ಬದಿಯಡ್ಕ: ಕ್ಯಾಂಪ್ಕೋ ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯ ಕುಂಬ್ಡಾಜೆ ಗ್ರಾಮದ ಮೊಹಮ್ಮದ್ ಎಸ್.ಎಮ್. ಅವರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಸಂಸ್ಥೆಯ ವತಿಯಿಂದ ನೀಡುವ ಸದಸ್ಯರ ಆರೋಗ್ಯದತ್ತ ಕ್ಯಾಂಪೆÇ್ಕ ಚಿತ್ತ ಯೋಜನೆಯಡಿಯಲ್ಲಿ 50,000 ರೂಪಾಯಿ ಧನಸಹಾಯವನ್ನು ಹಸ್ತಾಂತರಿಸಲಾಯಿತು.
ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಚೆಕ್ ವಿತರಿಸಿದರು. ಕ್ಯಾಂಪೆÇ್ಕ ನಿರ್ದೇಶಕ ಪದ್ಮರಾಜ ಪಟ್ಟಾಜೆ, ಬದಿಯಡ್ಕ ಪ್ರಾಂತೀಯ ಪ್ರಬಂಧಕ ಗಿರೀಶ್ ಇ, ಶಾಖಾ ಪ್ರಬಂಧಕ ದಿನೇಶ್ ಕುಮಾರ್ ಕೆ, ಸಿಬ್ಬಂದಿ ವರ್ಗದವರು ಮತ್ತು ಇತರ ಬೆಳೆಗಾರ ಸದಸ್ಯರು ಉಪಸ್ಥಿತರಿದ್ದರು.
ಕ್ಯಾಂಪ್ಕೋ ವತಿಯಿಂದ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ 50,000 ಧನಸಹಾಯ
0
ಮಾರ್ಚ್ 18, 2023
Tags