HEALTH TIPS

ಮಾರ್ಚ್ 26ರಂದು ಇಸ್ರೋದಿಂದ ಒನ್​ವೆಬ್​ನ 36 ಉಪಗ್ರಹ ಉಡಾವಣೆ!

Top Post Ad

Click to join Samarasasudhi Official Whatsapp Group

Qries

       ನವದೆಹಲಿ:ಒನ್​ವೆಬ್ ಅಭಿವೃದ್ಧಿಪಡಿಸಿರುವ 36 ಉಪಗ್ರಹಗಳನ್ನು ಮಾರ್ಚ್ 26ರಂದು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧವಾಗಿದೆ. ಒನ್​ವೆಬ್ ಅಭಿವೃದ್ಧಿಪಡಿಸಿರುವ 36 ಉಪಗ್ರಹಗಳನ್ನು ಮಾರ್ಚ್ 26ರಂದು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧವಾಗಿದೆ.
    ಬ್ರಿಟನ್ ಮೂಲದ ನೆಟ್ವರ್ಕ್ ಆಕ್ಸೆಸ್ ಅಸೋಸಿಯೇಟೆಡ್ ಲಿ(ಒನ್​ವೆಬ್)​ ಅನ್ನು ಭಾರತದ ಟೆಲಿಕಾಂ ಪ್ರಮುಖ ಭಾರ್ತಿ ಗ್ರೂಪ್ ಬೆಂಬಲಿಸುತ್ತದೆ. ಮಾರ್ಚ್ 26 ರಂದು ಉಪಗ್ರಹಗಳ ಯಶಸ್ವಿ ಉಡಾವಣೆಯೊಂದಿಗೆ, ಕಂಪನಿಯು ತನ್ನ Gen 1 ಸಮೂಹದ ಜಾಗತಿಕ ಹೆಜ್ಜೆಗುರುತನ್ನು ಪೂರ್ಣಗೊಳಿಸುತ್ತದೆ. OneWeb ಅದಾಗಲೇ ಕಕ್ಷೆಯಲ್ಲಿ 582 ಉಪಗ್ರಹಗಳನ್ನು ಹೊಂದಿದೆ. ಮಾರ್ಚ್ 26ರಂದು 36 ಉಪಗ್ರಹ ಉಡಾವಣೆಯೊಂದಿಗೆ ಒಟ್ಟು ಸಂಖ್ಯೆ 618ಕ್ಕೆ ಏರಿಕೆಯಾಗಲಿದೆ.
    ಈ ಮೂಲಕ OneWeb ಭಾರತ ಸೇರಿದಂತೆ ಜಾಗತಿಕ ವ್ಯಾಪ್ತಿಯನ್ನು ತಲುಪಿಸುವಲ್ಲಿ ಪ್ರಮುಖ ಹೆಜ್ಜೆ ಇಡುತ್ತಿದೆ ಎಂದು ಕಂಪನಿ ಹೇಳಿದೆ.
     OneWeb ಪ್ರಕಾರ, 36 ಉಪಗ್ರಹಗಳ ಎರಡನೇ ಬ್ಯಾಚ್ ಅನ್ನು ಭಾರತೀಯ ಕಾಲಮಾನ ಮಾರ್ಚ್ 26 ರಂದು ಬೆಳಿಗ್ಗೆ 9 ಗಂಟೆಗೆ ಇಸ್ರೋ ರಾಕೆಟ್ LVM3 ಉಡಾವಣೆ ಮಾಡಲಿದೆ. ಇದಕ್ಕೂ ಮೊದಲು 18 ಉಪಗ್ರಹ ಗಳ ಮೊದಲ ಬ್ಯಾಚ್ ಅನ್ನು 2022ರ ಅಕ್ಟೋಬರ್ 23 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ LVM3 ರಾಕೆಟ್ನೊಂದಿಗೆ ಉಡಾವಣೆ ಮಾಡಲಾಗಿತ್ತು.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries