ಮಂಜೇಶ್ವರ: ರಾಷ್ಟ್ರಕವಿ ಗೋವಿಂದ ಪೈಯವರ ಜನ್ಮದಿನಾಚರಣೆಯನ್ನು ಮಾರ್ಚ್ 23 ರಂದು ಗಿಳಿವಿಂಡುವಿನಲ್ಲಿ ಕರ್ನಾಟಕ ಗಡಿ ಅಭವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ ವಿಜ್ರಂಭಣೆಯಿದ ಆಚರಿಸಲು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿಯು ತೀರ್ಮಾನಿಸಿತು.
ಮಾರ್ಚ್ 23 ರಂದು ಮದ್ಯಾಹ್ನ 2:30 ರಿಂದ ಆರಂಭವಾಗುವ ಕವಿಗೋಷ್ಠಿಯಲ್ಲಿ ಸುಮಾರು 10ಕ್ಕಿಂತಲೂ ಮಿಕ್ಕಿದ ಕವಿಗಳು ಭಾಗವಹಿಸುವರು. ಬಳಿಕ ನೃತ್ಯ ಕಾರ್ಯಕ್ರಮಗಳು ಜರುಗಲಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ರವರ ಅಧಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಎಂ.ಕೆ.ಎಂ ಅಶ್ರಫ್ ಉದ್ಘಾಟಿಸುವರು. ಸಭೆಯಲ್ಲಿ ಹಿರಿಯ ವೈದ್ಯರೂ ಸಾಂಸ್ಕøತಿಕ ರಂಗದ ಪ್ರಮುಖರೂ ಆದ ಡಾ.ಕೆ.ರಮಾನಂದ ಬನಾರಿ ಯವರಿಗೆ ಗೋವಿಂದ ಪೈ ಸ್ಮಾರಕ ಪ್ರಶಸ್ತಿಯನ್ನು ಕರ್ನಾಟಕದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ ಸೋಮಶೇಖರ್ ಅವರು ಪ್ರದಾನ ಮಾಡುವರು. ಹಿರಿಯ ರಂಗಕರ್ಮಿ ಶ್ರೀನಿವಾಸ.ಜಿ.ಕಪ್ಪಣ್ಣ ಉಪಸ್ಥಿತರಿರುವರು.
ಈ ಬಗ್ಗೆ ನಡೆದ ಗೋವಿಂದ ಪೈ ಸ್ಮಾರಕ ಸಮಿತಿ ಸಭೆಯ ಅಧ್ಯಕ್ಷತೆಯನ್ನು ಶಿವಪ್ರಕಾಶನ್ ನಾಯರ್ ವಹಿಸಿದ್ದರು. ಸ್ಮಾರಕ ಸಮಿತಿ ಗಿಳಿವಿಂಡಿನ ಅಧ್ಯಕ್ಷ ಉಮೇಶ್.ಎಂ.ಸಾಲಿಯಾನ್ ಸ್ವಾಗತಿಸಿ ವರದಿ ಮಂಡಿಸಿದರು. ಕೆ.ಆರ್ ಜಯಾನಂದ, ಆಶಾ ದಿಲೀಪ್ ಸುಳ್ಯಮೆ, ವಾಸುದೇವ ಮೊದಲಾದವರು ಉಪಸ್ಥಿತರಿದ್ದರು. ಬಾಲಕೃಷ್ಣ ಶೆಟ್ಟಿಗಾರ್ ವಂದಿಸಿದರು.
ಸಂಸ್ಮರಣಾ ಸಮಿತಿ ಕರಪತ್ರ ಬಿಡುಗಡೆ:
ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಮಿತಿಯು ಮಾರ್ಚ್ 23 ರಂದು ಮಂಜೇಶ್ವರ ಹೊಸಂಗಡಿ ಗಿಳಿವಿಂಡುವಿನಲ್ಲಿ ರಾಷ್ಟ್ರಕವಿ ಜನ್ಮದಿನದ ಅಂಗವಾಗಿ ಕರಪತ್ರವನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಬಿಡುಗಡೆ ಮಾಡಿದರು. ಜಿಲ್ಲಾಧಿಕಾರಿ ಚೇಂಬರ್ ನಲ್ಲಿ ನಡೆದ ಸಭೆಯಲ್ಲಿ ಸಮಿತಿ ಕಾರ್ಯದರ್ಶಿ ಉಮೇಶ್ ಎಂ.ಸಾಲಿಯಾನ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ಮತ್ತಿತರರು ಭಾಗವಹಿಸಿದ್ದರು.
ಮಾರ್ಚ್ 23 ರಂದು ಗಿಳಿವಿಂಡುವಿನಲ್ಲಿ ರಾಷ್ಟ್ರಕವಿ ಗೋವಿಂದ ಪೈಯವರ ಜನ್ಮದಿನ ಆಚರಣೆ
0
ಮಾರ್ಚ್ 17, 2023
Tags