ಕಾಸರಗೋಡು: ಬೇಡಡ್ಕ ಗ್ರಾಮ ಪಂಚಾಯಿತಿಯ ಎರಡನೇ ಹಂತದ 'ಆಡು ಗ್ರಾಮ ಯೋಜನೆ'ಯ ಅಂಗವಾಗಿ ಆಡುಗಳ ವಿತರಣೆ ಕಾರ್ಯಕ್ರಮ ನಡೆಯಿತು. ಕುಂಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹತ್ತು ಮಂದಿ ವಿದ್ಯಾರ್ಥಿಗಳಿಗೆ ಆಡುಗಳನ್ನು ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಧನ್ಯಾ ಆಡುಗಳನ್ನು ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಾಧವನ್ ಅಧ್ಯಕ್ಷತೆ ವಹಿಸಿದ್ದರು. ಪಮಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲತಾ ಗೋಪಿ, ಟಿ. ವರದರಾಜ್, ವತ್ಸಲಾ, ನೂರ್‍ಜಹಾನ್ ರಘುನಾಥನ್, ಶಾಲಾ ಮುಖ್ಯೋಪಾಧ್ಯಾಯ ಹಾಶಿಂ, ಪಶು ವೈದ್ಯೆ ನಿತಿಯಾ ಜಾಯ್, ಲೈವ್ ಸ್ಟಾಕ್ ಇನ್ಸ್ ಪೆಕ್ಟರ್ ಅರುಣ್, ಶ್ರೀಜಾ ಮತ್ತು ಪಿ.ಕೆ.ಗೋಪಾಲನ್ ಉಪಸ್ಥಿತರಿದ್ದರು. ಬೇಡಡ್ಕ ಗ್ರಾಮ ಪಂಚಾಯಿತಿ ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಆಡುಗಳ ಸಾಕಾಣಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಆಡುಗಳ ವಿತರಣೆ ಯೋಜನೆಗಳಲ್ಲಿ ಒಂದಾಗಿದೆ. ಪ್ರಾಣಿ ಕಲ್ಯಾಣ ವಲಯ ಮತ್ತು ಎಲ್ಲಾ ಕುಟುಂಬಗಳಿಗೆಅಗತ್ಯವಿರುವ ಹಾಲು ಉತ್ಪಾದನೆ ಮತ್ತು ಆಡು ಸಾಕಣೆಗಾಗಿ 50ಆಡುಗಳನ್ನು ವಿತರಿಸುವ ಯೋಜನೆಯಾಗಿದೆ.
ಶಾಲೆಯಿಂದ ಆಯ್ಕೆಯಾದ ಯುಪಿ ಶಾಲಾ ವಿದ್ಯಾರ್ಥಿಗೆ ಒಂದು ಹೆಣ್ಣು ಆಡನ್ನು ನೀಡಲಾಗುತ್ತದೆ. ಆಡನ್ನು ಉಡುಗೊರೆಯಾಗಿ ಪಡೆದ ವಿದ್ಯಾರ್ಥಿ, ಆ ಆಡಿನ ಮೊದಲ ಹೆಣ್ಣು ಕರುವನ್ನು ಅದೇ ಶಾಲೆಯ ಆಯ್ಕೆಗೊಳಿಸಿದ ವಿದ್ಯಾರ್ಥಿಗೆ ಉಡುಗೊರೆಯಾಗಿ ನೀಡುವುದು ಯೋಜನೆಯ ಉದ್ದೇಶವಾಗಿದೆ. ಮುನ್ನಾಡ್, ಕುಂಡಂಕುಯಿ ಮತ್ತು ಕೊಳತ್ತೂರಿನ ಶಾಲೆಗಳಲ್ಲಿ 50 ಆಡುಗಳನ್ನು ವಿತರಿಸಲಾಯಿತು. ಶೇ. ನೂರು ಸಬ್ಸಿಡಿಯೊಂದಿಗೆ ಯೋಜನೆ ಜಾರಿಗೊಳಿಸಲಾಗಿದೆ.
'ಆಡು ಗ್ರಾಮ ಯೋಜನೆ' ಬೇಡಡ್ಕ ಪಂಚಾಯಿತಿಯಲ್ಲಿ 50ಆಡುಗಳ ವಿತರಣೆ
0
ಮಾರ್ಚ್ 31, 2023
Tags