ಅಹಮದಾಬಾದ್: ಸಮುದ್ರ ಮಾರ್ಗವಾಗಿ ₹ 425 ಕೋಟಿ ಮೌಲ್ಯದ ಮಾದಕವಸ್ತುವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇರಾನಿ ಪ್ರಜೆಗಳನ್ನು ಭಾರತೀಯ ಕರಾವಳಿ ಪಡೆ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಕರಾವಳಿಯ ಓಖಾದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಅವರಿಂದ ಒಂದು ಹಡಗು ಹಾಗೂ 62 ಕೆ.ಜಿ ಮಾದಕವಸ್ತುವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ ಬಂಧಿತರನ್ನು ಓಖಾ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಕಳೆದ 18 ತಿಂಗಳಿಂದ ₹ 2,355 ಕೋಟಿ ಮೌಲ್ಯದ ಸುಮಾರ 500 ಕೆ.ಜಿ ಮಾದಕವಸ್ತುವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.