ಉಪ್ಪಳ: ಊರಿನ ಶಾಲೆಯನ್ನು ತಿಳಿಯೋಣ-ಎಂಬ ಆಶಯದೊಂದಿಗೆ ಆರಂಭಗೊಂಡ ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಭಿಯಾನವು ಉಪ್ಪಳದ ರೈಲ್ವೇ ಸ್ಟೇಶನ್ ಬಳಿ ಇತ್ತೀಚೆಗೆ ನಡೆಯಿತು. ಇಂದು ಪ್ರಸ್ತುತ ವರ್ಷದ 4ನೇ ಕೋರ್ನರ್ ಮೀಟಿಂಗ್ ಆಗಿದ್ದು ಶಾಲಾ ಚಟುವಟಿಕೆಗಳನ್ನು ಶಾಲಾ ಹಿರಿಮೆಯನ್ನು ತಿಳಿಸುವುದರ ಜೊತೆಗೆ ಶಾಲಾ ಭೌತಿಕ ಸೌಕರ್ಯಗಳು ಹಾಗೂ ಸಾರ್ವಜನಿಕ ವಿದ್ಯಾಭ್ಯಾಸದಿಂದ ಸಿಗುವ ಸವಲತ್ತುಗಳು ಮತ್ತು ಕಲಿಕಾ ರೀತಿ ರಿವಾಜುಗಳನ್ನು ಜನಸಾಮಾನ್ಯರಿಗೆ ಮನನ ಮಾಡಿಸಿ ತನ್ಮೂಲಕ ವಿದ್ಯಾಸಂಸ್ಥೆಗಳನ್ನು ಉಳಿಸಿ ಬೆಳೆಸುವುದರ ಮೂಲಕ ದಾಖಲಾತಿ ಹೆಚ್ಚಿಸುದೇ ಉದ್ದೇಶವಾಗಿದೆ.
ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ ಇಕ್ಬಾಲ್ ಉದ್ಘಾಟಿಸಿದರು. ಶಾಲಾ ಅಭಿವೃದ್ಧಿಗಾಗಿ ದುಡಿಯುತ್ತಿರುವ ಅಧ್ಯಾಪಕ ವೃಂದವನ್ನು ಶ್ಲಾಘಿಸಿ ಅಭಿವೃದ್ಧಿಯತ್ತ ಸಾಗುತ್ತಿರುವ ಮುಳಿಂಜ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿ ಇನ್ನಷ್ಟು ಸಾಧನೆಗೈಯುವಂತಾಗಲಿ ಎಂದು ಹಾರೈಸಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆಯವರು ಶಾಲೆಯ ಪ್ರಸ್ತುತ ಬೆಳವಣಿಗೆ, ಲಭಿಸಿದ ಅಂಗೀಕಾರಗಳು ಬಹುಮಾನಗಳ ಬಗ್ಗೆ ತಿಳಿಸಿಸುತ್ತಾ ಊರಿನವರ ಸಕ್ರಿಯೆ ಭಾಗವಹಿಸುವಿಕೆ ಬೆಂಬಲದ ಅಗತ್ಯತೆಯನ್ನು ತಿಳಿಸಿದರು. ಎಸ್.ಎಂ.ಸಿ ಸದಸ್ಯ ರಿಯಾಜ್, ಹಿರಿಯ ಶಿಕ್ಷಕಿ ಅಬ್ಸ ಉಪಸ್ಥಿತರಿದ್ದರು. ಶಿಕ್ಷಕ ರಿಯಾಜ್ ಯಂ.ಎಸ್ ಪೆರಿಂಗಡಿ ಸ್ವಾಗತಿಸಿ ಅಬ್ದುಲ್ ಬಶೀರ್ ವಂದಿಸಿದರು. ಶಾಲಾ ವಿದ್ಯಾರ್ಥಿಗಳು ಉರಿನವರಿಗೆ ರಸಪ್ರಶ್ನೆ ಕೇಳಿ ಬಹುಮಾನ ವಿತರಿಸಿದರು. ಹಾಗೆಯೇ ವಿದ್ಯಾರ್ಥಿಗಳು ನೃತ್ಯ ಸ್ಕಿಟ್ ಪ್ರದರ್ಶಿಸಿದರು.
ರೈಲ್ವೇಸ್ಟೇಶನ್ ಸನಿಹ ಮುಳಿಂಜ ಶಾಲೆಯ 4ನೇ ಕೋರ್ನರ್ ಪಿ.ಟಿ.ಎ ಮೀಟಿಂಗ್
0
ಮಾರ್ಚ್ 18, 2023
Tags