HEALTH TIPS

60 ಚದರ ಮೀಟರ್ ವರೆಗಿನ ಮನೆಗಳಿಗೆ ತೆರಿಗೆ ವಿನಾಯ್ತಿ: ಒಂದು ಮನೆಗೆ ಮಾತ್ರ ವಿನಾಯಿತಿ


               ತಿರುವನಂತಪುರಂ: 60 ಚದರ ಮೀಟರ್ (650 ಚದರ ಅಡಿ)ವರೆಗಿನ ಮನೆಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.
              ಈ ಹಿಂದೆ 30 ಚ.ಮೀ.ವರೆಗಿನ ಬಿಪಿಎಲ್ ವಿಭಾಗಗಳಿಗೆ ಮಾತ್ರ ವಿನಾಯಿತಿ ಇತ್ತು. ಒಬ್ಬ ವ್ಯಕ್ತಿಗೆ ಒಂದು ಮನೆಗೆ ವಿನಾಯಿತಿ ನೀಡಲಾಗಿದೆ. ಲೈಫ್ ಮತ್ತು ಪುನರ್ನವಮ್ ಯೋಜನೆಗಳ ಅಡಿಯಲ್ಲಿ ಬಹುಮಹಡಿ ಕಟ್ಟಡಗಳಿಗೆ ವಿನಾಯಿತಿ ನೀಡಲಾಗಿದೆ. ಫ್ಲಾಟ್‍ಗಳು ಮತ್ತು ವಿಲ್ಲಾಗಳಿಗೆ ಯಾವುದೇ ವಿನಾಯಿತಿ ಇರುವುದಿಲ್ಲ. 9ಎಚ್ ನಮೂನೆಯಲ್ಲಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸ್ಥಳೀಯಾಡಳಿತ ಸಚಿವ ಎಂ.ಬಿ.ರಾಜೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
              ಏಪ್ರಿಲ್ 1 ರಿಂದ ಕಟ್ಟಡ ತೆರಿಗೆಯನ್ನು ಶೇ 5 ರಷ್ಟು ಹೆಚ್ಚಿಸಿದಾಗ, ತೆರಿಗೆ ಸೋರಿಕೆಯನ್ನು ತಡೆಗಟ್ಟಲು ಮತ್ತು ಕಟ್ಟಡಕ್ಕೆ ಮಾಡಿದ ಬದಲಾವಣೆಗಳನ್ನು ಕಂಡುಹಿಡಿಯಲು ವ್ಯಾಪಕ ತಪಾಸಣೆಗೆ ಆದೇಶಿಸಲಾಗಿದೆ. ತೆರಿಗೆಯ ಮೌಲ್ಯಮಾಪನದ ನಂತರ ಕಟ್ಟಡದ ನೆಲದ ವಿಸ್ತೀರ್ಣ ಅಥವಾ ಬಳಕೆಯ ಯಾವುದೇ ಬದಲಾವಣೆಯನ್ನು ಒಂದು ತಿಂಗಳೊಳಗೆ ಸ್ಥಳೀಯಾಡಳಿತ ಸಂಸ್ಥೆಯ ಕಾರ್ಯದರ್ಶಿಗೆ ವರದಿ ಮಾಡಬೇಕು. ಇಲ್ಲದಿದ್ದರೆ 1000 ರೂಪಾಯಿ ದಂಡ ಅಥವಾ ಪರಿಷ್ಕøತ ತೆರಿಗೆ, ಯಾವುದು ಹೆಚ್ಚೋ ಅದನ್ನು ವಿಧಿಸಲಾಗುವುದು. ಅಕ್ರಮ ನಿರ್ಮಾಣಕ್ಕೆ ಮೂರು ಪಟ್ಟು ತೆರಿಗೆ ವಿಧಿಸಲಾಗುವುದು. 1500 ಚದರ ಅಡಿವರೆಗಿನ ಮನೆಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಸೇರ್ಪಡೆ ಗೋಡೆ ಅಥವಾ ಗ್ರಿಲ್ ಇಲ್ಲದ ಜಗುಲಿ ಅಥವಾ ಶೆಡ್ ಆಗಿದ್ದರೆ ತೆರಿಗೆ ಇಲ್ಲ. ಶೀಟ್‍ಗಳು ಅಥವಾ ಟೈಲ್ಸ್‍ನಿಂದ ಹೊದಿಸಿದ ಟೆರೇಸ್ಡ್ ರೂಫ್‍ಗೆ ಸಹ ವಿನಾಯಿತಿ ಇದೆ.
            ಮೇ 15 ರ ಮೊದಲು ಸ್ವಯಂಪ್ರೇರಿತವಾಗಿ ತಿಳಿಸಿದರೆ ದಂಡವನ್ನು ಮನ್ನಾ ಮಾಡಲಾಗುತ್ತದೆ. ಜೂನ್ 30ರೊಳಗೆ ತಪಾಸಣೆ ಪೂರ್ಣಗೊಳ್ಳಲಿದೆ. ತಪಾಸಣೆಯ ನಂತರ 30 ದಿನಗಳಲ್ಲಿ ಮಾಲೀಕರಿಗೆ ನೋಟಿಸ್ ನೀಡಲಾಗುವುದು. ಆಕ್ಷೇಪಣೆ ಇದ್ದಲ್ಲಿ 15 ದಿನಗಳೊಳಗೆ ಕಾರ್ಯದರ್ಶಿಗೆ ತಿಳಿಸಬಹುದು. ಆಯಾ ಸ್ಥಳೀಯಾಡಳಿತ ಸಂಸ್ಥೆಯ ಸಮಿತಿ  30 ದಿನಗಳಲ್ಲಿ ಇದನ್ನು ನಿರ್ಧರಿಸಬೇಕು. ಕಟ್ಟಡ ಮಾರಾಟವಾದರೆ 15 ದಿನದೊಳಗೆ ವರದಿ ನೀಡಬೇಕು. ತಪ್ಪಿದಲ್ಲಿ 500 ರೂ. ದಂಡ ಪಾವತಿಸಬೇಕಾಗುತ್ತದೆ ಎಂದವರು ಮಾಹಿತಿ ನೀಡಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries