ಮುಂಬೈ: 81.73 ಡಾಲರ್ ಎದುರು 24 ಪೈಸೆ ರೂಪಾಯಿ ಏರಿಕೆಯು ಷೇರು ವಹಿವಾಟಿನ ದಿನದ ಆರಂಭ ಕಂಡು ಬಂತು. ಸೋಮವಾರ ನಡೆದ ಈ ವಿದ್ಯಮಾನಕ್ಕೆ ದೇಶಿಯ ಷೇರುಗಳಲ್ಲಿನ ಚೇತರಿಕೆ ಕಾರಣ ಎನ್ನಲಾಗಿದೆ.
'ಜಾಗತಿಕ ವಹಿವಾಟಿನ ಹಿಂಜರಿತ ಹಾಗೂ ವಿದೇಶಿ ಹಣದ ಒಳಹರಿವು ಸುಧಾರಿಸುತ್ತಿದೆ.
ಈ ಹಿನ್ನೆಲೆ, ರೂಪಾಯಿಯನ್ನು ಧನಾತ್ಮಕವಾಗಿ ವಹಿವಾಟಿನಲ್ಲಿ ತೊಡಗಿಸಿಕೊಳ್ಳವ ಸಾಧ್ಯತೆಯಿದೆ' ಎಂದು ದಿ ಫಾರೆಕ್ಸ್ ಟ್ರೇಡ್ ತಿಳಿಸಿದೆ. ಜತೆಗೆ, 'ಡಾಲರ್ ಎದುರು ರೂಪಾಯಿ ಏರಿಕೆಗೆ ವಿದೇಶಿ ಹಣಕಾಸಿನ ಒಳಹರಿವು ಸಹಾಯಕವಾಗಿದೆ' ಎಂದಿದೆ.
ಅಲ್ಲದೇ, ಕಚ್ಚಾ ತೈಲದ ದರದಲ್ಲಿನ ಕುಸಿತ ಕೂಡ ರೂಪಾಯಿ ಚೇತರಿಕೆಯ ಮೂಲವಾಗಿದೆ ಎಂದು ತಿಳಿಸಿದೆ.
ಈ ಮಧ್ಯೆ ರೂಪಾಯಿಯೂ ಸೇರಿ ಆರು ರಾಷ್ಟ್ರಗಳ ಕರೆನ್ಸಿ ಎದುರು ಡಾಲರ್ ಕುಸಿತ ಕಂಡಿದೆ.
ಶುಕ್ರವಾರದಂದು ನಿವ್ವಳ ಖರೀದಿದಾರರಾಗಿರುವ ವಿದೇಶಿ ಬಂಡವಾಳ ಹೂಡಿಕೆದಾರರು 246.24 ಕೋಟಿಗಳ ಷೇರು ಖರೀದಿಸಿದ್ದು, ಅಂದು ರೂಪಾಯಿ ಎದುರು ಡಾಲರ್ 81.97 ಆಗಿತ್ತು ಎಂದು ಅಂಕಿಅಂಶಗಳ ವಿನಿಮಯ ಮಾಹಿತಿ ತಿಳಿಸಿದೆ.