ಛತ್ತೀಸ್‌ಗಢ: ಪೊಲೀಸ್ ಅಧಿಕಾರಿ ತಂದೆಯ ಮರಣದ ನಂತರ ಛತ್ತೀಸ್‌ಗಢದಲ್ಲಿ 5 ವರ್ಷದ ನಮನ್ ರಾಜ್‌ವಾಡೆ ಎಂಬ ಬಾಲಕ ಪೊಲೀಸ್ ಕೆಲಸ ಪಡೆದುಕೊಂಡಿದ್ದಾರೆ. ಬಾಲಕನನ್ನು ಮಕ್ಕಳ ಕಾನ್‌ಸ್ಟೆಬಲ್ ಆಗಿ ನಿಯೋಜಿಸಲಾಗಿದೆ.
ಯುಕೆಜಿ ವಿದ್ಯಾರ್ಥಿಯಾಗಿರುವ ನಮನ್ ರಾಜ್‌ವಾಡೆ ಅವರು ಛತ್ತೀಸ್‌ಗಢದ ಸರ್ಗುಜಾದಲ್ಲಿ ಮಕ್ಕಳ ಕಾನ್‌ಸ್ಟೆಬಲ್ ಆಗಿ ನೇಮಕಗೊಂಡಿದ್ದಾರೆ.ಸರ್ಗುಜಾ ಜಿಲ್ಲೆಯ 5 ವರ್ಷದ ನಮನ್ ಇಂದು ಮಕ್ಕಳ ಕಾನ್‌ಸ್ಟೇಬಲ್ ಆಗಿ ನೇಮಕಗೊಂಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಭಾವನಾ ಗುಪ್ತಾ ಅವರು ನಮನ್‌ಗೆ ನೇಮಕಾತಿ ಪತ್ರವನ್ನುನೀಡಿದ್ದಾರೆ.
ಎರಡು ವರ್ಷಗಳ ಹಿಂದೆ 2021 ಸೆಪ್ಟೆಂಬರ್ 3ರಂದು, ನಮನ್ ತಂದೆ ರಾಜ್‌ಕುಮಾರ್ ರಾಜ್‌ವಾಡೆ ಕಾನ್‌ಸ್ಟೇಬಲ್ ಆಗಿದ್ದು, ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಮೃತ ಕಾನ್‌ಸ್ಟೇಬಲ್ ಪತ್ನಿ ಹಾಗೂ ಪುತ್ರ ನಮನ್‌ನನ್ನು ಅಗಲಿದ್ದರು.
ಎಸ್‌ಪಿ ಭಾವನಾ ಗುಪ್ತಾ ಮಾತನಾಡಿ, ನೌಕರರು ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ಅನುಕಂಪದ ನೇಮಕಾತಿಗೆ ಅವಕಾಶವಿದೆ, ಆದರೆ ಮನೆಯಲ್ಲಿ ವಯಸ್ಕ ಸದಸ್ಯರಿಲ್ಲದ ಕಾರಣ 5 ವರ್ಷದ ಮಗನಿಗೆ ಅನುಕಂಪದ ನೇಮಕಾತಿ ನೀಡಲಾಗಿದೆ. ನಮನ್ 18 ವರ್ಷಗಳನ್ನು ಪೂರ್ಣಗೊಳಿಸಿದ ತಕ್ಷಣ ಪೂರ್ಣ ಸ್ಥಾನಮಾನವನ್ನು ಪಡೆಯಲಿದ್ದಾನೆ. ನಿಯಮಾನುಸಾರ ಹಾಜರಾತಿ ಮತ್ತಿತರ ಕೆಲಸಕ್ಕೆ ಬಾಲಕ ಇಲಾಖೆಗೆ ಬರಬೇಕಾಗುತ್ತದೆ ಎಂದಿದ್ದಾರೆ.