ಮುಳ್ಳೇರಿಯ: ಮವ್ವಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಬಲಿವಾಡು ಕೂಟ ಹಾಗೂ ನಿಧಿ ಸಮರ್ಪಣಾ ಕಾರ್ಯಕ್ರಮ ಎಪ್ರಿಲ್ 2 ಭಾನುವಾರ ಜರಗಲಿರುವುದು. ಬೆಳಗ್ಗೆ 9ರಿಂದ ಮವ್ವಾರು ಶ್ರೀ ಕೃಷ್ಣ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ, ಬೆಳಗ್ಗೆ 10 ಕ್ಕೆ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ ಇವರ ಆಗಮನ ಹಾಗು ಪೂರ್ಣಕುಂಭ ಸ್ವಾಗತ, ಸಭಾಕಾರ್ಯಕ್ರಮದ ಪ್ರಾರಂಭ. ಶ್ರೀಗಳಿಂದ ದೀಪಪ್ರಜ್ವಲನೆ, ನಿಧಿಸಮರ್ಪಣೆ ಉದ್ಘಾಟನೆ, ಆಶೀರ್ವಚನ ನೀಡುವರು. ಮೊಕ್ತೇಸರ ವಕೀಲ ನಾರಾಯಣ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು.
ಕಾಸರಗೋಡಿನ ಮೂಳೆ ತಜ್ಞ ಬಲೆಕ್ಕಳ ಡಾ ಅನಂತ ಪದ್ಮನಾಭ ಭಟ್, ವಸಂತಿ ಟೀಚರ್ ಅಗಲ್ಪಾಡಿ, ಅನ್ನಪೂರ್ಣೇಶ್ವರೀ ಹೈಸ್ಕೂಲ್ ಅಗಲ್ಪಾಡಿ ಇಲ್ಲಿನ ಅಧ್ಯಾಪಕ ಹರಿನಾರಾಯಣ ಶಿರಂತಡ್ಕ- ಕೋಟೆ, ಬೆಟ್ಟಂಪಾಡಿ ನವೋದಯ ಹೈಸ್ಕೂಲ್‍ನ ಅಧ್ಯಾಪಿಕೆ ಭುವನೇಶ್ವರಿ, ಅನ್ನಪೂರ್ಣೇಶ್ವರೀ ಹೈಸ್ಕೂಲ್ ಅಗಲ್ಪಾಡಿ ಇಲ್ಲಿನ ಅಧ್ಯಾಪಕ ಉದಯನಾರಾಯಣ ಯು ಉಪ್ಪಂಗಳ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಅನಂತ ಭಟ್ ಕುರುಮುಜ್ಜಿ, ಕಾರ್ಯಾಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟಕ್ಕುಂಜ, ಮುದ್ರಣ ಹಾಗೂ ಸಾಂಸ್ಕøತಿಕ ವಿಭಾಗದ ಚೇರ್ಮೇನ್ ಕೆ ವಿ ರಮೇಶ ಶರ್ಮ ಕುರುಮುಜ್ಜಿ ಉಪಸ್ಥಿತರಿರುವರು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಅನ್ನಪ್ರಸಾದದೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.
ಏಪ್ರಿಲ್ 2 ರಂದು ಮವ್ವಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಿಧಿ ಸಮರ್ಪಣೆ
0
ಮಾರ್ಚ್ 30, 2023
Tags