HEALTH TIPS

ಏಳು ತಿಂಗಳುಗಳಲ್ಲಿ 375 NGOಗಳ FCRA ಪರವಾನಿಗೆ ಅಸಿಂಧು: ವರದಿ

                  ವದೆಹಲಿ :ಕಳೆದ ಏಳು ತಿಂಗಳುಗಳಲ್ಲಿ 375 ಎನ್ಜಿಒಗಳ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಪರವಾನಿಗೆಗಳನ್ನು ರದ್ದುಗೊಳಿಸಲಾಗಿದೆ, ಅಮಾನತುಗೊಳಿಸಲಾಗಿದೆ, ನವೀಕರಣವನ್ನು ನಿರಾಕರಿಸಲಾಗಿದೆ ಅಥವಾ ಅವಧಿ ಮುಗಿದಿದೆ ಎಂದು ಪರಿಗಣಿಸಲಾಗಿದೆ.

                        ಇವುಗಳಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನೇತೃತ್ವದ ರಾಜೀವ್ ಗಾಂಧಿ ಫೌಂಡೇಷನ್ ಮತ್ತು ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್, ಆಕ್ಸ್ಫಾಮ್ ಇಂಡಿಯಾ ಹಾಗೂ ಸೆಂಟರ್ ಫಾರ್ ಪಾಲಿಸಿ ರೀಸರ್ಚ್ (ಸಿಪಿಆರ್) ಸೇರಿವೆ ಎಂದು thewire.in ವರದಿ ಮಾಡಿದೆ

                   ಮಾಧ್ಯಮ ವರದಿಗಳಂತೆ ವಿದೇಶಿ ಹಣಕಾಸನ್ನು ಸ್ವೀಕರಿಸಲು ಕಡ್ಡಾಯವಾಗಿರುವ FCRA ಕುರಿತ ಕೇಂದ್ರ ಗೃಹ ಸಚಿವಾಲಯದ ಪೋರ್ಟಲ್ 2022,ಆ.12ರಂದು 16,727ರಷ್ಟಿದ್ದ ಸಕ್ರಿಯ FCRA ಪರವಾನಿಗೆಗಳ ಸಂಖ್ಯೆ 2023,ಮಾ.26ಕ್ಕೆ 16,352 ಕ್ಕೆ ಇಳಿದಿದೆ ಎಂದು ಉಲ್ಲೇಖಿಸಿದೆ. ಅಂದರೆ ಕಳೆದ ಏಳು ತಿಂಗಳುಗಳಲ್ಲಿ 375 ಎಫ್ಸಿಆರ್‌ಎ ಪರವಾನಿಗೆಗಳು ಸಿಂಧುತ್ವವನ್ನು ಕಳೆದುಕೊಂಡಿವೆ.

                   ಸಚಿವಾಲಯವು ಗುರುವಾರ ಕೆಲವು ವರ್ಗಗಳ ಎನ್ಜಿಒಗಳಿಗೆ ತಮ್ಮ FCRA ಪರವಾನಿಗೆಗಳ ನವೀಕರಣಕ್ಕೆ ಕಾಲಾವಕಾಶವನ್ನು ಸೆ.30ರವರೆಗೆ ಇನ್ನೂ ಆರು ತಿಂಗಳು ವಿಸ್ತರಿಸಿದೆ.

                    FCRA ಪರವಾನಿಗೆ ನವೀಕರಣ ಅರ್ಜಿಗಳು ಗೃಹ ಸಚಿವಾಲಯದಲ್ಲಿ ಬಾಕಿಯಿರುವ ಮತ್ತು ಐದು ವರ್ಷಗಳ ಮಾನ್ಯತೆ ಅವಧಿ ಮುಗಿಯುವ ಮುನ್ನ ಅರ್ಜಿ ಸಲ್ಲಿಸಿರುವ/ಸಲ್ಲಿಸಲಿರುವ ಎನ್ಜಿಒಗಳು ಇವುಗಳಲ್ಲಿ ಸೇರಿವೆ.

                   ಮಾ.10ಕ್ಕೆ ಇದ್ದಂತೆ 16,383 ಎನ್ಜಿಒಗಳು ಸಕ್ರಿಯ ಎಫ್ಸಿ ಆರ್‌ಎ ಪರವಾನಿಗೆಗಳನ್ನು ಹೊಂದಿವೆ. ಈ ಎನ್ಜಿಒಗಳು 2019-20,2020-21 ಮತ್ತು 2021-22ರಲ್ಲಿ ಅನುಕ್ರಮವಾಗಿ 16,306.04 ಕೋ.ರೂ.,17,058.64 ಕೋ.ರೂ. ಮತ್ತು 22,085.10 ಕೋ.ರೂ.ಗಳ ವಿದೇಶಿ ನಿಧಿಗಳನ್ನು ಸ್ವೀಕರಿಸಿವೆ ಎಂದು ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು ಮಾ.15ರಂದು ರಾಜ್ಯಸಭೆಯಲ್ಲಿ ತಿಳಿಸಿದ್ದರು.

                         ಕೇಂದ್ರ ಗೃಹ ಸಚಿವಾಲಯವು ಐದು ವರ್ಷಗಳ ಅವಧಿಗೆ ಎಫ್ಸಿಆರ್‌ಎ ಪರವಾನಿಗೆಗಳನ್ನು ನೀಡುತ್ತದೆ.

                       ನರೇಂದ್ರ ಮೋದಿ ಸರಕಾರವು 2020ರಲ್ಲಿ FCRAಗೆ ತಿದ್ದುಪಡಿಗಳನ್ನು ತರುವ ಮೂಲಕ ನಿಯಮಗಳನ್ನು ಬಿಗಿಗೊಳಿಸಿತ್ತು. ತಿದ್ದುಪಡಿಗಳ ಬಳಿಕ,ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವ ಎನ್ಜಿಒಗಳ ಎಲ್ಲ ಪದಾಧಿಕಾರಿಗಳು,ನಿರ್ದೇಶಕರು ಅಥವಾ ಪ್ರಮುಖ ಕಾರ್ಯ ನಿರ್ವಾಹಕರ ಆಧಾರ್ ಸಂಖ್ಯೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಸ್ವೀಕರಿಸಲಾದ ಹಣವನ್ನು ಈಗ ದಿಲ್ಲಿಯಲ್ಲಿನ ಎಸ್ಬಿಐ ಶಾಖೆಗಳಲ್ಲಿ ಮಾತ್ರ ಠೇವಣಿಯಿರಿಸಬೇಕಿದೆ.

              ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಎಫ್ಸಿಆರ್‌ಎ ಪರವಾನಿಗೆಗಳನ್ನು ಹೊಂದಿರುವ ಸಂಸ್ಥೆಗಳ ಸಂಖ್ಯೆ ತೀವ್ರವಾಗಿ ಇಳಿಕೆಯಾಗಿದೆ. ಸುಮಾರು 6,000 ಎನ್ಜಿಒಗಳು ತಮ್ಮ ಎಫ್ಸಿಆರ್‌ಎ ಪರವಾನಿಗೆಗಳನ್ನು ಕಳೆದುಕೊಂಡಿವೆ ಎಂದು ಗೃಹ ಸಚಿವಾಲಯವು 2022,ಜ.1ರಂದು ತಿಳಿಸಿತ್ತು. ಅದಕ್ಕೂ ಮುನ್ನ ಡಿಸೆಂಬರ್ 2016ರಲ್ಲಿ ಎಫ್ಸಿಆರ್‌ಎ ಪರವಾನಿಗೆಗಳನ್ನು ಹೊಂದಿದ್ದ ಸುಮಾರು 33,000 ಎನ್ಜಿಒಗಳ ಪೈಕಿ ಸುಮಾರು 20,000 ಎನ್ಜಿಒಗಳ ಪರವಾನಿಗೆಗಳನ್ನು ಕಾಯ್ದೆಯ ಉಲ್ಲಂಘನೆಗಳ ಆರೋಪದಲ್ಲಿ ರದ್ದುಗೊಳಿಸಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries