ಪೆರ್ಲ:ಬಜಕೂಡ್ಲು
ಶ್ರೀ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೆ ಬ್ರಹ್ಮಶ್ರೀ ದೇಲಂಪಾಡಿ ಅನಿರುದ್ಧ
ತಂತ್ರಿ ಅವರ ನೇತೃತ್ವದಲ್ಲಿ ಏ.2ರಿಂದ ಏ.7ರವರೆಗೆ ನಾನಾ ಕಾರ್ರ್ಯಕ್ರಮಗಳೊಂದಿಗೆ
ಜರುಗಲಿದೆ.
ಏ.2ರಂದು ಬೆಳಗ್ಗೆ 7.30ಕ್ಕೆ ಉಷಃ ಪೂಜೆ, 10.30ಕ್ಕೆ ಗಣಪತಿ ಹೋಮ,
ನಡೆಯಲ್ಲಿ ಪ್ರಾರ್ಥನೆ, ಶ್ರೀ ದೇವರ ರಾಜಾಂಗಣ ಪ್ರವೇಶ, ಧ್ವಜಾರೋಹಣ, ನವಕಾಭಿಷೇಕ,
ತುಲಾಭಾರ ಸೇವೆ, ಮಹಾಪೂಜೆ, ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ ಭಜನೆ,
ಮಧ್ಯಾಹ್ನ 12ರಿಂದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದವರಿಂದ ಭಜನೆ, ೧ರಿಂದ
ಅನ್ನ ಸಂತರ್ಪಣೆ, ರಾತ್ರಿ 8 ರಿಂದ ಶ್ರೀಭೂತಬಲಿ, ಕಟ್ಟೆಪೂಜೆ, ಏ.3ರಂದು ಬೆಳಗ್ಗೆ
7.30ಕ್ಕೆ ಉಷಃ ಪೂಜೆ, 10ಕ್ಕೆ ಶ್ರೀಬಲಿ, ದರ್ಶನಬಲಿ, ನವಕಾಭಿಷೇಕ, ಮಹಾಪೂಜೆ,
ಮಧ್ಯಾಹ್ನ 12ರಿಂದ ಬಜಕೂಡ್ಲು ಶ್ರೀ ದುರ್ಗಾ ಬಂಟರ ಮಹಿಳಾ ಸಂಘದ ಭಜನೆ, ೧ರಿಂದ
ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಶ್ರೀಭೂತಬಲಿ, ಕಟ್ಟೆಪೂಜೆ, ಏ.4ರಂದು ಬೆಳಗ್ಗೆ
7.30ಕ್ಕೆ ಉಷಃ ಪೂಜೆ, 10ಕ್ಕೆ ಶ್ರೀಬಲಿ, ನವಕಾಭಿಷೇಕ, ಮಹಾಪೂಜೆ, ಮಧ್ಯಾಹ್ನ 12ಕ್ಕೆ
ಪೆರ್ಲ ಗಾನಸುಧಾ ಸಂಗೀತ ಶಾಲೆ ಸದಸ್ಯರ ಭಕ್ತಿ ಸಂಗೀತ, ೧ರಿಂದ ಅನ್ನಸಂತರ್ಪಣೆ, ರಾತ್ರಿ
8ಕ್ಕೆ ದೀಪೋತ್ಸವ, ಶ್ರೀಭೂತಬಲಿ, ಪಡುಭಾಗಕ್ಕೆ ಸವಾರಿ, ಕಟ್ಟೆಪೂಜೆ, ಏ. 5ರಂದು
ಬೆಳಗ್ಗೆ 7.30ಕ್ಕೆ ಉಷಃಪೂಜೆ, ೧೦ಕ್ಜೆ ಶ್ರೀಬಲಿ, ಅಯ್ಯಂಗಾಯಿ ದರ್ಶನ ಬಲಿ,
ನವಕಾಭಿಷೇಕ, ಮಹಾಪೂಜೆ, ಮಧ್ಯಾಹ್ಮ 12ರಿಂದ ಪೆರ್ಲ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘದ
ಭಜನೆ, ಅನ್ನಸಂತರ್ಪಣೆ, ರಾತ್ರಿ 9ರಿಂದ ಶ್ರೀಭೂತಬಲಿ, ಕಟ್ಟೆಪೂಜೆ, ರಥೋತ್ಸವ, ಬೆಡಿ,
ದರ್ಶನ, ಶಯನ, ಏ.6ರಂದು ಬೆಳಗ್ಗೆ ಕವಾಟೋದ್ಘಾಟನೆ, ಜಲದ್ರೋಣಿ ಪೂಜೆ, ಅಭಿಷೇಕ,
ಹಣ್ಣುಕಾಯಿ ಸಮರ್ಪಣೆ, ಯಾತ್ರಾಹೋಮ, ಮಹಾಪೂಜೆ, ಮಧ್ಯಾಹ್ನ 1.30ರ ವರೆಗೆ ಅನ್ನ
ಸಂತರ್ಪಣೆ ಬಳಿಕ ಶ್ರೀಬಲಿ, ಕಟ್ಟೆಪೂಜೆ, ಅವಭೃತ ಸ್ನಾನ, ದರ್ಶನಬಲಿ, ರಾಜಾಂಗಣದಲ್ಲಿ
ಶ್ರೀಮುಡಿ ಗಂಧಪ್ರಸಾದ ವಿತರಣೆ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ,
ಮಧ್ಯಾಹ್ನ 2ರಿಂದ ಕೃಷ್ಣಕಿಶೋರ ಪೆರ್ಮುಖ ಮತ್ತು ಬಳಗದಿಂದ ಭಜನಾ ಸಂಕೀರ್ತನೆ ಮತ್ತು ಮನೆ
ಮನೆ ಭಜನೆ ಅಭಿಯಾನದ ಉಧ್ಘಾಟನ ಸಮಾರಂಭ, ಏ.7ರಂದು ಬೆಳಗ್ಗೆ 10ರಿಂದ ಶ್ರೀ ವ್ಯಾಘ್ರ
ದೈವ(ಪಿಲಿಭೂತ)ದ ನೇಮ ಜರುಗಲಿದೆ.