HEALTH TIPS

ಶೇ 39ರಷ್ಟು ದೇಶಗಳಲ್ಲಿ ಮಾತ್ರ ಲೈಂಗಿಕ ಶಿಕ್ಷಣ ಕುರಿತು ರಾಷ್ಟ್ರೀಯ ನೀತಿ- UNESCO

 

             ನವದೆಹಲಿ: ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಶ್ವದಲ್ಲಿ ಶೇ 20ರಷ್ಟು ದೇಶಗಳು ಮಾತ್ರ ಕಾನೂನುಗಳನ್ನು ಹೊಂದಿದ್ದು, ಶೇ 39ರಷ್ಟು ರಾಷ್ಟ್ರಗಳು ಮಾತ್ರ ರಾಷ್ಟ್ರೀಯ ನೀತಿಯನ್ನು ಹೊಂದಿವೆ ಎಂದು ಯುನೆಸ್ಕೊದ 'ಗ್ಲೋಬಲ್ ಎಜುಕೇಷನ್ ಮಾನಿಟರಿಂಗ್‌'ನ ವರದಿ ತಿಳಿಸಿದೆ.

                  ಲೈಂಗಿಕ ಶಿಕ್ಷಣವು ಶೇ 68 ದೇಶಗಳಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಹಾಗೂ ಶೇ 76ರಷ್ಟು ದೇಶಗಳಲ್ಲಿ ಪ್ರೌಢಶಿಕ್ಷಣದಲ್ಲಿ ಕಡ್ಡಾಯವಾಗಿದೆ ಎಂದೂ ವರದಿ ಹೇಳಿದೆ.

                     ಪ್ರತಿ 10 ದೇಶಗಳ ಪೈಕಿ ಆರಕ್ಕೂ ಹೆಚ್ಚು ದೇಶಗಳಲ್ಲಿ ಹೆಣ್ಣು-ಗಂಡಿನ ಪಾತ್ರಗಳು, ಲೈಂಗಿಕತೆ ಮತ್ತು ಕೌಟುಂಬಿಕ ದೌರ್ಜನ್ಯ ಹಾಗೂ ಲಿಂಗಾಧಾರಿತ ಹಿಂಸೆಯಂತಹ ವಿಷಯಗಳನ್ನು ಶಿಕ್ಷಣದಲ್ಲಿ ಒಳಗೊಳಿಸಲಾಗಿದೆ. ಪ್ರತಿ ಎರಡು ದೇಶಗಳಲ್ಲಿ ಒಂದು ದೇಶದಲ್ಲಿ ಪರಸ್ಪರ ಒಪ್ಪಿಗೆಯ ಪರಿಕಲ್ಪನೆ ಹಾಗೂ ಮೂರನೇ ಎರಡರಷ್ಟು ದೇಶಗಳಲ್ಲಿ ಗರ್ಭನಿರೋಧಕ ಸಮಸ್ಯೆಗಳ ಕುರಿತು ಶಾಲಾ ಪಠ್ಯಕ್ರಮವು ಒಳಗೊಂಡಿದೆ.

               'ಸಮಗ್ರ ಲೈಂಗಿಕ ಶಿಕ್ಷಣವು (ಸಿಎಸ್‌ಇ) ಎನ್ನುವುದು ಪಠ್ಯಕ್ರಮ ಆಧಾರಿತ ಪ್ರಕ್ರಿಯೆಯಾಗಿದ್ದು, ಲೈಂಗಿಕತೆಯ ಅರಿವಿನ, ಭಾವನಾತ್ಮಕ, ದೈಹಿಕ ಮತ್ತು ಸಾಮಾಜಿಕ ಅಂಶಗಳ ಬಗ್ಗೆ ಬೋಧನೆ ಮತ್ತು ಕಲಿಕೆಯನ್ನು ಒಳಗೊಂಡಿದೆ. ಇದು ಮಕ್ಕಳು ಮತ್ತು ಯುವಜನರನ್ನು ಜ್ಞಾನ, ಕೌಶಲ, ವರ್ತನೆಗಳು ಮತ್ತು ಮೌಲ್ಯಗಳೊಂದಿಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. ಅದು ಅವರ ಆರೋಗ್ಯ, ಯೋಗಕ್ಷೇಮ ಮತ್ತು ಘನತೆಯನ್ನು ಅರಿತುಕೊಳ್ಳಲು ಅವರಿಗೆ ಅಧಿಕಾರ ನೀಡುತ್ತದೆ' ಎನ್ನುವ ಅಂಶಗಳನ್ನು ವರದಿಯು ಒಳಗೊಂಡಿದೆ. ‌

             'ಲೈಂಗಿಕತೆಯು ಮಾನವ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಕುರಿತು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಯ ಹಂತದಲ್ಲಿ ಯುವಜನರಿಗೆ ನಿಖರವಾದ ವೈಜ್ಞಾನಿಕ ಜ್ಞಾನವು ದೊರೆಯದಿದ್ದರೆ ಅವರಿಗೆ ಲೈಂಗಿಕತೆಯ ಬಗ್ಗೆ ಗೊಂದಲಮಯವಾದ ಸ್ಥಿತಿ ಉಂಟಾಗಬಹುದು' ಎಂದು ವರದಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries