಿದ ಲಾಹೋರ್ ಒಳಸಂಚು' ಅಥವಾ 'ಲಾಹೋರ್ ಕಾನ್ಸ್ಪಿರೆಸಿ ಕೇಸ್' ಬ್ರಿಟಿಷರನ್ನು ಬೆಚ್ಚಿ ಬೀಳಿಸಿತು. ಬ್ರಿಟಿಷರು ಲಾಲಾ ಲಜಪತರಾಯರನ್ನು ಲಾಟಿ ಏಟಿನಿಂದ ಕೊಂದ ಪ್ರತೀಕಾರವಾಗಿ ಬ್ರಿಟಿಷ್‌ ಅಧಿಕಾರಿ ಜೆ ಪಿ ಸಾಂಡರ್ಸ್‌ನನ್ನು ಭಗತ್‌ ಸಿಂಗ್‌ ಹಾಗೂ ರಾಜಗುರು ಜೊತೆ ಸೇರಿ ಕೋಂಡರು. 1929ರಲ್ಲಿ ನವದೆಹಲಿಯ ಸೆಂಟ್ರಲ್ ಅಸೆಂಬ್ಲಿ ಹಾಲಿನಲ್ಲಿ ಬಾಂಬ್ ಎಸೆದ ಘಟನೆಯಲ್ಲಿ ಇವರನ್ನು ಬಂಧಿಸಿ ನಂತರ ಗಲ್ಲಿಗೇರಿಸಲಾಗುವುದು.

ಭಗತ್‌ ಸಿಂಗ್‌

ಭಗತ್‌ ಸಿಂಗ್ ಸೆಪ್ಟೆಂಬರ್ 28, 1907ರಲ್ಲಿ ಇಂದಿನ ಪಾಕಿಸ್ತಾನದ ಬಾಂಗಾ ಗ್ರಾಮದಲ್ಲಿ ಜನಿಸಿದರು. 1919ರ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ನೋಡಿ ಚಿಕ್ಕ ಪ್ರಾಯದಲ್ಲಿಯೇ ಕ್ರಾಂತಿಕಾರಿಯಾಗಿ ಬೆಳೆದವರು. ಕೇವಲ 14 ವಯಸ್ಸು ಇರುವಾಗಲೇ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದರು.

ಮಹಾತ್ಮ ಗಾಂಧಿಯವರ ಅಹಿಂಸಾವಾದದ ಬಗ್ಗೆ ಭಗತ್‌ ಸಿಂಗ್‌ಗೆ ಹೆಚ್ಚು ನಂಬಿಕೆ ಇರಲಿಲ್ಲ. ಇವರು ದೇಶಕ್ಕಾಗಿ ವಿವಾಹ ಕೂಡ ಆಗಲಿಲ್ಲ.ದೆಹಲಿಯ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್‌ ಎಸೆದು ಪೋಲೀಸರಿಗೆ ಶರಣಾದರು.
'ಇಂಕ್ವಿಲಾಬ್ ಜಿಂದಾಬಾದ್ ' ಎಂಬ ಪದ ಹುಟ್ಟು ಹಾಕಿದ್ದೇ ಭಗತ್ ಸಿಂಗ್‌.

ಧೈರ್ಯದಿಂದಲೇ ಸಾವನ್ನು ಸ್ವೀಕರಿಸಿದ್ದ ಭಗತ್‌ ಸಿಂಗ್‌

ಅವರು ತಮ್ಮ ತಾಯಿಗೆ " ನಾನು ಗಲ್ಲಿಗೇರುವಾಗ ಖಂಡಿತ ನಗುನಗುತ್ತಿರುತ್ತಾನೆ, ನನ್ನ ಕಣ್ಣಲ್ಲಿ ಸಾವಿನ ಭಯ ಬ್ರಿಟಿಷರು ಕಾಣುವುದಿಲ್ಲ, ನಿನ್ನ ಕಣ್ಣೀರು ನೋಡಿ ಭಗತ್‌ ಸಿಂಗ್‌ ತಾಯಿ ಅಸಾಯಕಳಾಗಿದ್ದಾಳೆ ಎಂದು ಬ್ರಿಟಿಷರು ಭಾವಿಸುವಂತಾಗಬಾರದು. ನಿನ್ನ ಮಗ ಹುತಾತ್ಮ ಎಂದು ಧೈರ್ಯವಾಗಿರು' ಎಂದು ತಾಯಿಯಲ್ಲಿ ಹೇಳಿದ್ದರು.

ಶಿವರಾಮ್‌ ರಾಜಗುರು

ಶಿವರಾಮ್‌ ರಾಜಗುರು 1906ರಲ್ಲಿ ಜನಿಸಿದರು. ಇವರು ಮಹಾರಾಷ್ಟ್ರದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತುಂಬಾ ಬುದ್ಧಿವಂತಾಗಿದ್ದ ಇವರು ಧರ್ಮದ ಬಗ್ಗೆ ಕಲಿಯಲು ವಾರಾಣಸಿಗೆ ಬರುತ್ತಾರೆ. ಇಲ್ಲಿ ಇವವರಿಗೆ ಕ್ರಾಂತಿಕಾರಿ ಹೋರಾಟಗಾರರ ಪರಿಚಯವಾಗುತ್ತೆ. ಇವರು ಚಂದ್ರಶೇಖರ್ ಅಜಾದ್, ಶಹೀದ್ ಭಗತ್‌ ಇವರ ಜೊತೆ ಸೇರಿಕೊಂಡು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗುತ್ತಾರೆ. ಇವರು ಶೂಟಿಂಗ್‌ನಲ್ಲಿ ಪರಿಣಿತರಾಗಿದ್ದರು. ಲಲಾಲಜಪತ್ ರಾಯ್‌ ಅವರನ್ನು ಪೋಲೀಸರು ಕೊಂದಾಗ ಅದಕ್ಕೆ ಪ್ರತೀಕಾರವಾಗಿ ಬ್ರಿಟಿಷ್‌ ಅಧಿಕಾರಿ ಸಾಂಡರ್ಸ್‌ನನ್ನು ಗುಂಡುಕ್ಕಿ ಕೊಂದರು. 1929ರಲ್ಲಿ ನವದೆಹಲಿಯ ಸೆಂಟ್ರಲ್ ಅಸೆಂಬ್ಲಿ ಹಾಲಿನಲ್ಲಿ ಬಾಂಬ್ ಎಸೆದ ಘಟನೆಯಲ್ಲಿ ಇವರು ಕೂಡ ಪ್ರಮುಖರಾಗಿದ್ದರು. ಹಾಗಾಗಿ ಪೊಲೀಸರು ಇವರನ್ನು ಬಂಧಿಸಿ ಭಗತ್‌ ಸಿಂಗ್, ಸುಖದೇವ್‌ ಥಾಪರ್‌ ಜೊತೆಗೆ ಗೆಲ್ಲಿಗೇರಿಸಿದರು.

ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಇಂಥ ಮಹಾನ್‌ ಕ್ರಾಂತಿಕಾರಿ ಹೋರಾಟಗಾರರಿಂದಾಗಿ ದಕ್ಕಿದೆ. ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries