ಕಲುಷಿತ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆ ಬರುವುದು. ಮಲೇರಿಯಾ, ಟೈಫಾಯ್ಡ್, ಕಾಲರ ಮುಂತಾದ ಕಾಯಿಲೆಗಳು ಕಲುಷಿತ ನೀರಿನಿಂದಾಗಿ ಹರಡುವುದು. ನೀರನ್ನು ಶುದ್ಧೀಕರಿಸಲು ಕುಡಿಯಲು ಎಷ್ಟೋ ಮನೆಗಳಲ್ಲಿ ಫಿಲ್ಟರ್ ಇರುವುದಿಲ್ಲ.
RO ಫಿಲ್ಟರ್ ನೀರು ಕೂಡ ಕುಡಿಯಲು ಯೋಗ್ಯವಾದ ನೀರಲ್ಲ, ಏಕೆಂದರೆ ಇದರಲ್ಲಿ ಖನಿಜಾಂಶಗಳು ಇರುವುದಿಲ್ಲ. ಕುಡಿಯಲು ಯೋಗ್ಯವಾದ ನೀರೆಂದರೆ ಆ ನೀರು ಕಲುಷಿತವಾಗಿರಬಾರದು, ಯಾವುದೇ ರಾಸಾಯನಿಕಗಳಿರಬಾರದು, ಖನಿಜಾಂಶಗಳಿರಬೇಕು. ಮಾರ್ಚ್ 22ನ್ನು ವಿಶ್ವ ನೀರಿನ ದಿನವನ್ನಾಗಿ ಆಚರಿಸಲಾಗುವುದು.
ಈ ದಿನ ನೀವು ನೀರನ್ನು ಶುದ್ಧೀಕರಿಸಿ, ಕುಡಿಯಲು ಯೋಗ್ಯವಾಗಿರುವಂತೆ ಕುಡಿಯುವುದು ಹೇಗೆ ಎಂದು ನೋಡೋಣ:
1. ಕಾಯಿಸುವುದು
ನೀರನ್ನು ಚೆನ್ನಾಗಿ ಕುದಿಸಿ. ಆಗ ಅದರಲ್ಲಿರುವ ವೈರಸ್‌ಗಳು, ಬ್ಯಾಕ್ಟಿರಿಯಾಗಳು ನಾಶವಾಗುತ್ತದೆ. ನಂತರ ತುಂಬಾ ಚಿಕ್ಕ ರಂಧ್ರದ ಸ್ಟ್ರೈನರ್‌ಗೆ ಒಂದು ಶುದ್ಧ ಬಟ್ಟೆ ಹಾಕಿ ಸೋಸಿ ಆ ನೀರು ಕುಡಿಯಿರಿ.
2. ಕ್ಲೋರಿನ್ ಬಳಸುವುದು
ಇದೊಂದು ತುರ್ತು ಸಂದರ್ಭದಲ್ಲಿ ಬಲಸಲಾಗುವುದು. ನೀರಿಗೆ ಕ್ಲೋರಿನ್ ಹಾಕಿದರೆ ಅದು ನೀರಿನಲ್ಲಿರುವ ವೈರಸ್, ಬ್ಯಾಕ್ಟಿರಿಯಾ ಕೊಲ್ಲುತ್ತದೆ/ ನೀರಿಗೆ ಶೇ. 5ರಷ್ಟು ಕ್ಲೋರಿನ್ ಮಾತ್ರ ಬಳಸಿ.
3. ಅಯೋಡಿಯನ್ ಬಳಸುವುದು
ಅಯೋಡಿಯನ್ ಕೆಂಪು ಕೆಮಿಕಲ್ ಆಗುದ್ದು ಟ್ಯಾಬ್ಲೆಟ್ ರೂಪದಲ್ಲಿ ಸಿಗುವುದು. ಈ ವಿಧಾನ ತುಂಬಾ ಅನಿವಾರ್ಯವಾದಾಗ ಮಾತ್ರ ಬಳಸಿ. ಇದಕ್ಕಿಂತ ಎಲೆಕ್ಟ್ರಿಕ್ ಪ್ಯೂರಿಫೈಯರ್ ಬಳಸುವುದು ಒಳ್ಳೆಯದು.
4. ಸೋಲಾರ್ ಪ್ಯೂರಿಫೈ
ನೀರನ್ನು
ಶುದ್ಧೀಕರಿಸುವ ನೈಸರ್ಗಿಕ ವಿಧಾನದಲ್ಲಿ ಇದೂ ಒಂದಾಗಿದೆ. ನೀರನ್ನು ಬಾಟಲಿನಲ್ಲಿ ತುಂಬಿ
ಅಡ್ಡವಾಗಿ ಬಿಸಿಲಿನಲ್ಲಿಡಿ. ಈ ರೀತಿ ಇಡುವುದರಿಂದ ನೀರಿನಲ್ಲಿರುವ ಬ್ಯಾಕ್ಟಿರಿಯಾ,
ವೈರಸ್ ನಾಶವಾಗುವುದು.
ಒಂದು ಪಾತ್ರೆಯಲ್ಲಿ ನೀರು ತುಂಬಿ ಬಿಸಿಲಿನಲ್ಲಿಟ್ಟರೆ ಆ ನೀರು ಕೂಡ ಶುದ್ಧವಾಗುವುದು.
ಏಕೆಂದರೆ ಸೂರ್ಯನ ಶಾಖಕ್ಕೆ ಅದರಲ್ಲಿರುವ ಬ್ಯಾಕ್ಟಿರಿಯಾ, ವೈರಸ್ ನಾಶವಾಗುವುದು.
5. ಮಣ್ಣಿನ ಮಡಿಕೆ
ಮಣ್ಣಿನ ಮಡಿಕೆ ಬಳಸಿ ನೀರನ್ನು ಶುದ್ಧೀಕರಿಸುವ ವಿಧಾನವನ್ನು ತುಂಬಾ ಹಿಂದಿನಿಂದಲೂ ಬಳಸುತ್ತಿದ್ದೇವೆ. ಮಣ್ಣಿನ ಮಡಿಕೆಯಲ್ಲಿ ನೀರು ಹಾಕಿದರೆ ಮಣ್ಣಿನ ಮಡಿಕೆ ಅದರಲ್ಲಿರುವ ಕಶ್ಮಲಗಳನ್ನು ಹೀರಿಕೊಂಡು ಹೊರ ಬಿಡುತ್ತದೆ. ಆದ್ದರಿಂದ ಮಣ್ಣಿನ ಮಡಿಕೆಯಲ್ಲಿರುವ ನೀರು ಕುಡಿಯಲು ಯೋಗ್ಯವಾಗಿದೆ.
ಇತರ ಮಾಹಿತಿ
ಶುದ್ಧವಾದ ನೀರು ಎಂದರೇನು?
ಶುದ್ಧವಾದ ನೀರೆಂದರೆ ಆ ನೀರಿನಲ್ಲಿ ಯಾವುದೇ ಬ್ಯಾಕ್ಟಿರಿಯಾ, ವೈರಸ್‌ಗಳು ಇರಬಾರದು.
ಯಾವ ನೀರು ಶುದ್ಧವಾಗಿರುತ್ತದೆ
ನದಿ, ಕೊಳ, ಕೆರೆ, ಬಾವಿಯ ನೀರು ಶುದ್ಧವಾಗಿರುತ್ತದೆ.ಕೆರೆ, ನದಿಗಳಿಗೆ ಮನುಷ್ಯ ತ್ಯಾಜ್ಯ ಸೇರಿಸುವುದರಿಂದ ಅವುಗಳು ಕಲುಷಿತವಾಗುತ್ತಿದೆ. ಇಲ್ಲದಿದ್ದರೆ ಇವುಗಳ ನೀರು ತುಂಬಾನೇ ಶುದ್ಧವಾಗಿರುತ್ತದೆ. ಮಣ್ಣು ನೀರನ್ನು ಶುದ್ಧ ಮಾಡುವುದರಿಂದ ಇವುಗಳ ನೀರು ಶುದ್ಧವಾಗಿರುತ್ತದೆ ಅಲ್ಲದೆ ಇವುಗಳಲ್ಲಿ ಸೋಡಿಯಂ, ಕ್ಯಾಲ್ಸಿಯಂ, ಪೊಟಾಷ್ಯಿಯಂ, ಮೆಗ್ನಿಷ್ಯಿಯಂ, ಕ್ಲೋರೈಡ್ ಅಂಶಗಳಿರುತ್ತದೆ. ಇದರಿಂದ ಆರೋಗ್ಯಕ್ಕೂ ಒಳ್ಳೆಯದು.
ಶುದ್ಧ
ನೀರಿನ 5 ಮೂಲಗಳು ಯಾವುವು?
ಕೊಳ, ಕೆರೆ, ಮಳೆನೀರು, ಹಬೆ, ಭೂಮಿಯ ಅಡಿಯಿಂದ ಬರುವ ನೀರು.
ಶುದ್ಧ ನೀರಿನ pH ಎಷ್ಟಿರುತ್ತದೆ?
ಶುದ್ಧ ನೀರಿನ pH ಪ್ರಮಾಣ 7ರಷ್ಟಿರಬೇಕು.