HEALTH TIPS

ಆಧಾರ್-ಪ್ಯಾನ್ ಜೋಡಣೆಗೆ ಮಾರ್ಚ್ 31 ಕೊನೆಯ ದಿನ: ಜೋಡಣೆ ಮಾಡದಿದ್ದಲ್ಲಿ ಈ ಪ್ರಕ್ರಿಯೆ ಅನುಸರಿಸಿ..

 

            ಬೆಂಗಳೂರು: ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಮಾಡುವುದಕ್ಕೆ 1000 ರೂಪಾಯಿ ದಂಡ ಸಹಿತ ಮಾರ್ಚ್ 31 ರಂದು ಕೊನೆಯ ದಿನವಾಗಿದೆ. 

                ನಿರ್ದಿಷ್ಟ ಸೇವೆಗಳನ್ನು ಪಡೆಯುವುದಕ್ಕೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಾಗಿದ್ದು, ಐಟಿಆರ್ ಎಸ್ ಸಲ್ಲಿಸುವುದಕ್ಕೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಲ್ಲ. ಆದರೆ ಐಟಿ ಇಲಾಖೆ ಆಧಾರ್ ಪ್ಯಾನ್ ಕಾರ್ಡ್ ಜೋಡಣೆಯಾಗದೇ ಇದ್ದಲ್ಲಿ ರಿಟರ್ನ್ಸ್ ಪ್ರಕ್ರಿಯೆಯನ್ನು ಮುಂದುವರೆಸುವುದಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ. 

                 ಹಲವರು ಈಗಾಗಲೇ ಜೋಡಣೆ ಮಾಡುತ್ತಿದ್ದು ಇನ್ನೂ ಕೆಲವರು ಜೋಡಣೆಯಾಗಿದೆಯೇ ಇಲ್ಲವೇ ಎಂಬುದನ್ನು ಮರೆತಿದ್ದಾರೆ. ಆಧಾರ್-ಪ್ಯಾನ್ ಜೋಡಣೆಯಾಗಿದೆಯೇ ಇಲ್ಲವೇ? ಎಂಬುದನ್ನು ತಿಳಿಯುವುದಕ್ಕೆ ಆನ್ ಲೈನ್ ಹಾಗೂ ಆಫ್ ಲೈನ್ ಗಳಲ್ಲಿ ಅವಕಾಶವಿದೆ.

ಆನ್ ಲೈನ್ ನಲ್ಲಿ ಪರಿಶೀಲಿಸುವುದು ಹೇಗೆ? 

  1. ಆದಾಯ ತೆರಿಗೆ ಇ-ಫೈಲಿಂಗ್ ವೆಬ್ ಸೈಟ್ (https://onlineservices.tin.egov-nsdl.com/etaxnew/tdsnontds.jsp) ಗೆ ಭೇಟಿ ನೀಡಿ, ಆಧಾರ್ ಸ್ಟೇಟಸ್ ಎಂಬ ಆಯ್ಕೆ ಪರಿಶೀಲಿಸಿ. 
  2. ಪ್ಯಾನ್- ಆಧಾರ್ ನಂಬರ್ ನಮೂದಿಸಿ 
  3. ಅಲ್ಲಿ View Link Aadhaar Status ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಮುಂದಿನ ಪರದೆಯಲ್ಲಿ ಸ್ಟೇಟಸ್ ಪ್ರಕಟವಾಗಲಿದೆ. 

ಒಂದು ವೇಳೆ ಜೋಡಣೆಯಾಗದೇ ಇದ್ದಲ್ಲಿ ಏನು ಮಾಡಬೇಕು? 

ಪರಿಶೀಲನೆ ವೇಳೆ ಜೋಡಣೆಯಾಗದೇ ಇರುವುದು ಕಂಡುಬಂದಲ್ಲಿ ಈ ಕ್ರಮಗಳನ್ನು ಅನುಸರಿಸಬಹುದಾಗಿದೆ. 

ಗ್ರಾಹಕರು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ ಸಟ್ ಮೂಲಕ ಆಧಾರ್-ಪ್ಯಾನ್ ಜೋಡಣೆ ಮಾಡಬಹುದಾಗಿದೆ. ಇದಕ್ಕೂ ಮುನ್ನ ದಂಡ ಪಾವತಿಸಬೇಕಿರುವುದರಿಂದ ಗ್ರಾಹಕರು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (NSDL) ಪೋರ್ಟಲ್ ಗೆ ಭೇಟಿ ನೀಡಿಬೇಕಾಗುತ್ತದೆ. ಮತ್ತು ಚಲನ್ ಸಂಖ್ಯೆ. ITNS 280 ರ ಅಡಿಯಲ್ಲಿ ಮೇಜರ್ ಹೆಡ್ 0021 (ಕಂಪನಿಗಳನ್ನು ಹೊರತುಪಡಿಸಿ ಆದಾಯ ತೆರಿಗೆ) ಮತ್ತು ಮೈನರ್ ಹೆಡ್ 500 (ಇತರ ರಸೀದಿಗಳು) ನೊಂದಿಗೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. 

ಪ್ರಕ್ರಿಯೆಗಳ ವಿವರ

  1. ಆಧಾರ್-ಪ್ಯಾನ್ ಜೋಡಣೆಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ ಸೈಟ್ ಗೆ ಭೇಟಿ ನೀಡಿ, ಅಲ್ಲಿ ದಂಡ ಪಾವತಿಯನ್ನು ಕೇಳಲಾಗುತ್ತದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ಗ್ರಾಹಕರಿಗೆ ಎನ್ಎಸ್ ಡಿಎಲ್ ವೆಬ್ ಸೈಟ್ ಕಾಣಿಸುತ್ತದೆ. 
  2. ಪ್ಯಾನ್-ಆಧಾರ್ ಲಿಂಕ್ ವಿನಂತಿಯನ್ನು ಸಲ್ಲಿಸಲು ಅಲ್ಲಿರುವ ಆಯ್ಕೆಗಳ ಪೈಕಿ ಚಲನ್ ನಂ.ITNS 280 ಅಡಿಯಲ್ಲಿ ಮುಂದುವರೆಯಿರಿ. 
  3. ಅಲ್ಲಿ (tax applicable) ಅನ್ವಯವಾಗುವ ತೆರಿಗೆಯನ್ನು ಆಯ್ಕೆ ಮಾಡಿ. ನಂತರ ಒಂದೇ ಚಲನ್‌ನಲ್ಲಿ ಮೇಜರ್ ಹೆಡ್ 0021 (ಕಂಪನಿಗಳನ್ನು ಹೊರತುಪಡಿಸಿ ಆದಾಯ ತೆರಿಗೆ) ಮತ್ತು ಮೈನರ್ ಹೆಡ್ 500 (ಇತರ ರಶೀದಿಗಳು) ಅಡಿಯಲ್ಲಿ ದಂಡ ಪಾವತಿ ಮಾಡಿ 
  4.  ಪೇಮೆಂಟ್ ಮೋಡ್ ನ್ನು ಆಯ್ಕೆ ಮಾಡಿ ವಿವರ ಸಲ್ಲಿಸಿ
  5. ಪ್ಯಾನ್, ವಿಳಾಸ, ಮೌಲ್ಯಮಾಪನ ವರ್ಷವನ್ನು ನಮೂದಿಸಿ 
  6.  ಕ್ಯಾಪ್ಚಾ ನಮೂದಿಸಿ ಪಾವತಿ ಮಾಡಿ. 

ದಂಡ ಪಾವತಿ ಮಾಡಿದ ಬಳಿಕ 4-5 ದಿನಗಳಲ್ಲಿ ಪ್ಯಾನ್- ಆಧಾರ್ ಜೋಡಣೆಗೆ ಮನವಿ ಸಲ್ಲಿಸಿ

ದಂಡ ಪಾವತಿಸಿದ 4-5 ದಿನಗಳ ಬಳಿಕ ಜೋಡಣೆಗೆ ಮಾಡಬೇಕಾದ ಪ್ರಕ್ರಿಯೆ ಹೀಗಿದೆ

  1. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಗೆ ಹೋಗಿ 
  2. ಮುಖ್ಯ ಪುಟದ (home page) ನ ಎಡ ಭಾಗದಲ್ಲಿನ ಕ್ವಿಕ್ ಲಿಂಕ್ಸ್ (Quick Links) ಅಡಿಯಲ್ಲಿ ಕಾಣುವ ಲಿಂಕ್ ಆಧಾರ್ ನ್ನು ಆಯ್ಕೆ ಮಾಡಿ. 
  3. ನಂತರ ಪ್ಯಾನ್ ಹಾಗೂ ಆಧಾರ್ ನಂಬರ್ ನಮೂಬಿಸಿ ವ್ಯಾಲಿಡೇಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ 
  4. ನಿಮ್ಮ ಪಾವತಿ ವಿವರಗಳನ್ನು ದೃಢೀಕರಿಸಲಾಗಿದೆ ಎಂಬ ಸಂದೇಶ ಪರದೆ ಮೇಲೆ ಕಾಣಿಸುತ್ತದೆ. ಮುಂದುವರೆಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ 
  5. ವೆಬ್ ಸೈಟ್ ನಲ್ಲಿ ಕೆಳಲಾಗುವ ವಿವರಗಳನ್ನು ನೀಡಿ, ಲಿಂಕ್ ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡಿ.
  6. ಮೊಬೈಲ್ ನಂಬರ್ ಗೆ ಬಂದಿರುವ ಒಟಿಪಿಯನ್ನು ನಮೂದಿಸಿ
  7. ಪ್ಯಾನ್- ಆಧಾರ್ ಜೋಡಣೆಗೆ ಮನವಿ ಸಲ್ಲಿಕೆ ಯಶಸ್ವಿಯಾಗುತ್ತದೆ.

ತೆರಿಗೆ ಪಾವತಿದಾರರು ಪ್ಯಾನ್ ಕಾರ್ಡ್ ಕೇಂದ್ರಕ್ಕೆ ಭೇಟಿ ನೀಡಿ ನಿರ್ದಿಷ್ಟ ಫಾರ್ಮ್ ತುಂಬಿ, ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನ ಫೋಟೋಕಾಪಿಗಳನ್ನು ಸಲ್ಲಿಕೆ ಮಾಡುವ ಮೂಲಕವೂ ಆಧಾರ್-ಪ್ಯಾನ್ ಜೋಡಣೆ ಮಾಡಬಹುದಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries