ಅಹಮದಾಬಾದ್: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನ ಮೂರನೇ ದಿನದಾಟದ್ಯಂತಕ್ಕೆ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 289 ರನ್ ಪೇರಿಸಿದೆ.
ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 480 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಚಹ ವಿರಾಮದ ವೇಳೆಗೆ 2 ವಿಕೆಟ್ ಕಳೆದುಕೊಂಡು 188 ರನ್ ಪೇರಿಸಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಭಾರತ 289 ರನ್ ಪೇರಿಸಿದೆ. ಭಾರತ ತಂಡ ಇನ್ನೂ ಆಸ್ಟ್ರೇಲಿಯ 191 ರನ್ ಹಿಂದಿದೆ.
ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 35 ರನ್, ಶುಭ್ಮನ್ ಗಿಲ್ 128, ಚೇತೇಶ್ವರ ಪೂಜಾರ 42 ರನ್. ವಿರಾಟ್ ಕೊಹ್ಲಿ 59 ಮತ್ತು ರವೀಂದ್ರ ಜಡೇಜಾ 16 ರನ್ ಗಳಿಸಿ ಆಡುತ್ತಿದ್ದಾರೆ. ಜಡೇಜಾ ಮತ್ತು ಕೊಹ್ಲಿ ನಡುವೆ 44 ರನ್ ಜೊತೆಯಾಟ ನೀಡಿದರು.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿತು. ಉಸ್ಮಾನ್ ಖವಾಜಾ 180 ಮತ್ತು ಕ್ಯಾಮರೂನ್ ಗ್ರೀನ್ 114 ರನ್ ಗಳಿಸಿ ತಂಡವನ್ನು 480 ರನ್‌ಗಳತ್ತ ಕೊಂಡೊಯ್ದರು. ಕೊನೆಯಲ್ಲಿ ಟಾಡ್ ಮರ್ಫಿ ಉಪಯುಕ್ತ 41 ರನ್ ಗಳಿಸಿದರು. ಭಾರತದ ಪರ ರವಿಚಂದ್ರನ್ ಅಶ್ವಿನ್ ಆರು ವಿಕೆಟ್ ಕಬಳಿಸುವ ಮೂಲಕ ಕಾಂಗರೂ ತಂಡದ ಇನ್ನಿಂಗ್ಸ್ ಕಟ್ಟಿದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಕೂಡ ಉತ್ತಮ ಆರಂಭ ನೀಡಿತು.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಡ್ರಾ ಆದರೆ ಟ್ರೋಫಿಯನ್ನು ಭಾರತದ ಎತ್ತಿಹಿಡಿಯಲಿದೆ.