ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಆರ್ಷಿಕ ಜಾತ್ರಾ ಮಹೋತ್ಸವ ಏ. 2ರಿಂದ 7ರ ವರೆಗೆ ಜರುಗಲಿದೆ. 2ರಂದು ಬೆಳಗ್ಗೆ 10.30ಕ್ಕೆ ಗಣಪತಿ ಹವನ, ಶ್ರೀ ದೇವರ ರಾಜಾಂಗಣ ಪ್ರವೇಶ, ಧ್ವಜಾರೋಹಣ ನಡೆಯುವುದು. ಪ್ರತಿ ದಿನ ಶ್ರೀ ಮಹಾಲಿಂಗೇಶ್ವರ ತಮಡದಿಂದ ಭಜನೆ, ಬೆಳಗ್ಗೆ ಹಾಗೂ ರಾತ್ರಿ ಶ್ರೀ ದಏವರ ಉತ್ಸವ ಬಲಿ ನಡೆಯುವುದು.
3ರಂದು ಮಧ್ಯಾಹ್ನ 12ರಿಂದ ಬಜಕೂಡ್ಲು ಶ್ರೀದುರ್ಗಾ ಬಂಟರ ಮಹಿಳಾ ಭಜನಾಸಂಘದಿಂದ ಭಜನೆ ನಡೆಯುವುದು. 4ರಂದು ನಡುದೀಪೋತ್ಸವ ಅಂಗವಾಗಿ ಮಧ್ಯಾಹ್ನ 12ರಿಂದ ಪೆರ್ಲ ಗಾನಸುಧಾ ಸಂಗೀತ ಶಾಲೆ ಸದಸ್ಯರಿಂದ ಭಕ್ತಿಸಂಗೀತ, ರಾತ್ರಿ 8ಕ್ಕೆ ದೀಪೋತ್ಸವ, ಶ್ರೀದೇವರ ಪಡುಭಾಗಕ್ಕೆ ಸವಾರಿಕಟ್ಟೆಪೂಜೆ ನಡೆಯುವುದು. 5ರಂದು ರಥೋತ್ಸವ ಅಂಗವಾಗಿ ಬೆಳಗ್ಗೆ 10ಕ್ಕೆ ಶ್ರೀದೇವರ ಬಲಿ ಉತ್ಸವ, ಅಯ್ಯಂಗಾಯಿ ದರ್ಶನ ಬಲಿ, ಮಧ್ಯಾಹ್ನ 12ಕ್ಕೆ ಪೆರ್ಲ ಶ್ರೀ ಅಯ್ಯಪ್ಪ ಸ್ವಾಮಿ ಭಜನಾಸಂಘದಿಂದ ಭಜನೆ, ರಾತ್ರಿ 9ರಿಂದ ಶ್ರೀದೇವರ ಭೂತಬಲಿ, ಕಟ್ಟೆಪೂಜೆ, ರಥೋತ್ಸವ, ಸುಡುಮದ್ದುಪ್ರದರ್ಶನ, ದರ್ಶನ, ಶಯನ ನಡೆಯುವುದು. 6ರಂದು 1.30ಕ್ಕೆ ಶ್ರೀದೇವರ ಬಲಿ, ಕಟ್ಟೆಪೂಜೆ, ಅವಭೃತ ಸ್ನಾನ, ದರ್ಶನಬಲಿ, ಬಟ್ಟಲು ಕಾಣಿಕೆ, ಧ್ವಜಾವರೋಹನ ನಡೆಯುವುದು. ಮಧ್ಯಾಹ್ನ 2ಗಂಟೆಗೆ ಕೃಷ್ಣಕಿಶೋರ್ ಪೆರ್ಮುಖಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ನಡೆಯುವುದು. ಈ ಸಂದರ್ಭ ಮನೆ ಮನೆ ಭಜನಾ ಅಭಿಯಾನದ ಉದ್ಘಾಟನೆ ನಡೆಯುವುದು. 7ರಂದು ಬೆಳಗ್ಗೆ 10ರಿಂದ ಶ್ರೀ ವ್ಯಾಘ್ರಚಾಮುಂಡಿ ದೈವದ ನೇಮ ನಡೆಯುವುದು.
ಏ. 2ರಿಂದ ಬಜಕೂಡ್ಲು ಜಾತ್ರಾಮಹೋತ್ಸವ
0
ಮಾರ್ಚ್ 27, 2023