ಬದಿಯಡ್ಕ: ಬದಿಯಡ್ಕ ಗ್ರಾಮದ ಪ್ರತಿಷ್ಠಿತ ಪೆರಡಾಲಗುತ್ತು ತರವಾಡು ಮನೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ದೈವಗಳ ನೇಮೋತ್ಸವ ಮಾರ್ಚ್ 30 ರಿಂದ ಏಪ್ರಿಲ್ ಒಂದರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಮಾ. 30 ರಂದು ಶುಕ್ರವಾರ ಸಂಜೆ 5. ಕ್ಕೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, 5:30 ಕ್ಕೆ ಆಚಾರ್ಯವರಣ, ದೇವತಾ ಪ್ರಾರ್ಥನೆ, ಪುಣ್ಯಾಹವಾಚನ,ಸ್ಥಳ ಶುದ್ಧಿ, ಪ್ರಾಣಶುದ್ದಿ, ಹೊಸ ಮೊಗ ಆಯುಧಗಳ ಜಲಾಧಿವಾಸ, ವಾಸ್ತುಬಲಿ ನಡೆಯಲಿದೆ. 31 ರಂದು ಶುಕ್ರವಾರ ಬೆಳಿಗ್ಗೆ 6 ರಿಂದ ದ್ವಾದಶ ನಾಳಿಕೇರ ಗಣಪತಿ ಹವನ, ಬ್ರಹ್ಮಕಲಶಪೂಜೆ, 10.26 ರಿಂದ 11.07ರ ವೃಷಭಲಗ್ನ ಶುಭಮುಹೂರ್ತದಲ್ಲಿ ಶ್ರೀ ಪಡ್ಡಾಯಿ ಧೂಮಾವತಿ, ಶ್ರೀಕುಪ್ಪೆ ಪಂಜರ್ಲಿ, ಶ್ರೀ ಕೊರತಿ, ಶ್ರೀ ಗುಳಿಗ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ನಾಗದೇವರ ಪುನರ್ ಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅಪರಾಹ್ನ 12.45ಕ್ಕೆ ಹರಿಸೇವೆ, ಮಧ್ಯಾಹ್ನ 1.ಕ್ಕೆ ಅನ್ನದಾನ, 2.30 ರಿಂದ ಭಜನಾ ಸಂಕೀರ್ತನ, ಅಪರಾಹ್ನ 3.30ಕ್ಕೆ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಪಾದಂಗಳವÀರ ಆಗಮನ, ಪೂರ್ಣಕುಂಭ ಸ್ವಾಗತ, ಆಶೀರ್ವಚನ, ಮಂತ್ರಾಕ್ಷತೆ ನಡೆಯಲಿದೆ. ಈ ಸಂದರ್ಭ ವಾಸ್ತುಶಿಲ್ಪಿ ರಮೇಶ ಕಾರಂತ ಬೆದ್ರಡ್ಕ, ಯಜಮಾನ ಪಿ.ಜಿ. ಚಂದ್ರಹಾಸ ರೈ ಉಪಸ್ಥಿತರಿರುವರು. ಸಂಜೆ 5 ಕ್ಕೆ ಶ್ರೀ ಗುಳಿಗನ ಕೋಲ, ರಾತ್ರಿ 7.30ಕ್ಕೆ ಭಂಡಾರ ಏರಿಸುವುದು, ರಾತ್ರಿ 8:30 ಕ್ಕೆ ಶ್ರೀ ದೈವಗಳ ತೊಡಂಙಲ್, ಮೋಂದಿ ಕೋಲ, ರಾತ್ರಿ 9.ಕ್ಕೆ ಅನ್ನದಾನ, 9:30 ಕ್ಕೆ ಶ್ರೀಕೊರತಿ ದೈವದ ಕೋಲ, 10:30 ಕ್ಕೆ ಶ್ರೀ ಕುಪ್ಪೆ ಪಂಜುರ್ಲಿ ದೈವದ ನೇಮೋತ್ಸವ, ಪ್ರಸಾದ ವಿತರಣೆ ನಡೆಯಲಿದೆ. ಏ. 1 ರಂದು ಬೆಳಿಗ್ಗೆ 10 ಕ್ಕೆ ಧರ್ಮದೈವ ಶ್ರೀ ಪಡ್ಡಾಯಿ ಧೂಮಾವತಿ ದೈವದ ನೇಮೋತ್ಸವ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1.ಕ್ಕೆ ಅನ್ನದಾನ, ಅಪರಾಹ್ನ 3.ಕ್ಕೆ ಭಂಡಾರ ಇಳಿಸುವುದರೊಂದಿಗೆ ಪ್ರತಿಷ್ಠಾ ಉತ್ಸವ ಸಮಾರೋಪಗೊಳ್ಳಲಿದೆ.