HEALTH TIPS

ಉದ್ಯಮಿ ರಾಮ್‍ಪ್ರಸಾದ್ 60ರ ಅಭಿನಂದನೆ: ದಾಸ ಸಂಕೀರ್ತನೆಗಳ ಗಾಯನ'ಕಾಸರಗೋಡು ಭಜನೋತ್ಸವ'



        ಕಾಸರಗೋಡು: 'ಸಮಾಜಸೇವಕ, ಉದ್ಯಮಿ ರಾಮ್‍ಪ್ರಸಾದ್ ಕಾಸರಗೋಡು 60'ಅಭಿನಂದನಾ ಸಮಿತಿ ಕಾಸರಗೋಡು ವತಿಯಿಂದ ರಾಮ ಪ್ರಸಾದ್ 60ನೇ ಜನ್ಮವರ್ಷಾಚರನೆ ಅಂಗವಗಿ 60 ದಾಸ ಸಂಕೀರ್ತನೆಗಳ ಗಾಯನ'ಕಾಸರಗೋಡು ಭಜನೋತ್ಸವ'ಸಮಾರಂಭ ಸೋಮವಾರ ಕಾಸರಗೋಡು ತಾಳಿಪಡ್ಪು ಉಡುಪಿ ಹೋಟೆಲ್‍ನ ಮಥುರಾ ಸಭಾಂಗಣದಲ್ಲಿ ಜರುಗಿತು.
               ಧಾರ್ಮಿಕ-ಸಾಂಸ್ಕøತಿಕ ಸಂಘಟನ, ಹಿರಿಯ ವೈದ್ಯ  ಡಾ. ಅನಂತ ಕಾಮತ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹುಟ್ಟು ಹಬ್ಬ ಸಮಾರಂಭಕ್ಕೆ ಸಾಮಾಜಿಕ, ಧಾರ್ಮಿಕ ಸ್ಪರ್ಶ ನೀಡುವುದರ ಜತೆಗೆ ಸಮಾಜದಲ್ಲಿ ಅಶಕ್ತರನ್ನು ಗುರುತಿಸಿ ಅವರಿಗೆ ಸಹಾಯ ಒದಗಿಸುವ ಮೂಲಕ ಉದ್ಯಮಿ ರಾಮ್‍ಪ್ರಸಾದ್ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ತಿಳಿಸಿದರು.
            ಕೆ.ಎನ್ ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ದಾಸ ಸಂಕೀರ್ತನಕಾರ, ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ,  ಜಯಾನಂದ ಕುಮಾರ್ ಹೊಸದುರ್ಗ, ನಗರಸಭಾ ಪ್ರತಿಪಕ್ಷ ಮುಖಂಡ ಪಿ.ರಮೇಶ್  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಉದ್ಯಮಿ ರಾಮಪ್ರಸಾದ್ ದಂಪತಿ ಉಪಸ್ಥಿತರಿದ್ದರು. ಈ ಸಂದರ್ಭ ಹಿರಿಯ ಮೃದಂಗ ವಿದ್ವಾನ್, ಶತಾಯುಷಿ ಬಾಬು ರೈ ಕೋಟೆಕ್ಕಾರ್ ಅವರನ್ನು ರಾಮ್‍ಪ್ರಸಾದ್ ಕುಟುಂಬಸ್ಥರು ಗೌರವಿಸಿದರು.
             ಅಶ್ವಿನಿ ಶ್ರೇಯಸ್ ಸ್ವಾಗತಿಸಿದರು. ಗುರುಪ್ರಸಾದ್ ಕೋಟೆಕಣಿ ಕಾರ್ಯಕ್ರಮ ನಿರೂಪಿಸಿದರು. ರೂಪಾಲಕ್ಷ್ಮೀಶ ಭಟ್ ವಂದಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries