ಮುಂಬೈ: ಮಹಾರಾಷ್ಟ್ರದಲ್ಲಿ ಇಂದು ಕೋವಿಡ್ ದೃಢಪಟ್ಟ 280 ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಸಾವಿಗೀಡಾಗಿದ್ದಾರೆ.
ಈ ಮೂಲಕ ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಮುನ್ಸೂಚನೆ ಸಿಕ್ಕಿದೆ.
ಕಳೆದ ಕೆಲ ದಿನಗಳಿಂದಲೂ ದೇಶದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತುಸು ಹೆಚ್ಚಳ ಕಂಡುಬರುತ್ತಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 81,40,145ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ
24 ಗಂಟೆಗಳಲ್ಲಿ 7,845 ಸ್ವ್ಯಾಬ್ ಟೆಸ್ಟ್ ಮಾಡಲಾಗಿದ್ದು, ಪುಣೆ ವಲಯದಲ್ಲಿ 133,
ಮುಂಬೈನಲ್ಲಿ 101, ನಾಸಿಕ್‌ನಲ್ಲಿ 14 ಮತ್ತು ಕೊಲ್ಲಾಪುರದಲ್ಲಿ 10 ಕೋವಿಡ್ ಪ್ರಕರಣಗಳು
ವರದಿಯಾಗಿವೆ.