ಕುಂಬಳೆ: ಜಿಲ್ಲೆಯ ಪ್ರಧಾನ ಉದ್ದಿಮೆ ಕ್ಷೇತ್ರದ ಪ್ರಧಾನ ಭೂಮಿಕೆಯಾಗಿರುವ ಅನಂತಪುರದ ಕೈಗಾರಿಕಾ ಕೆಂದ್ರದಿಂದ ಬರುತ್ತಿರುವ ದುರ್ನಾತ ಹಾಗೂ ಗಲೀಜು ನೀರಿನಿಂದಾಗಿ ಕುಂಬಳೆ ಸಮೀಪದ ಕಣ್ಣೂರು ಗ್ರಾಮ ನಿವಾಸಿಗಳ ಬದುಕು ತೀವ್ರ ಕಳವಳಕಾರಿಯಾಗಿದೆ.
ಸಾರ್ವಜನಿಕರಿಗಾಗುವ ಸಮಸ್ಯೆಗಳ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪರಿಹಾರೋಪಾಯಗಳಿಗೆ ಅಧಿಕೃತರು ಈವರೆಗೆ ಮುಂದಾಗಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಕಣ್ಣೂರು ಗ್ರಾಮವೂ ಪಡ್ರೆ-ಸ್ವರ್ಗ ಪ್ರದೇಶದಂತೆ "ಎಂಡೋಸಲ್ಫಾನ್ ಭಾದಿತ ಪ್ರದೇಶದಂತಹ ಮತ್ತೊಂದು ಸಮಸ್ಯೆಯಾಗಬಹುದು". ಆದ್ದರಿಂದ ಅನಂತಪುರ ಉಳಿಸಿ ಕ್ರಿಯಾ ಸಮಿತಿಯ ಆಶ್ರಯದಲ್ಲಿ ದಿನಾಂಕ ಏ.4 ರಂದು ಮಂಗಳವಾರ ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗೆ ಅನಂತಪುರ ಕೈಗಾರಿಕಾ ಕೇಂದ್ರದ ರಸ್ತೆ ತಡೆದು ಸಾರ್ವಜನಿಕ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಪ್ರತಿಭಟನೆಯಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೈಜೋಡಿಸುವ ಮೂಲಕ ಯಶಸ್ವಿಗೊಳಿಸಬೇಕಾಗಿ ಕ್ರಿಯಾ ಸಮಿತಿ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಎಂಡೋ ಸಂತ್ರಸ್ಥ ಗ್ರಾಮಗಳಂತೆ ಅನಂತಪುರ-ಕಣ್ಣೂರು ಗ್ರಾಮಸ್ಥರು ತೀವ್ರ ಸಂಕಷ್ಟದತ್ತ: 4 ರಂದು ಪ್ರತಿಭಟನೆ
0
ಮಾರ್ಚ್ 31, 2023