ಕಾಸರಗೋಡು: ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಾರ್ಷಿಕ ಜಾತ್ರೆಯು ಮಾರ್ಚ್ 30ರಿಂದ ಏಪ್ರಿಲ್ 3 ರವರೆಗೆ ದೈವಗಳ ನೇಮ-ಬಂಡಿ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಎ 30 ರಂದು ಕೋಟೆಕುಂಜ ಬಳಿಯ ಮಾಳ್ಯ ಮೂಲ ಸ್ಥಾನದಿಂದ ಶ್ರೀ ದೈವಗಳ ಕೀರ್ವಾಳು ಸಹಿತ ಭಂಡಾರ ಶ್ರೀ ದೈವಸ್ಥಾನಕ್ಕೆ ವಾದ್ಯ ಘೋಷಗಳ ಮೆರವಣಿಗೆಯಲ್ಲಿ ಬರಮಾಡಿ ಕ್ಕೊಳಲಾಗುವುದು. ರಾತ್ರಿ 8.30ಕ್ಕೆ ಶ್ರೀ ದೈವಸ್ಥಾನದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯುತ್ತಾಯ ವಿಷ್ಣು ಅಸ್ರ ಅವರು ಧ್ವಜಾರೋಹಣ ನಡೆಸುವರು
ಏ.1ರಂದು ಮಧ್ಯಾಹ್ನ 1ಗಂಟೆಗೆ ಶ್ರೀ ಕಿನ್ನಿಮಾಣಿ ದಐವದ ನೇಮ ನಡೆಯುವುದು. 2ರಂದು ಮಧ್ಯಾಹ್ನ 1ಗಂಟೆಗೆ ಶ್ರೀ ಪೂಮಾಣಿ ದೈವ ನೇಮೋತ್ಸವ ರಾತ್ರಿ 8ರಿಂದ 8.30ರೊಳಗೆ ಪೇರಾಲ್ ಕಣ್ಣೂರಿನಿಂದ ಶ್ರೀ ಬೀರ್ಣಾಳ್ವ ದೈವ ಹಾಗೂ ಪುತ್ತೂರು ಕೊಟ್ಯರಿಂದ ಶ್ರೀ ಧೂಮಾವತೀ ದೈವ ಭಂಡಾರ ಆಗಮಿಸುವುದು.
ಏ. 3ರಂದು ಮಧ್ಯಾಹ್ನ 1ಗಂಟೆಗೆ ಶ್ರೀ ಬೀರ್ಣಾಳ್ವ ದೈವ ನೇಮೋತ್ಸವ, ಸಂಜೆ 3.30ಕ್ಕೆ ಶ್ರೀ ಧೂಮಾವತೀ ದೈವ ನೇಮೋತ್ಸವ ನಡೆಯುವುದು. ಏ.1ರಂದು ರಾತ್ರಿ 10.30ಕ್ಕೆ ಪಾಪೆ ಬಂಡಿ ಉತ್ಸವ, ಏ 2 ರಂದು ರಾತ್ರಿ 11.30ಕ್ಕೆ ಪಾಪೆ ಬಂಡಿ ಉತ್ಸವ ವಿಶೇಷ ಸುಡುಮದ್ದು ಪ್ರದರ್ಶನ ನಡೆಯುವುದು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಾ. 31ರಂದು ರಾತ್ರಿ 7ಕ್ಕೆ ಯಕ್ಷಗಾನ ಬಯಲಾಟ - ಮತ್ಸ್ಯಾವತಾರ ಅಗ್ರ ಪೂಜೆ (ಶ್ರೀರಾಮ ಯಕ್ಷಗಾನ ಕಲಾಸಂಘ ಬೆದ್ರಡ್ಕ), ಏ. 1ರಂದು ಸಂಜೆ 6ಕ್ಕೆ ಕುಣಿತ ಭಜನೆ (ಶ್ರೀ ಪಾಡಂಗರ ಭಗವತಿ ಮಹಿಳಾ ತಂಡ ), ರಾತ್ರಿ 7ಕ್ಕೆ ಸ್ಯಾಕ್ಸೋಫೆÇೀನ್ ವಾದನ ( ಬೆದ್ರಡ್ಕ ಬಾಲಕೃಷ್ಣ ದೇವಾಡಿಗ ತಂಡ)
ರಾತ್ರಿ 7.40ಕ್ಕೆ ತಿರುವಾದಿರ-ಕೈ ಕೊಟ್ಟು ಕಳಿ (ಮೋರಾಶ್ರೀ ಭಗವತಿ ತಂಡ,ಭಗವತಿ ನಗರ, ರಾತ್ರಿ 8ಕ್ಕೆ ನೃತ್ಯ ವೈವಿಧ್ಯ (ಬೆದ್ರಡ್ಕ ಬಾಲ ಗೋಕಲ ಹಾಗೂ ಊರ ಬಾಲ ಕಲಾವಿದರಿಂದ)ನಡೆಯುವುದು. ಏ 2ರಂದು ರಾತ್ರಿ 7ಕ್ಕೆ ಕುಣಿತ ಭಜನೆ ( ಪುಳ್ಳೂರು ಶ್ರೀ ಮಹಾದೇವ ಭಜನಾ ಸಂಘ), ರಾತ್ರಿ 8ಕ್ಕೆ: ಕೈ ಕೊಟ್ಟುಕ್ಕಳಿ (ಮೊರಾಶ್ರೀ ಮಹಾದೇವ ನಗರ ಪೆರಿಯಡ್ಕ) ರಾತ್ರಿ 9ಕ್ಕೆ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಭಕ್ತಿಗಾನ ವೈಭವ ನಡೆಯುವುದು.
ಏಪ್ರಿಲ್ 3 ರಂದು ರಾತ್ರಿ 9ಕ್ಕೆ ಶ್ರೀ ದೈವಸ್ಥಾನದ ಆರಾಟ್ ಸ್ನಾನ ಕೆರೆಯಾದ ಉಜಿರೆ ಕೆರೆಯಲ್ಲಿ ಆರಾಟ್ ಉತ್ಸವ - ಅವಭೃತ ಸ್ನಾನ ನಡೆಯಲಿದೆ. ನಂತರ ಧ್ವಜಾವರೋಹಣದೊಂದಿಗೆ ಬೆದ್ರಡ್ಕ ಜಾತ್ರೆ ಸಂಪನ್ನಗೊಳ್ಳಲಿದೆ
ಮಾ. 30ರಿಂದ ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ ವಾರ್ಷಿಕ ನೇಮ, ಬಂಡಿ ಉತ್ಸವ
0
ಮಾರ್ಚ್ 28, 2023