ಉಪ್ಪಳ: ಉಪ್ಪಳ ಸಮೀಪದ ಪಚ್ಲಂಪಾರೆಯಲ್ಲಿ ಮುಳಿಂಜ ಸರ್ಕಾರಿ ಪ್ರಾಥಮಿಕ ಶಾಲೆಯ 3ನೇ ಕೋರ್ನರ್ ಪಿ.ಟಿ.ಎ ಸಭೆ ನಡೆಯಿತು. ‘ಊರಿನ ಶಾಲೆಯನ್ನು ತಿಳಿಯೋಣ’ ಎಂಬ ಆಶಯದೊಂದಿಗೆ ಸಮಾರಂಭ ಆಯೋಜಿಸಲಾಗಿತಯ್ತು. ಶಾಲಾ ದಾಖಲಾತಿಗೆ ಪೂರಕವಾಗಿ ಶಾಲಾ ಪರಿಸರ ಸಂಘ ಸಂಸ್ಥೆಗಳು, ಪ್ರದೇಶಗಳಿಗೆ ಭೇಟಿ ನೀಡುವುದು ಪ್ರಸ್ತುತ ಶಾಲಾ ಚಟುವಟಿಕೆಗಳು ಶಾಲಾ ಶೈಕ್ಷಣಿಕ ಹಿರಿಮೆಗಳನ್ನು ತಿಳಿಸುವುದರ ಜೊತೆಗೆ ಭೌತಿಕ ಸೌಕರ್ಯಗಳನ್ನು ಜನಸಮಾನ್ಯರಿಗೆ ಮನನ ಮಾಡಿಸಿ ತನ್ಮೂಲಕ ದಾಖಲಾತಿಯನ್ನು ವೃದ್ಧಿಸುವ ಅಭಿಯಾನವಾಗಿದೆ ಕೋರ್ನರ್ ಪಿ.ಟಿ.ಎ.
ಪಚ್ಲಂಪಾರೆಯ ಫ್ರೆಂಡ್ಸ್ ಸ್ಪೋಟ್ರ್ಸ್ ಕ್ಲಬಿನ ಅಧ್ಯಕ್ಷ ಮಾಮು ದರ್ಬಾರ್‍ರ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮವನ್ನು ಯೂಸಫ್ ಪಚ್ಲಂಪಾರೆ ಉದ್ಘಾಟಿಸಿದರು. ಪಚ್ಲಂಪಾರೆಯ ಇಬ್ರಾಹಿಂ ದರ್ಬಾರ್, ಮಾಜಿ ಪಿ.ಟಿ.ಎ ಅಧ್ಯಕ್ಷ ದಿನೇಶ, ಅಪ್ಸ ಟೀಚರ್, ಶಾಲಾ ಎಸ್.ಯಂ.ಸಿ ಅಧ್ಯಕ್ಷ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ರಾವ್ ಚಿಗುರುಪಾದೆ ಸ್ವಾಗತಿಸಿ, ಶಿಕ್ಷಕ ಅಬ್ದುಲ್ ಬಶೀರ್ ವಂದಿಸಿದರು. ಶಿಕ್ಷಕ ರಿಯಾಜ್ ಯಂ.ಎಸ್ ನಿರ್ವಹಿಸಿದರು. ಶಾಲಾ ವಿದ್ಯಾರ್ಥಿಗಳು ಊರಿನವರಿಗೆ ರಸಪ್ರಶ್ನೆಗಳನ್ನು ಕೇಳಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಮಕ್ಕಳ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.
ಪಚ್ಲಂಪಾರೆಯಲ್ಲಿ ಮುಳಿಂಜ ಶಾಲೆಯ 3ನೇ ಕೋರ್ನರ್ ಪಿ.ಟಿ.ಎ ಸಭೆ
0
ಮಾರ್ಚ್ 04, 2023
Tags