ಮಟ್ಟಂಚೇರಿ: ರಾಜ್ಯದಲ್ಲಿ 2800ಕ್ಕೂ ಹೆಚ್ಚು ಪಡಿತರ ಅಂಗಡಿ ಮಾಲೀಕರು ಕೆಲಸ ಬಿಡಲು ಮುಂದಾಗಿದ್ದಾರೆ.
ಆದಾಯ ಕೊರತೆ, ಅಧಿಕಾರಿಗಳ ಕಿರುಕುಳ, ಕಮಿಷನ್ ವಿತರಣೆಯಲ್ಲಿ ವಿಳಂಬ ಹಾಗೂ ಆಹಾರಧಾನ್ಯ ಪೂರೈಕೆಯಲ್ಲಿನ ಗುಣಮಟ್ಟದ ಸಮಸ್ಯೆಯಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ನಿರ್ಧಾರದ ಬಗ್ಗೆ ಹಲವು ಪಡಿತರ ಅಂಗಡಿ ಮಾಲಕರು, ಪಡಿತರ ಅಧಿಕಾರಿಗಳು ಹಾಗೂ ಜಿಲ್ಲಾ ಪೂರೈಕೆ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 92 ಲಕ್ಷ ಕಾರ್ಡ್‍ದಾರರಿಗೆ 14,312 ಪಡಿತರ ಅಂಗಡಿಗಳಿವೆ. ತಿರುವನಂತಪುರ ಜಿಲ್ಲೆಯಲ್ಲೇ ಬಹುತೇಕ ಪಡಿತರ ಅಂಗಡಿ ಮಾಲೀಕರು ಕೈಬಿಡುತ್ತಿದ್ದಾರೆ. ಮಲಪ್ಪುರಂನಲ್ಲಿ ಕಡಿಮೆ. ತಿರುವನಂತಪುರದಲ್ಲಿ 320, ಎರ್ನಾಕುಳಂನಲ್ಲಿ 250, ಮಲಪ್ಪುರಂನಲ್ಲಿ 80 ಪಡಿತರ ಅಂಗಡಿ ಮಾಲೀಕರು ಪಡಿತರ ವೃತ್ತಿಯಿಂದ ತೆರಳಿದ್ದಾರೆ ಎಂದು ವರದಿಯಾಗಿದೆ.
ಆಹಾರ ಸುರಕ್ಷತಾ ಕಾಯ್ದೆ ಜಾರಿಯಾದ ನಂತರ ಪಡಿತರ ಅಂಗಡಿಗಳ ಆದಾಯ ಕಡಿಮೆಯಾಗಿದೆ ಎಂದು ಅಂಗಡಿ ಮಾಲಕರು ದೂರುತ್ತಾರೆ. 2016ರಲ್ಲಿ ಸರಕಾರ ನಿರ್ಧರಿಸಿದ ದರದಲ್ಲಿ ಪಡಿತರ ಅಂಗಡಿ ಮಾಲೀಕರಿಗೆ ವೇತನ ವಿತರಿಸಲಾಗುತ್ತದೆ. ಇದರ ಪ್ರಕಾರ ತಿಂಗಳಿಗೆ 45 ಕ್ವಿಂಟಾಲ್‍ಗಿಂತ ಹೆಚ್ಚು ಅಕ್ಕಿ ಉತ್ಪನ್ನಗಳನ್ನು ಪೂರೈಸುವ ಮಾಲಕರಿಗೆ 18,000 ರೂ.ನೀಡಬೇಕು. ಪೂರೈಕೆ ಕಡಿಮೆಯಾದರೆ ಪ್ರತಿ ಕ್ವಿಂಟಲ್ ಗೆ ಸರಾಸರಿ 17 ರೂ.ನಂತೆ ಕೂಲಿ ನೀಡಲಾಗುತ್ತದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಎಂಟುನೂರಕ್ಕೂ ಹೆಚ್ಚು ಅಂಗಡಿ ಮಾಲಕÀರು 15 ಸಾವಿರಕ್ಕಿಂತ ಕಡಿಮೆ ಹಾಗೂ ಸುಮಾರು ಇನ್ನೂರು ಅಂಗಡಿ ಮಾಲಕರು 10 ಸಾವಿರಕ್ಕಿಂತ ಕಡಿಮೆ ಪಡೆಯುತ್ತಿದ್ದಾರೆ ಎನ್ನುತ್ತಾರೆ ಸಂಘಟನೆಗಳ ಪದಾಧಿಕಾರಿಗಳು. ಅಂಗಡಿ ಬಾಡಿಗೆ, ಸೇಲ್ಸ್ ಮ್ಯಾನ್ ಸಂಬಳ, ವಿದ್ಯುತ್ ಬಿಲ್, ಪ್ರಯಾಣ ವೆಚ್ಚ, ಸ್ಟೇಷನರಿ ವೆಚ್ಚ ಇತ್ಯಾದಿಗಳನ್ನೂ ಸರಿದೂಗಿಸುವುದು ಕಷ್ಟವೆಮದು ಅವಲತ್ತುಕೊಳ್ಳಲಾಗಿದೆ.
ಹೊಸ ಕಾನೂನಿನಂತೆ ಕಾರ್ಡುದಾರರು ತಮ್ಮ ಇಚ್ಛೆಯ ಅಂಗಡಿಗಳಲ್ಲಿ ಪಡಿತರ ಖರೀದಿಸಬಹುದಾಗಿದ್ದು, ಅಂಗಡಿ ಮಾಲಕರ ನಡುವೆ ಪೈಪೆÇೀಟಿ ಏರ್ಪಟ್ಟಿದೆ. ಇದರಿಂದಾಗಿ ಹಲವು ಅಂಗಡಿಗಳಲ್ಲಿ ಮಾರಾಟ ಪ್ರಮಾಣ ತಗ್ಗಿದೆ. ಪ್ರತಿ ಲೀಟರ್ ಸೀಮೆ ಎಣ್ಣೆಗೆ 82 ರೂ.ನಂತೆ ಪೂರೈಕೆಯಾಗುವ 200 ಲೀಟರ್ ಸೀಮೆಎಣ್ಣೆಗೆ 1000 ರೂ.ಗಿಂತ ಕಡಿಮೆ ಕಮಿಷನ್ ಸಿಗುತ್ತಿದೆ. ಈ ಪೈಕಿ ಶಿಪ್ಪಿಂಗ್ ಶುಲ್ಕ ಮತ್ತು ಭರ್ತಿ ಶುಲ್ಕ ಸೇರಿ 600-750 ರೂ. ಮೂರು ತಿಂಗಳ ಸೀಮೆಎಣ್ಣೆ ಸಂಗ್ರಹಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ಪಡಿತರ ಅಂಗಡಿಗಳನ್ನು ನಡೆಸುವುದು ಅಸಾಧ್ಯ ಎಂದು ಮಾಲೀಕರು ಅಧಿಕಾರಿಗಳಿಗೆ ತಿಳಿಸಿರುವರು. ಈ ಕುರಿತು ಅಖಿಲ ಕೇರಳ ಪಡಿತರ ವಿತರಕರ ಸಂಘ ಸೇರಿದಂತೆ ಮೂಲಗಳು ಆಹಾರ ಇಲಾಖೆಯ ಗಮನ ಸೆಳೆದಿವೆ.