ನವದೆಹಲಿ: ಈ ಜಗತ್ತಿನಲ್ಲಿ ಎಂತೆಂಥಾ ವಿಚಿತ್ರ ಮಂದಿ ಇರ್ತಾರೆ ಅನ್ನೋದಕ್ಕೆ ಈ ಒಂದು ಸ್ಟೋರಿ ತಾಜಾ ಉದಾಹರಣೆ ಆಗಿದೆ. ತನ್ನನ್ನೇ ತಾನೇ ಮದುವೆಯಾದ ಯುವತಿಯೊಬ್ಬಳು ಇದೀಗ ವಿವಾಹವಾದ 24 ಗಂಟೆಗಳಲ್ಲಿ ಡಿವೋರ್ಸ್ ಪಡೆದುಕೊಂಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾಳೆ.ಇದನ್ನು ನೋಡಿದ ಮಂದಿ ಇಂಥವರು ಇರ್ತಾರಾ ಎಂದು ಹುಬ್ಬೇರಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ 25 ವರ್ಷದ ಸೋಫಿ ಮೌರೆ, ತನ್ನನ್ನು ತಾನೇ ಮದುವೆ ಆಗಿರುವುದಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಳು. ಗೌನ್ ಮತ್ತು ಚಿನ್ನದ ಕಿರೀಟವನ್ನು ಧರಿಸಿ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಳು.
ಇಂದು ನನ್ನ ಜೀವನದ ಅತ್ಯಂತ ಸುಂದರ ಕ್ಷಣಗಳು. ನಾನು ಮದುವೆಯ ಉಡುಪನ್ನು ಖರೀದಿಸಿದೆ ಮತ್ತು ನನ್ನನ್ನು ಮದುವೆಯಾಗಲು ಮದುವೆಯ ಕೇಕ್ ಅನ್ನು ಸಹ ಬೇಯಿಸಿದೆ ಎಂದು ಅವರು ಫೆಬ್ರವರಿ 20 ರಂದು ಸೋಫಿ ಮೌರೆ ಟ್ವೀಟ್ ಮಾಡಿದ್ದಾರೆ.
ಸೋಫಿ ಮೌರೆ ಮಾಡಿದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ನಾಂದಿ ಹಾಡಿತು. ಜನರ ಗಮನವನ್ನು ತನ್ನತ್ತ ಸೆಳೆಯಲು ಆಕೆ ಈ ರೀತಿಯ ಪೋಸ್ಟ್ ಮಾಡಿದ್ದಾಳೆ ಟೀಕಾ ಪ್ರಹಾರ ನಡೆಸಿದರು. ಆದರೆ, ಇನ್ನು ಕೆಲವರು ಆಕೆಗೆ ಬೆಂಬಲವನ್ನು ಸೂಚಿಸಿದ್ದರು.
ಅಚ್ಚರಿ ಏನೆಂದರೆ, ಮದುವೆಯಾದ ಮಾರನೇ ಅಂದರೆ, ಫೆ.21ರಂದು ಸೋಫಿ ಮೌರೆ ಮತ್ತೊಂದು ಟ್ವೀಟ್ ಮಾಡಿದ್ದು, ನಾನು ಡಿವೋರ್ಸ್ ತೆಗೆದುಕೊಳ್ಳುವುದನ್ನು ಪರಿಗಣಿಸಿದ್ದೇನೆ ಎಂದು ಹೇಳಿದಳು. ಒಂದು ದಿನ ನಾನು ನನ್ನೊಂದಿಗೆ ಮದುವೆಯಾಗಿದ್ದೇನೆ ಮತ್ತು ನಾನು ಅದನ್ನು ಇನ್ನು ಮುಂದುವರಿಸಲು ಸಾಧ್ಯವಿಲ್ಲ. ಹೀಗಾಗಿ ವಿಚ್ಛೇದನ ತೆಗೆದುಕೊಳ್ಳುವ ಕಡೆ ಗಮನ ಹರಿಸಿದ್ದೇನೆ ಎಂದು ಹೇಳಿದ್ದಾರೆ.
ಸೋಫಿ ಮೌರೆ ಮಾಡಿರುವ ಈ ಟ್ವೀಟ್ ನೆಟ್ಟಿಗರನ್ನು ಕೆರಳಿಸಿದೆ. ನಿನಗೇನು ಹುಚ್ಚಾ ಎಂದು ಜರಿದಿದ್ದಾರೆ. ಒಳ್ಳೆಯ ವಕೀಲರನ್ನು ಹುಡುಕಿಕೋ ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ನಿಮ್ಮ ಡಿವೋರ್ಸ್ ಪ್ರಕರಣ ಇತ್ಯರ್ಥವಾದ ಬಳಿಕ ನನ್ನನ್ನು ಮದುವೆಯಾಗಿ ಎಂದು ಮತ್ತೊಬ್ಬ ನೆಟ್ಟಿಗ ಕಿಚಾಯಿಸಿದ್ದಾರೆ. ಮೂರ್ಖತನಕ್ಕೂ ಒಂದು ಮಿತಿ ಇರುತ್ತದೆ. ಅಸಹ್ಯಕರ ಮನುಷ್ಯಳಿವಳು ಎಂದು ಟೀಕಾಪ್ರಹಾರ ಮಾಡಿದ್ದಾರೆ.