ನವದೆಹಲಿ: ಜಗತ್ತಿನಾದ್ಯಂತ ಉದ್ಯೋಗ ಕಡಿತಗಳು ನಡೆಯುತ್ತಿದೆ. ಈಗಾಗಲೇ ಆರ್ಥಿಕ ನಷ್ಟದಿಂದಾಗಿ ಹಲವು ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡಿದೆ. ಇದೀಗ ಸ್ವಿಸ್ ತಂತ್ರಜ್ಞಾನ ಸಂಸ್ಥೆ ಲಾಜಿಟೆಕ್ 300 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ.
ಕಂಪ್ಯೂಟರ್ ಬಿಡಿಭಾಗಗಳ ಮಾರಾಟದಲ್ಲಿ ಕುಸಿತವುಂಟಾಗಿದ್ದು, ಇದರಿಂದ ಕಂಪನಿಯ ಆರ್ಥಿಕತೆಯೂ ನಷ್ಟದಲ್ಲಿ ಸಿಲುಕಿದೆ. ಕಂಪನಿಯು ಆರ್ಥಿಕ ನಷ್ಟವನ್ನು ಸರಿದೂಗಿಸಲು ಉದ್ಯೋಗ ಕಡಿತದ ಮೊರೆ ಹೋಗಿದೆ. ಲಾಜಿಟೆಕ್ ಮಾರ್ಚ್ 2022 ರ ಹೊತ್ತಿಗೆ 8,200 ಉದ್ಯೋಗಿಗಳನ್ನು ಹೊಂದಿತ್ತು. ಇದೀಗ 300 ಉದ್ಯೋಗಿಗಳು ವಜಾಗೊಳ್ಳಲಿದ್ದಾರೆ.
ಲಾಜಿಟೆಕ್‌ನ ಆದಾಯವು ಮೂರನೇ ತ್ರೈಮಾಸಿಕದ ಅವಧಿಯಲ್ಲಿ ಹಿಂದಿನ ವರ್ಷಕ್ಕಿಂತ 22 ಶೇಕಡಾ ಕಡಿಮೆಯಾಗಿದೆ. ಗೇಮಿಂಗ್ ಮಾರಾಟವು ಶೇಕಡಾ 16 ರಷ್ಟು ಮತ್ತು ವೀಡಿಯೊ ಗೇಮಿಂಗ್ ಸಂಬಂಧಿಸಿದ ವಸ್ತುಗಳ ಮಾರಾಟವು 21 ಶೇಕಡಾ ಕಡಿಮೆಯಾಗಿದೆ. ಕೀಬೋರ್ಡ್‌ಗಳ ಮಾರಾಟವು ಶೇಕಡಾ 22 ರಷ್ಟು ಮತ್ತು ಪಾಯಿಂಟಿಂಗ್ ಸಾಧನಗಳ ಮಾರಾಟವು ಶೇಕಡಾ 14 ರಷ್ಟು ಕಡಿಮೆಯಾಗಿದೆ. ಹೀಗಾಗಿ ಕಂಪನಿಯು ಉದ್ಯೋಗಿಗಳನ್ನು ವಜಾ ಮಾಡುತ್ತಿದೆ.