ಉಪ್ಪಳ: ಯುವ ಕೇಸರಿ ಫ್ರೆಂಡ್ಸ್ ಕ್ಲಬ್ ಶಿವತೀರ್ಥಪದವು ಮುಳಿಂಜ ಇದರ 13ನೇ ವಾರ್ಷಿಕೋತ್ಸವ ಹಾಗೂ ಪುರಸ್ಕಾರ ಪ್ರದಾನ ಸಮಾರಂಭ ಮುಳಿಂಜ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಪರಿಸರದಲ್ಲಿ ಜರಗಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಳಿಂಜ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಹರಿನಾಥ ಭಂಡಾರಿ ವಹಿಸಿದ್ದರು. ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಮುಖ್ಯ ಉಪನ್ಯಾಸಗೈದರು. ಈ ಸಂದರ್ಭದಲ್ಲಿ ತೃಪ್ತಿ.ಯು ಬಲ್ಲಂಗುಡೆಲ್ ಅವರಿಗೆ ಯುವ ಕೇಸರಿ ಕೀರ್ತನಾ ಪುರಸ್ಕಾರ ಹಾಗೂ ಅಜಿತ್ ರಾಜ್. ಕೆ ಶಾರದಾನಗರ ಅವರಿಗೆ ಯುವ ಕೇಸರಿ ಕ್ರೀಡಾ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು. ದೀಕ್ಷಾ ಶೆಟ್ಟಿ ಕೊಂಡೆವೂರು, ಸ್ವಸ್ತಿ ಸುವರ್ಣ ಚುಳ್ಳಿ ಪ್ರಶಸ್ತಿಪತ್ರ ವಾಚನಗೈದರು.
ಉದ್ಯಮಿ ಶಿವರಾಮ ಪಕಳ, ಶುಭ ಶ್ರೀಧರ ಭಂಡಾರಿ ಕಲ್ಲಾಪು,ನಾರಾಯಣ ಚುಳ್ಳಿ, ರಾಜೇಶ್ ಶೆಟ್ಟಿ ಕುಂಟುಪುಣಿ ಸಭೆಯಲ್ಲಿ ಉಪಸ್ಥಿತರಿದ್ದರು. ಶಾನ್ವಿ ಭರತ್ ಉಪ್ಪಳ ವರದಿ ವಾಚಿಸಿದರು. ದಿಶಾ ಭಂಡಾರಿ ಮುಳಿಂಜ ಪ್ರಾರ್ಥನೆ ಹಾಡಿದರು. ವೈಷ್ಣವಿ ಕೆ ಶೆಟ್ಟಿ ಕೊಂಡೆವೂರು ಸ್ವಾಗತಿಸಿ, ಕೃಪಾ ಸನತ್ ಕೊಂಡೆವೂರು ವಂದಿಸಿದರು. ವಂದನ ಭಂಡಾರಿ ನಿರೂಪಿಸಿದರು.
ಯುವ ಕೇಸರಿ ಫ್ರೆಂಡ್ಸ್ ಕ್ಲಬ್ ಶಿವತೀರ್ಥಪದವು 3ನೇ ವಾರ್ಷಿಕೋತ್ಸವ
0
ಮಾರ್ಚ್ 23, 2023
Tags