ನವದೆಹಲಿ: ಭಾರತದ ಅದಾನಿ ಕಂಪನಿಗಳ ವಿರುದ್ಧ ಅಮೆರಿಕ ಮೂಲದ ಹಿಂಡೆನ್ ಬರ್ಗ್ ವರದಿ ಬಹಿರಂಗಗೊಂಡ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣ ದಿಗ್ಗಜ ಜಾಕ್ ಡೋರ್ಸೆ Block ಕಂಪನಿಗೆ ಸಂಬಂಧಿಸಿದ ವರದಿ ಹೊರಬಿದ್ದ ಕೆಲವೇ ಗಂಟೆಗಳಲ್ಲಿ 526 ಮಿಲಿಯನ್ ಡಾಲರ್(4,300 ಕೋಟಿ) ನಷ್ಟು ಬೃಹತ್ ಮೊತ್ತ ನಷ್ಟ ಕಂಡಿರುವುದಾಗಿ ವರದಿಯಾಗಿದೆ.
ಜಾಕ್ ಡೋರ್ಸೆಯ ಪೇಮೆಂಟ್ ಸರ್ವೀಸ್ ಕಂಪನಿಯಾದ ಬ್ಲಾಕ್ ನಲ್ಲಿ ಹಲವಾರು ಅವ್ಯವಹಾರ ನಡೆದಿರುವುದಾಗಿ ಹಿಂಡೆನ್ ಬರ್ಗ್ ವರದಿ ಬಹಿರಂಗಗೊಂಡ 4,300 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಜಾಕ್ ಸಂಪತ್ತಿನಲ್ಲಿ ಶೇ.11ರಷ್ಟು ಇಳಿಕೆಯಾಗಿರುವುದಾಗಿ ಬ್ಲೂಮ್ ಬರ್ಗ್ ವರದಿ ತಿಳಿಸಿದೆ.
4.4 ಬಿಲಿಯನ್ ಡಾಲರ್ ನಷ್ಟು ಸಂಪತ್ತು ಹೊಂದಿರುವ ಜಾಕ್ ಡೋರ್ಸೆ ಬ್ಲಾಕ್ ಕಂಪನಿಯ ಷೇರುಗಳ ಮೌಲ್ಯ ಶೇ.65ರಿಂದ 75ರಷ್ಟು ಕುಸಿತ ಕಂಡಿತ್ತು. ಏತನ್ಮಧ್ಯೆ ಬ್ಲಾಕ್ ಕಂಪನಿ ಹಿಂಡೆನ್ ಬರ್ಗ್ ವರದಿಯನ್ನು ಅಲ್ಲಗಳೆದಿದ್ದು, ಶಾರ್ಟ್ ಸೆಲ್ಲರ್ ಹಿಂಡೆನ್ ಬರ್ಗ್ ವಿರುದ್ಧ ಕಾನೂನು ಸಮರ ನಡೆಸುವುದಾಗಿ ಹೇಳಿದೆ.
ಜಾಕ್ ಡೋರ್ಸೆ ಟ್ವೀಟರ್ ಸಹ ಸಂಸ್ಥಾಪಕ, ಮಾಜಿ ಸಿಇಒ. ಬ್ಲಾಕ್ ಸಂಸ್ಥೆಯ ಅಧ್ಯಕ್ಷ ಹಾಗೂ ಸ್ಕ್ವೇರ್ ಫೈನಾಶ್ಶಿಯಲ್ ಸರ್ವೀಸ್ ಪ್ಲ್ಯಾಟ್ ಫಾರಂನ ಡೆವಲಪರ್ ಆಗಿದ್ದಾರೆ.